Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Team Udayavani, Apr 23, 2024, 9:00 PM IST
ಮುದ್ದೇಬಿಹಾಳ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಏ.23ರ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಮುದ್ದೇಬಿಹಾಳ- ನಾಲತವಾಡ ರಸ್ತೆಯ ಹಿರೇಮುರಾಳ ಗ್ರಾಮದ ಬಳಿ ಅಡವಿ ಸೋಮನಾಳ ಕ್ರಾಸ್ ನಲ್ಲಿ ನಡೆದಿದೆ.
ಮೃತನನ್ನು ಆತನ ಬಳಿಯಿರುವ ಆಧಾರ್, ಪ್ಯಾನ್ ಕಾರ್ಡ್ ದಾಖಲೆಯಿಂದ ತಾಳಿಕೋಟೆ ತಾಲೂಕು ಮೂಕಿಹಾಳ ಗ್ರಾಮದ ರಾಜು ಮೂಕಿಹಾಳ (23) ಎಂದು ಗುರುತಿಸಲಾಗಿದೆ.
ಅಪಘಾತದ ರಭಸಕ್ಕೆ ಬಜಾಜ್ ಪಲ್ಸಾರ್ ಬೈಕ್ ಎರಡು ತುಂಡಾಗಿದ್ದು, ಬೈಕ್ ನ ಚೂರುಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಆಗಮಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಯಾವುದೋ ಭಾರಿ ವಾಹನವೇ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.