IPL 2024; ಚಹಲ್ 200 ವಿಕೆಟ್ಗಳ ಕಮಾಲ್; ಈ ಸಾಧನೆಗೈದ ಮೊದಲ ಬೌಲರ್
Team Udayavani, Apr 24, 2024, 7:31 AM IST
ಜೈಪುರ: ಲೆಗ್ಸ್ಪಿನ್ನರ್ ಯಜುವೇಂದ್ರ ಚಹಲ್ ಐಪಿಎಲ್ನಲ್ಲಿ ನೂತನ ಮೈಲುಗಲ್ಲು ನೆಟ್ಟಿದ್ದಾರೆ. 200 ವಿಕೆಟ್ ಉರುಳಿಸಿದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಸೋಮವಾರ ನಡೆದ ಮುಂಬೈ ಎದುರಿನ ಪಂದ್ಯದಲ್ಲಿ ಮೊಹಮ್ಮದ್ ನಬಿ ಅವರನ್ನು ಕಾಟ್ ಆ್ಯಂಡ್ ಬೌಲ್ಡ್ ಮಾಡುವ ಮೂಲಕ ಚಹಲ್ ಈ ಸಾಧನೆಗೈದರು.
ಇದು ಚಹಲ್ ಅವರ 153ನೇ ಪಂದ್ಯದ 152ನೇ ಇನ್ನಿಂಗ್ಸ್. ಡ್ವೇನ್ ಬ್ರಾವೊ 2ನೇ ಸ್ಥಾನದಲ್ಲಿದ್ದಾರೆ (183). ಸಮಕಾಲೀನ ಕ್ರಿಕೆಟಿಗರಲ್ಲಿ ಚಹಲ್ ಬಳಿಕ ಕಾಣಿಸಿಕೊಳ್ಳುವ ಬೌಲಿಂಗ್ ಸಾಧಕ ಪೀಯೂಷ್ ಚಾವ್ಲಾ (182 ವಿಕೆಟ್).
3 ಸೀಸನ್, ಒಂದೇ ಪಂದ್ಯ!
2011ರಲ್ಲಿ ಮುಂಬೈ ಇಂಡಿಯನ್ಸ್ ಸೇರಿಕೊಂಡ ಚಹಲ್ ತಮ್ಮ ಮೊದಲ 3 ಐಪಿಎಲ್ ಸೀಸನ್ಗಳಲ್ಲಿ ಆಡಿದ್ದು ಕೇವಲ ಒಂದು ಪಂದ್ಯ! 2014ರಲ್ಲಿ 10 ಲಕ್ಷ ರೂ. ಮೊತ್ತಕ್ಕೆ ಆರ್ಸಿಬಿ ಪಾಲಾದ ಬಳಿಕ ಇವರ ದೆಸೆ ಬದಲಾಯಿತು. 8 ವರ್ಷಗಳ ಕಾಲ ಬೆಂಗಳೂರು ಫ್ರಾಂಚೈಸಿ ಪರ ಆಡಿ 139 ವಿಕೆಟ್ ಕೆಡವಿದ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯಿಂದಲೇ ಚಹಲ್ ಭಾರತ “ಎ’ ಹಾಗೂ ಟೀಮ್ ಇಂಡಿಯಾ ಪ್ರವೇಶಿಸುವಲ್ಲಿ ಯಶಸ್ವಿಯಾದರು.
ಆರ್ಸಿಬಿಗೆ ಬೇಡವಾದರು
2021ರಲ್ಲಿ ಆರ್ಸಿಬಿ ಪರ 15 ಪಂದ್ಯಗಳಿಂದ 18 ವಿಕೆಟ್ ಕೆಡವಿದರೂ ಚಹಲ್ಗೆ ಲಾಭವಾಗಲಿಲ್ಲ. ಅವರನ್ನು ರಿಲೀಸ್ ಮಾಡುವ ನಿರ್ಧಾರಕ್ಕೆ ಆರ್ಸಿಬಿ ಮುಂದಾಯಿತು. 2022ರ ಮೆಗಾ ಹರಾಜಿನ ವೇಳೆ ಇವರ ಪರ ಬಿಡ್ ಕೂಡ ಕೂಗಲಿಲ್ಲ. ಚಹಲ್ 6.5 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಸೇರಿಕೊಂಡರು. 2022ರಲ್ಲಿ 27 ವಿಕೆಟ್ ಕೆಡವಿ ಆಯ್ಕೆಯನ್ನು ಸಮರ್ಥಿಸಿಕೊಂಡರು. 2023ರಲ್ಲಿ 21 ವಿಕೆಟ್ ಕೆಡವಿದರು. ಈ ಬಾರಿ ಈಗಾಗಲೇ 13 ವಿಕೆಟ್ ಉರುಳಿಸಿದ್ದಾರೆ.
2023ರ ಏಕದಿನ ವಿಶ್ವಕಪ್ ವೇಳೆ ಟೀಮ್ ಇಂಡಿಯಾದಿಂದ ಬೇರ್ಪಟ್ಟ ಚಹಲ್ಗೆ ಐಪಿಎಲ್ ಸಾಧನೆ ಬ್ರೇಕ್ ಒದಗಿಸೀತೇ ಎಂಬುದೊಂದು ನಿರೀಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.