K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

ಮಲ್ಪೆಯಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆ

Team Udayavani, Apr 24, 2024, 12:33 PM IST

1-qwewweq

ಮಲ್ಪೆ: ರಾಷ್ಟ್ರಕ್ಕೆ ಹೆಚ್ಚು ಆದಾಯ ತರುವ ಮೀನುಗಾರಿಕೆಯ ಅಭಿವೃದ್ದಿಯ ಬಗ್ಗೆ ಹೆಚ್ಚಿನ ಅದ್ಯತೆ ನೀಡಲಾಗುವುದು. ಮುಖ್ಯವಾಗಿ ಈ ಭಾಗದ ಮೀನುಗಾರರ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸಲಿಕ್ಕೆ ಆನೇಕ ಯೋಜನೆಗಳನ್ನು ರೂಪಿಸಲಾಗುವುದು. ಜತೆಗೆ ಕಡಲತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಯಾದಾಗ ಅಲ್ಲಿನ ವ್ಯವಸ್ಥೆ , ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ಯಾಗುತ್ತದೆ, ಇದರಿಂದ ಈ ಭಾಗದ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ, ಈ ನಿಟ್ಟಿನಲ್ಲಿ ಆನೇಕ ಯೋಜನೆಗಳನ್ನು ತರಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಭರವಸೆ ನೀಡಿದರು.

ಅವರು ಮಂಗಳವಾರ ಮಲ್ಪೆಯ ಸೀ ವಾಕ್‌-ಕಡಲ ಕಿನಾರೆಯ ಬಳಿ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಾಗೂ ಕರಾವಳಿ ಕಾಂಗ್ರೆಸ್‌-ಮಲ್ಪೆ ಸಹಯೋಗದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ನಾಯಕರ ಹೆಸರಿನಲ್ಲಿ ಮತ ಕೊಟ್ಟರೆ ಕಳೆದ 10 ವರ್ಷ ಕ್ಷೇತ್ರಕ್ಕೆ ಆಗಿರುವ ಅನ್ಯಾಯವೇ ಮರುಕಳಿಸುತ್ತದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಅಧಿಕಾರಿಗಳ ಬೆನ್ನತ್ತಿ ನಿಂತು ಮಾಡಿಸಬೇಕಾಗುತ್ತದೆ. ಕೆಲಸ ಮಾಡುವ ಚಾಕಚಕ್ಯತೆ ಬೇಕಾಗುತ್ತದೆ. ಈ ಬಾರಿ ಕೆಲಸ ಮಾಡುವವರಿಗೆ ಮತ ಕೊಡಿ ಎಂದರು.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಶೋಭಾ ಕರಂದ್ಲಾಜೆ ಕಳೆದ 10 ವರ್ಷ ಈ ಕ್ಷೇತ್ರದ ಸಂಸದರಾಗಿದ್ದು, ಮಾಡಿರುವ ಸಾಧನೆ ಶೂನ್ಯ. ಕಾಂಗ್ರೆಸ್‌ನ ಕೆ. ಜಯಪ್ರಕಾಶ್‌ ಹೆಗ್ಡೆ ಮೀನುಗಾರಿಕಾ ಸಮುದಾಯಕ್ಕೆ ಹೊಸ ಚೇತನ ಕೊಟ್ಟಿದ್ದಾರೆ. ಹೆಗ್ಡೆ ಆಯ್ಕೆಯ ಬಗ್ಗೆ ಯಾವ ಕಾರ್ಯಕರ್ತರಿಗೂ ಅಪಸ್ವರವಿಲ್ಲ ಎಂದರು.
ಕೋಟ ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಅನೇಕ ದಾರ್ಶನಿಕರ ವಿಚಾರವನ್ನು ಪಠ್ಯದಿಂದ ತೆಗೆದಾಗ ತಕರಾರು ಎತ್ತಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅಪಮಾನವಾದ್ದಾಗ ಧ್ವನಿ ಎತ್ತಿಲ್ಲ ಎಂದು ಅಪಾದಿಸಿದ ಅವರು, ಮಲ್ಪೆಯ ಜನತೆ ಮನಸ್ಸು ಮಾಡಿದರೆ ಕೆ. ಜಯಪ್ರಕಾಶ್‌ ಹೆಗ್ಡೆ ಗೆಲ್ಲುವುದು ಖಚಿತ ಎಂದರು.

ಕಾಂಗ್ರೆಸ್‌ ನಾಯಕಿ ತೇಜಸ್ವಿನಿ ಗೌಡ ಮಾತನಾಡಿ ಮೀನುಗಾರಿಕೆ ಸಚಿವರಾಗಿ ಕಡಲತಡಿಯಲ್ಲಿ ಬದುಕು ಸಾಗಿರುವ ಜನರಿಗೆ ಕಡಲಕೊರೆತ ತಡೆಮಾಡುವ ಮೂಲಕ ಮೊದಲು ರಕ್ಷಣೆ ಮಾಡಿದ್ದು ಜಯಪ್ರಕಾಶ್‌ ಹೆಗ್ಡೆ, ರಾಜ್ಯದ ಕರಾವಳಿಯ ಎಲ್ಲ ಬಂದರುಗಳ ಅಭಿವೃದ್ದಿಗೆ ಕಾರಣೀಭೂತರಾದ ಹೆಗ್ಡೆ ಅವರು ತಮ್ಮ ಕುಟುಂಬದ ಅಸ್ತಿಯನ್ನು ಒತ್ತೆ ಇಟ್ಟು ಬ್ರಹ್ಮಾವರದಲ್ಲಿ ಸಕ್ಕರೆ ಕಾರ್ಖನೆಯನ್ನು ಮಾಡುವ ಮೂಲಕ ಜನಕಲ್ಯಾಣಕ್ಕೊಸ್ಕರ ಕ್ರಮವನ್ನು ಕೈಗೊಂಡಿದ್ದಾರೆ ಎಂದರು.ಕೆಪಿಸಿಸಿ ವಕ್ತಾರರಾದ ಸುಧೀರ್‌ ಕುಮಾರ್‌ ಮುರೋಳ್ಳಿ ಮಾತನಾಡಿದರು.

ಜೆ.ಪಿ. ಉಡುಪಿ ಜಿಲ್ಲೆಯ ಸೃಷ್ಟಿಕರ್ತ- ಪ್ರಸಾದ್‌ರಾಜ್‌
ಕಾಂಗ್ರೆಸ್‌ ನಾಯಕ ಪ್ರಸಾದ್‌ರಾಜ್‌ ಕಾಂಚನ್‌ ಮಾತನಾಡಿ, ಉಡುಪಿ ಜಿಲ್ಲೆಯ ಸೃಷ್ಟಿಕರ್ತನಿಗೆ ಈ ಬಾರಿ ಜನರು ಆಶೀರ್ವಾದ ಮಾಡಲಿದ್ದಾರೆ. ಅವಿಭಜಿತ ದ. ಕ. ಜಿಲ್ಲೆಯಲ್ಲಿ ಉಡುಪಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಿದ ಕೀರ್ತಿ ಜಯಪ್ರಕಾಶ್‌ ಹೆಗ್ಡೆಯವರಿಗೆ ಸಲ್ಲುತ್ತದೆ. ಉಡುಪಿ ಜಿಲ್ಲೆ ಆದಾಗಿನಿಂದ ಸರಕಾರದ ಸವಲತ್ತುಗಳು ಜನರ ಮನೆ ಬಾಗಿಲಿಗೆ ಸುಲಭದಲ್ಲಿ ಬರುವಂತೆ ಮುಖ್ಯ ಕಾರಣ ಕರ್ತರಾಗಿದ್ದಾರೆ. ಅವರ ಜನಪರ ಕೆಲಸಕ್ಕೆ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದರು.

ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾಂಗ್ರೆಸ್‌ ನಾಯಕರಾದ ಕಿಶನ್‌ಹೆಗ್ಡೆ ಕೊಳ್ಕೆಬೈಲ್‌, ದಿವಾಕರ ಕುಂದರ್‌, ಕೃಷ್ಣಮೂರ್ತಿ ಆಚಾರ್ಯ, ಪ್ರಖ್ಯಾತ್‌ ಶೆಟ್ಟಿ ಹರೀಶ್‌ ಕಿಣಿ, ಗಣೇಶ್‌ ನೆರ್ಗಿ, ರಮೇಶ್‌ ತಿಂಗಳಾಯ, ಮಹಾಬಲ ಕುಂದರ್‌, ಸಂದ್ಯಾ ತಿಲಕ್‌ರಾಜ್‌, ನವೀನ್‌ಚಂದ್ರ, ಕೇಶವ ಕೋಟ್ಯಾನ್‌, ಮನೋಜ್‌ ಕರ್ಕೇರ ಚಂದ್ರ ಕೊಡವೂರು ಮೊದಲಾದವರು ಉಪಸ್ಥಿತರದ್ದರು. ಎಂ. ಎ. ಗಫೂರ್‌ ಸ್ವಾಗತಿಸಿದರು. ಸತೀಶ್‌ ಕೊಡವೂರು ನಿರೂಪಿಸಿದರು.

ಟಾಪ್ ನ್ಯೂಸ್

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ‘ಸುಲ್ತಾನ್ ಪುರ’… ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ

Udupi: ದಿಶಾಂಕ್ ಆಪ್ ನಲ್ಲಿ ಕಾಣಿಸಿಕೊಂಡ ‘ಸುಲ್ತಾನ್ ಪುರ’… ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ

1-katapady

Katapady: ಲಾರಿಗೆ ಟೂರಿಸ್ಟ್ ವಾಹನ ಢಿಕ್ಕಿ; ಹಲವು ಪ್ರವಾಸಿಗರಿಗೆ ಗಂಭೀರ ಗಾಯ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

arrested

Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್

25-kota

Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.