![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 24, 2024, 6:30 PM IST
ಹೈದರಾಬಾದ್: ಭಾರೀ ನಿರೀಕ್ಷೆ ಹುಟ್ಟಿಸಿ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ವಿಜಯ್ ದೇವರಕೊಂಡ ಅವರ ʼಫ್ಯಾಮಿಲಿ ಸ್ಟಾರ್ʼ ಸಿನಿಮಾ ಓಟಿಟಿ ರಿಲೀಸ್ ಡೇಟ್ ನಿಗದಿಯಾಗಿದೆ.
ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಜೊತೆಯಾಗಿ ಕಾಣಿಸಿಕೊಂಡಿದ್ದ ʼಫ್ಯಾಮಿಲಿ ಸ್ಟಾರ್ʼ ಏ.5 ರಂದು ರಿಲೀಸ್ ಆಗಿತ್ತು. ಆರಂಭದಲ್ಲಿ ನಿರೀಕ್ಷೆ ಹುಟ್ಟಿಸಿದ ಸಿನಿಮಾಕ್ಕೆ ಥಿಯೇಟರ್ ನಲ್ಲಿ ಅಷ್ಟಾಗಿ ರೆಸ್ಪಾನ್ಸ್ ಸಿಕ್ಕಿಲ್ಲ.
50 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಫ್ಯಾಮಿಲಿ ಡ್ರಾಮಾ ಇದುವರೆಗೆ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದು ಕೇವಲ 15 ಕೋಟಿ ರೂ. ಮಾತ್ರ. ಆ ಮೂಲಕ ನಿರ್ಮಾಪಕ ದಿಲ್ ರಾಜು ಅವರಿಗೆ ಭಾರೀ ನಷ್ಟ ಆದಂತಾಗಿದೆ.
ಇದೀಗ ಫ್ಯಾಮಿಲಿ ಸ್ಟಾರ್ ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಇದೇ ಏ.26 ರಿಂದ ಸಿನಿಮಾ ಸ್ಟ್ರೀಮ್ ಆಗಲಿದೆ. ರಿಲೀಸ್ ಆದ 20 ದಿನದಲ್ಲೇ ಸಿನಿಮಾ ಓಟಿಟಿಗೆ ಬರಲಿದೆ.
ಥಿಯೇಟರ್ ನಲ್ಲಿ ಗಮನ ಸೆಳೆಯದ ಚಿತ್ರ ಓಟಿಟಿಯಲ್ಲಿ ಹೇಗೆ ಓಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ʼಫ್ಯಾಮಿಲಿ ಸ್ಟಾರ್ʼ ಸೋಲಿಗೆ ನಿರ್ಮಾಪಕ ದಿಲ್ ರಾಜು ಅವರನ್ನು ಪ್ರೇಕ್ಷಕರು ಟ್ರೋಲ್ ಮಾಡಿದ್ದಾರೆ. ದೇವರಕೊಂಡ ಕೆರಿಯರ್ ಆದ ಮತ್ತೊಂದು ದೊಡ್ಡ ಸೋಲಾಗಿದೆ.
ದೇವರಕೊಂಡ ಮುಂದೆ ಗೌತಮ್ ತಿನ್ನನೂರಿ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.