Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ
Team Udayavani, Apr 25, 2024, 1:12 AM IST
ಪೆರ್ಲ: ಪತ್ನಿಯನ್ನು ಬೆಡ್ ರೂಂನೊಳಗೆ ಕೂಡಿ ಹಾಕಿದ ಬಳಿಕ ಪತಿ ಮನೆಯ ವರಾಂಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮುಳ್ಳೇರಿಯದ ಸ್ಟುಡಿಯೋವೊಂದರ ಫೋಟೊಗ್ರಾಫರ್ ಆಗಿದ್ದ ಪೆರ್ಲ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಬಳಿಯ ಕಾರ್ಯಾಡು ನಿವಾಸಿ ಕೆ. ಪ್ರವೀಣ್(22) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎ. 23ರ ರಾತ್ರಿ 12 ಗಂಟೆಗೆ ಘಟನೆ ನಡೆದಿದೆ. ಪ್ರವೀಣ್ ಹಾಗೂ ಮನೆಯವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ತೆರಳಿದ್ದರು. ಆದರೆ ಪ್ರವೀಣ್ ಅವರ ಪತ್ನಿ ಪೂಜೆಗೆ ಹೋಗಿರಲಿಲ್ಲ. ಪೂಜೆ ನಡೆಯುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ತಿಳಿಸಿ ಪ್ರವೀಣ್ ಮನೆಗೆ ಹೋಗಿದ್ದರು. ಆದರೆ ಅವರು ಮರಳಿ ಬಂದಿರಲಿಲ್ಲ.
ಪೂಜೆ ಮುಗಿದು ಮನೆಯವರು ಮರಳಿ ಬಂದಾಗ ಪ್ರವೀಣ್ ಮನೆಯ ವರಾಂಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು. ಪತ್ನಿ ಮಮತಾ ನಿದ್ದೆ ಮಾಡಿದ್ದ ಕೊಠಡಿ ಹೊರಗಿನಿಂದ ಮುಚ್ಚಿದ ಸ್ಥಿತಿಯಲ್ಲಿತ್ತು. ಪ್ರವೀಣ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.