H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Team Udayavani, Apr 26, 2024, 11:32 PM IST
ಮದ್ದೂರು: ಸಂಸದೆ ಸುಮಲತಾ ಅವರ ಮನೆಗೆ ಖುದ್ದು ನಾನೇ ಹೋಗಿ ಚುನಾವಣೆಯಲ್ಲಿ ಸಹಕರಿಸುವಂತೆ ಮನವಿ ಮಾಡಿದ್ದೆ. ಅದಕ್ಕಿಂತ ಹೆಚ್ಚು ಇನ್ನೇನು ಮಾಡಲು ಸಾಧ್ಯ ಎಂದು ಮಂಡ್ಯ ಎನ್‌ಡಿಎ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ನವರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ ಎಂಬ ಸುಮಲತಾ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಸಂಸದೆ ಸುಮಲತಾ ಬೆಂಬಲ ನೀಡಿಲ್ಲ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಸುಮಲತಾ ಅವರ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ದೇವೇಗೌಡರು ಆ ರೀತಿ ಯಾಕೆ ಹೇಳಿದ್ದಾರೆಂಬುದು ಗೊತ್ತಿಲ್ಲ ಎಂದರು. ಅಂಬರೀಶ್ ಅಭಿಮಾನಿಗಳು ಒಳಗೊಂಡಂತೆ ನನಗೆ ಎಲ್ಲರೂ ಸಹಾಯ ಮಾಡಿ ದ್ದಾರೆ. ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ಸಾಧ್ಯವಾದರೆ ಎರಡು ದಿನ ಪ್ರಚಾರಕ್ಕೆ ಬನ್ನಿ ಅಕ್ಕ ಎಂದಿದ್ದೆ. ನಾನು ಸುಮಲತಾ ಅವರನ್ನು ಕರೆದಾಗ ವಿಪಕ್ಷ ನಾಯಕ ಅಶೋಕ್ ಕೂಡ ಮಂಡ್ಯಕ್ಕೆ ಬಂದು ಪ್ರಚಾರ ಮಾಡಿ ಎಂದು ಆಹ್ವಾನಿಸಿದ್ದರೆಂದು ತಿಳಿಸಿದರು.
ಸುಮಲತಾ ಇಂದು ನನಗೆ ಮತ ಕೊಟ್ಟಿದ್ದು, ಗೊಂದಲಗಳಿಗೆ ಯಾರೂ ಪ್ರಚಾರ ಕೊಡುವುದು ಬೇಡ. ಯಾರು ಯಾರ ಬಗ್ಗೆಯೂ ಸಣ್ಣತನದಲ್ಲಿ ಮಾತನಾಡುವುದು ಬೇಡ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದರಿಂದ ರಾಜ್ಯದಲ್ಲಿ ಎನ್‌ಡಿಎ ಹೆಚ್ಚು ಸ್ಥಾನ ಗೆಲ್ಲಲಿದೆ.
– ಎಚ್.ಡಿ.ಕುಮಾರಸ್ವಾಮಿ, ಎನ್‌ಡಿಎ ಮೈತ್ರಿ ಅಭ್ಯರ್ಥಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.