ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
Team Udayavani, Apr 26, 2024, 11:37 PM IST
ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ವೇಳೆ ಕೆಲವೆಡೆ ಹಿಂಸಾಚಾರ ನಡೆದಿದ್ದು, ಬಹುತೇಕ ಕಡೆ ಶಾಂತಿಯುತ ಮತದಾನ ನಡೆದಿದೆ. ಹಲವು ಕಡೆ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ತಡವಾಗಿ ನಡೆದ ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕಾಡೊಳಗೆ ಇರುವ ಗ್ರಾಮ ಇಂಡಿಗನತ್ತದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲವೆಂದು ಗ್ರಾಮ ಸ್ಥರು ಮತದಾನ ಬಹಿಷ್ಕರಿಸಿದ್ದರು. ಗ್ರಾಮಸ್ಥರನ್ನು ಮನವೊಲಿಸಲು ತೆರಳಿದ್ದ ಅಧಿಕಾರಿಗಳು, ಪೊಲೀಸರ ಮೇಲೆ ರೊಚ್ಚಿಗೆದ್ದ ಗ್ರಾಮಸ್ಥರು ಮತಯಂತ್ರ, ವಿವಿ ಪ್ಯಾಟ್, ಮತಗಟ್ಟೆಯ ಬಾಗಿಲು, ಕಿಟಕಿ, ಮೇಜು, ಕುರ್ಚಿ ಇತರ ಪರಿಕರಗಳನ್ನು ಧ್ವಂಸ ಮಾಡಿದ್ದಾರೆ. ಗ್ರಾಮಸ್ಥರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲು ಮುಂದಾದ ಪೊಲೀಸರ ವರ್ತನೆಗೆ ರೊಚ್ಚಿಗೆದ್ದ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಕಲ್ಲುತೂರಾಟ ನಡೆಸಿ, ಡೀಸೆಲ್ ಪೆಟ್ರೋಲ್ ಎರಚಿ ಬೆಂಕಿ ಹಾಕಿದ್ದಾರೆ.
ಕಲ್ಲುತೂರಾಟದಲ್ಲಿ ತಹಶೀಲ್ದಾರ್, ಪೊಲೀಸ್ ಪೇದೆ, ಚುನಾವಣ ಸಿಬಂದಿ ಸಹಿತ ಹಲವರು ಗಾಯಗೊಂಡಿದ್ದಾರೆ. ಇನ್ನೊಬ್ಬ ಪೊಲೀಸ್ ಪೇದೆಗೆ ಮಹಿಳೆಯರು ಕಪಾಳಮೋಕ್ಷ ಮಾಡಿರುವುದಾಗಿ ತಿಳಿದು ಬಂದಿದೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಮತಗಟ್ಟೆ ಬಳಿ ನೆರೆದಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ನಿಗದಿತ ಸ್ಥಳದಿಂದ ಹೊರ ಕಳಿಸಲು ಮುಂದಾದ ಪೊಲೀಸರ ವಿರುದ್ಧ ಸ್ಥಳೀಯರು ಮಾತಿನ ಚಕಮಕಿಗಿಳಿದು, ಕೆಲ ಸಮಯ ಮತಗಟ್ಟೆ ಬಳಿ ಧರಣಿ ನಡೆಸಿದರು.
ಸ್ಥಳಕ್ಕಾಗಮಿ ಸಿದ ವೃತ್ತ ನಿರೀಕ್ಷಕ ವೆಂಕಟೇಗೌಡ ಸ್ಥಳೀಯರನ್ನು ಸಮಾಧಾನಗೊಳಿಸಿ ಧರಣಿ ಕೈಬಿಡಿ ಸಲು ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಕೈಕೊಟ್ಟ ಮತ ಯಂತ್ರ, ಕಂಗಾಲಾದ ಮತದಾರರು ಕೆಲವು ಕಡೆ ಇವಿಎಂ ಯಂತ್ರಗಳಲ್ಲಿ ಸಣ್ಣಪುಟ ದೋಷ ಕಂಡು ಬಂದಿದ್ದು, ತತ್‌ಕ್ಷಣ ಅದನ್ನು ಸೆಕ್ಟರ್ ಅಧಿಕಾರಿಗಳು ಸರಿಪಡಿಸಿ ಸರಿಯಾದ ಸಮಯಕ್ಕೆ ಮತದಾನ ಆರಂಭಿಸಿದರು. ಮಂಡ್ಯ ತಾಲೂಕಿನ ಚಾಮಲಾಪುರ, ಹೊನ್ನೂರು, ಯರ ಗಂಬಳ್ಳಿ ಗ್ರಾಮಗಳಲ್ಲಿ ಮತ ಯಂತ್ರಗಳು ಕೈಕೊಟ್ಟಿ ದ್ದರಿಂದ ಮತದಾರರಲ್ಲಿ ಗೊಂದಲ ಉಂಟಾಯಿತು. ತಾಂತ್ರಿಕ ಸಿಬಂದಿ ಸರಿಪಡಿಸಿದ ಬಳಿಕ ಮತದಾನ ಮಾಡಿದರು.
ರಾತ್ರಿ 7.30ರವರೆಗೂ ಮತದಾನ
ಶ್ರೀರಂಗಪಟ್ಟಣ ತಾಲೂಕಿನ ವಡಿಯಾಂಡಳ್ಳಿ ಗ್ರಾಮದ ಬೂತ್ ನಂ.144ರಲ್ಲಿ ಮತಯಂತ್ರ ಕೆಟ್ಟು, 45 ನಿಮಿಷ ಮತದಾನ ಸ್ಥಗಿತಗೊಂಡಿತು. ಇದರಿಂದ ಮತದಾನ ರಾತ್ರಿ 7.30ರ ವರೆಗೂ ನಡೆಸಲಾಯಿತು. ನೇರಳೆಕೆರೆ ಗ್ರಾಮದಲ್ಲೂ ಮತಯಂತ್ರ ಕೆಟ್ಟು, ಸಂಜೆ 7.30ರ ವರೆಗೆ ಮತದಾನ ನಡೆಸಲಾಯಿತು.
ಹಾಸನದ ಸಂತೇಪಟ್ಟಿಯಲ್ಲಿ ಎರಡು ಬಾರಿ ಇವಿಎಂ ಕೈಕೊಟ್ಟಿದ್ದರಿಂದ ಮತದಾರರು ಬೇಸತ್ತು ಮತ ಹಾಕದೇ ಮರಳಿದರು. ತುಮಕೂರು ಜಿಲ್ಲೆ ತಿಪಟೂರಿನ ಗಾಯತ್ರಿ ನಗರದಲ್ಲಿ ಮತ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಮತದಾನ ತಡವಾಯಿತು. ರಾಮನಗರದ ಬಿಡದಿ ಸಮೀಪದ ಕಲ್ಲುಗೋಪಹಳ್ಳಿಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಅರ್ಧಗಂಟೆಗೂ ಹೆಚ್ಚುಕಾಲ ಮತದಾನ ಸ್ಥಗಿತಗೊಂಡಿತ್ತು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದಲೇ ಆರಂಭ ವಾಗಿದ್ದರೂ ಕೆಲವೆಡೆ ಇವಿಎಂ, ವಿವಿಪ್ಯಾಟ್ ತಾಂತ್ರಿಕ ದೋಷದಿಂದ ಮತದಾನ ಆರಂಭವಾಗುವಲ್ಲಿ ತುಸು ವಿಳಂಬವಾಗಿದೆ.
ಬಿಸಿಲಿನಿಂದ ತಡವಾಗಿ
ಬಂದ ಮತದಾರರು
ಬಹುತೇಕ ಕಡೆ ಬಿಸಿಲಿನಿಂದಾಗಿ ಸಂಜೆಯವರೆಗೆ ಮತದಾನ ಕೇಂದ್ರದತ್ತ ಮತದಾರರು ಮುಖ ಮಾಡಿರಲಿಲ್ಲ. ಹೀಗಾಗಿ ಸಂಜೆ 5 ಗಂಟೆಯ ಬಳಿಕ ಮತದಾನ ಮಾಡಲು ಮುಂದಾಗಿದ್ದರಿಂದ ಮತದಾನ ವಿಳಂಬವಾಗಿದೆ. ಕೆಲ ಮತಗಟ್ಟೆಯಲ್ಲಿ 6 ಗಂಟೆಯಾದರೂ ಮತದಾನ ಮುಗಿಯದೇ, 6 ಗಂಟೆ ನಂತರ ಬಂದ ಮತದಾರರನ್ನು ಸಾಲಿನಲ್ಲಿ ನಿಲ್ಲಿಸಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಬಹುತೇಕ ಕಡೆ ರಾತ್ರಿ 7.30ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.