IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ
Team Udayavani, Apr 27, 2024, 6:20 AM IST
ಹೊಸದಿಲ್ಲಿ: ಕಳೆದ 4 ಪಂದ್ಯಗಳಲ್ಲಿ ಮೂರನ್ನು ಗೆದ್ದು ಚೇತರಿಕೆ ಕಂಡು ಆರಕ್ಕೇರಿರುವ ಡೆಲ್ಲಿ ಕ್ಯಾಪಿಟಲ್ಸ್ ಶನಿವಾರ ತವರಿನ “ಕೋಟ್ಲಾ’ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ. ಪಂತ್ ಪಡೆಗೆ ಇದು ಸೇಡಿನ ಪಂದ್ಯ. “ವಾಂಖೇಡೆ’ಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ ಮುಗ್ಗರಿಸಿತ್ತು.
ಮುಂಬೈ ಕೂಡ 4 ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. ಈ 3 ಜಯಕ್ಕಾಗಿ ಒಟ್ಟು 8 ಪಂದ್ಯಗಳನ್ನಾಡಿದ್ದು, 8ನೇ ಸ್ಥಾನದಲ್ಲಿದೆ. ಪ್ಲೇ ಆಫ್ ರೇಸ್‌ನಲ್ಲಿ ಕಾಣಿಸಿಕೊಳ್ಳಬೇಕಾದರೆ ಮುಂಬೈಗೂ ಗೆಲುವು ಅಗತ್ಯ.
ರಿಷಭ್ ಪಂತ್ ಫಾರ್ಮ್
ನಾಯಕ ರಿಷಭ್ ಪಂತ್ ಅವರ ಬ್ಯಾಟಿಂಗ್ ಫಾರ್ಮ್ ಡೆಲ್ಲಿ ಪಾಲಿಗೊಂದು ಪ್ಲಸ್ ಪಾಯಿಂಟ್. ಅವರು ಪಂದ್ಯದಿಂದ ಪಂದ್ಯಕ್ಕೆ ನೂತನ ಎತ್ತರ ತಲುಪುತ್ತಲೇ ಇದ್ದಾರೆ. ಇದಕ್ಕೆ ಕೋಟ್ಲಾದಲ್ಲೇ ಆಡಲಾದ ಗುಜರಾತ್ ಎದುರಿನ ಕಳೆದ ಪಂದ್ಯವೇ ಅತ್ಯುತ್ತಮ ನಿದರ್ಶನ. ಡೆಲ್ಲಿ 4ಕ್ಕೆ 224 ರನ್ ಪೇರಿಸಿತ್ತು. ಇದರಲ್ಲಿ ಪಂತ್ ಪಾಲು 43 ಎಸೆತಗಳಲ್ಲಿ ಅಜೇಯ 88 ರನ್ (5 ಫೋರ್, 3 ಸಿಕ್ಸರ್). ಭಡ್ತಿ ಪಡೆದು ಬಂದ ಅಕ್ಷರ್ ಪಟೇಲ್, ಟ್ರಿಸ್ಟನ್ ಸ್ಟಬ್ಸ್ ಕೂಡ ಚೇತೋಹಾರಿ ಆಟವಾಡಿದ್ದರು.
ಸಮಸ್ಯೆ ಇರುವುದು ಓಪನಿಂಗ್‌ನಲ್ಲಿ. ಡೇವಿಡ್ ವಾರ್ನರ್ ಬದಲು ಆರಂಭಿಕನಾಗಿ ಇಳಿಯುತ್ತಿರುವ ಜಾಕ್ ಫ್ರೆàಸರ್ ಮೆಕ್‌ಗರ್ಕ್ ಸಿಡಿಯು ತ್ತಿದ್ದರೂ ಪೃಥ್ವಿ ಶಾ ಪರದಾಡುತ್ತಿದ್ದಾರೆ. ಶೈ ಹೋಪ್ ಕೂಡ ಭರವಸೆ ಮೂಡಿ ಸಿಲ್ಲ. ಹೋಪ್ ಬದಲು ವಾರ್ನರ್ ಮರಳುವ ಸಾಧ್ಯತೆ ಇದೆ.
ಕುಲದೀಪ್ ಯಾದವ್-ಅಕ್ಷರ್ ಪಟೇಲ್ ಜೋಡಿಯ ಸ್ಪಿನ್ ಹೊರತು ಪಡಿಸಿದರೆ, ಡೆಲ್ಲಿ ಬೌಲಿಂಗ್ ಅಷ್ಟೇನೂ ಘಾತಕವಲ್ಲ. ನೋರ್ಜೆ ಅವರಂತೂ ಧಾರಾಳಿ ಆಗುತ್ತಿದ್ದಾರೆ. ಮೊನ್ನೆ ಗುಜರಾತ್ 8ಕ್ಕೆ 220 ರನ್ ಬಾರಿಸಿ ಭೀತಿ ಹುಟ್ಟಿಸಿತ್ತು. ಡೆಲ್ಲಿ ಗೆಲುವಿನ ಅಂತರ 4 ರನ್ ಮಾತ್ರ.
ಮುಂಬೈ ಬ್ಯಾಟಿಂಗ್ 50-50
ಮುಂಬೈ ಬ್ಯಾಟಿಂಗ್ ಸರದಿ 50-50 ಫಾರ್ಮ್ನಲ್ಲಿದೆ. ರೋಹಿತ್, ಸೂರ್ಯ, ತಿಲಕ್ ವರ್ಮ ಓಕೆ. ಆದರೆ ಸ್ಥಿರತೆ ಇಲ್ಲ. ಹಾಗೆಯೇ ಟಿಮ್ ಡೇವಿಡ್, ಇಶಾನ್ ಕಿಶನ್, ನಾಯಕ ಹಾರ್ದಿಕ್ ಪಾಂಡ್ಯ ಅವರ ಕೊಡುಗೆ ಏನೂ ಸಾಲದು.
ಮುಂಬೈ ಬೌಲಿಂಗ್ ವಿಭಾಗ ನಿಜಕ್ಕೂ ದುರ್ಬಲ. 13 ವಿಕೆಟ್ ಉರುಳಿಸಿರುವ ಬುಮ್ರಾ ಮಾತ್ರ ಭರವಸೆ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಗೆರಾಲ್ಡ್ ಕೋಟ್ಜಿ, ತುಷಾರ, ನಬಿ ಪ್ರಯತ್ನ ಏನೂ ಸಾಲದು. ಕಳೆದ ಪಂದ್ಯದಲ್ಲಿ ರಾಜಸ್ಥಾನ್ ಒಂದೇ ವಿಕೆಟಿಗೆ 183 ರನ್ ಬಾರಿಸಿ ಗೆದ್ದದ್ದು ಮುಂಬಯಿ ಬೌಲಿಂಗ್ ದೌರ್ಬಲ್ಯದ ಕತೆಯನ್ನು ಹೇಳುತ್ತದೆ!
ಮೊದಲ ಸುತ್ತಿನಲ್ಲಿ…
ಎ. 7ರಂದು “ವಾಂಖೇಡೆ’ ಯಲ್ಲಿ ನಡೆದ ಪಂದ್ಯ ದೊಡ್ಡ ಮೊತ್ತದ ಮೇಲಾಟವಾಗಿತ್ತು. ಮುಂಬೈ 5ಕ್ಕೆ 234 ರನ್ ಪೇರಿಸಿ ದರೆ, ಬೆನ್ನಟ್ಟಿ ಬಂದ ಡೆಲ್ಲಿ 8ಕ್ಕೆ 205 ರನ್ ಗಳಿಸಿತ್ತು. ಮುಂಬೈ ಯಾವುದೇ ಅರ್ಧ ಶತಕದಕ ನೆರವೂ ಇಲ್ಲದೆ ಇನ್ನೂರರ ಗಡಿ ದಾಟಿದ್ದರೆ, ಡೆಲ್ಲಿ ಪರ ಟ್ರಿಸ್ಟನ್ ಸ್ಟಬ್ಸ್ (71) ಮತ್ತು ಪೃಥ್ವಿ ಶಾ (66) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಮಿಚೆಲ್ ಮಾರ್ಷ್ ಬದಲು ಗುಲ್ಬದಿನ್ ನೈಬ್
ಗಾಯಾಳು ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬೇರ್ಪಟ್ಟಿದ್ದು, ಇವರ ಸ್ಥಾನಕ್ಕೆ ಅಫ್ಘಾನಿಸ್ಥಾನದ ಆಲ್‌ರೌಂಡರ್ ಗುಲ್ಬದಿನ್ ನೈಬ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಮೀಡಿಯಂ ಪೇಸ್ ಬೌಲಿಂಗ್ ಆಲ್‌ರೌಂಡರ್ ಆಗಿರುವ ಗುಲ್ಬದಿನ್ ನೈಬ್ ಅಫ್ಘಾನ್ ಪರ 82 ಏಕದಿನ ಹಾಗೂ 62 ಟಿ20 ಪಂದ್ಯಗಳನ್ನಾಡಿದ್ದಾರೆ. 50 ಲಕ್ಷ ರೂ. ಮೂಲ ಬೆಲೆಗೆ ಇವರನ್ನು ಡೆಲ್ಲಿ ಫ್ರಾಂಚೈಸಿ ಖರೀದಿಸಿತು.
ಈ ವರ್ಷಾರಂಭದ ಭಾರತ ಪ್ರವಾಸದ ಟಿ20 ಸರಣಿ ವೇಳೆ ಗುಲ್ಬದಿನ್ ನೈಬ್ ಇಂದೋರ್ ಮತ್ತು ಬೆಂಗಳೂರು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು.
ಮಿಚೆಲ್ ಮಾರ್ಷ್ ಸ್ನಾಯು ಸೆಳೆತಕ್ಕೆ ಸಿಲುಕಿದ್ದು, ಡೆಲ್ಲಿ ಪರ ಮೊದಲ 4 ಪಂದ್ಯಗಳನ್ನಾಡಿದ್ದರು. ಆದರೆ ಪ್ರಭಾವಶಾಲಿ ಪ್ರದರ್ಶವನ್ನೇನೂ ನೀಡಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.