Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
ಆಸ್ತಿ ಮೇಲೆ ಮುಸ್ಲಿಮರಿಗೆ ಹಕ್ಕು: ಸಿಂಗ್ ಮತ್ತೂಂದು ವೀಡಿಯೋ ಉಲ್ಲೇಖಿಸಿ ವಾಗ್ಧಾಳಿ
Team Udayavani, Apr 27, 2024, 6:20 AM IST
ಅರಾರಿಯಾ: ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಡಾ| ಮನಮೋಹನ್ ಸಿಂಗ್ ಹೇಳಿದ್ದಾರೆಂದು ನಾನು ಹೇಳಿದರೆ ಕೆಲವರು ಸಿಟ್ಟಿಗೇಳುತ್ತಿದ್ದಾರೆ. ನಾನು ಅವರಿಗೆ ಸವಾಲು ಹಾಕುತ್ತಿದ್ದೇನೆ. ಸಿಂಗ್ ಆ ರೀತಿ ಹೇಳಿಲ್ಲ ಎಂದು ಸಾಬೀತುಪಡಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬಿಹಾರದ ಅರಾರಿಯಾದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಹಕ್ಕಿದೆ ಎಂದು ಮನಮೋಹನ್ ಸಿಂಗ್ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಶುಕ್ರವಾರ ಕೂಡ ಅವರ ಹಳೆಯ ವೀಡಿಯೋವೊಂದು ಬಹಿರಂಗಗೊಂಡಿದ್ದು, ಅದನ್ನು ಉಲ್ಲೇಖೀಸಿದ ಮೋದಿ, ಹೊಸ ವೀಡಿಯೋದಲ್ಲೂ ಸಿಂಗ್ ಮುಸ್ಲಿಮರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳುವ ಮೂಲಕ ತಾವು ಮಾಡಿದ ಆರೋಪವನ್ನು ಸಮರ್ಥಿಸಿಕೊಂಡರು.
ವೀಡಿಯೋ ಬಹಿರಂಗವಾದ ಬೆನ್ನಲ್ಲೇ ಕೆಲವು ಮಾಧ್ಯಮಗಳು ಸುಮ್ಮನಾಗಿವೆ. ಯಾವುದೇ ಸಂಶೋಧನೆ ಮಾಡದೇ, ಫ್ಯಾಕ್ಟ್ ಚೆಕ್ ಮಾಡದೇ ನನ್ನನ್ನು ಮೀಡಿಯಾ ಹೇಗೆ ಟಾರ್ಗೆಟ್ ಮಾಡಿವೆ ಎಂದು ನಾನು ಬಲ್ಲೆ ಎಂದು ಪ್ರಧಾನಿ ಮೋದಿ ಹೇಳಿದರು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದೇ ವೀಡಿಯೋವನ್ನು ಆಧಾರವಾಗಿಟ್ಟು ಕೊಂಡು ಪ್ರಧಾನಿ ವಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.
ಒಬಿಸಿಗಳ ನೋವು ನಂಗೆ ಗೊತ್ತು: ಮೋದಿ
ಕರ್ನಾಟಕದಲ್ಲಿ ಒಬಿಸಿಯವರಿಗೆ ಇದ್ದ ಮೀಸಲಾತಿಯನ್ನು ಕಾಂಗ್ರೆಸ್ ಕಸಿದು, ಮುಸ್ಲಿಮರಿಗೆ ನೀಡಿದೆ. ಇದನ್ನೇ ದೇಶದಲ್ಲಿ ಜಾರಿ ಮಾಡಲು ಹೊರಟಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಜತೆಗೆ ನಾನು ಕೂಡ ಇತರ ಹಿಂದುಳಿದ ವರ್ಗಕ್ಕೆ ಸೇರಿದವನು. ಒಬಿಸಿಯವರ ನೋವು, ಕಷ್ಟಗಳೇನು ಎಂದು ನನಗೆ ಗೊತ್ತು. ಮುಂದಿನ ದಿನಗಳಲ್ಲಿ ಎಸ್‌ಸಿ, ಎಸ್‌ಟಿಗಳ ಮೀಸಲಾತಿಯನ್ನೂ ಅವರು ಕಸಿದುಕೊಳ್ಳಬಹುದು. ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿಯನ್ನು ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಬೇರೆಯವರಿಗೆ ನೀಡಲು ನಾನು ಅವಕಾಶ ನೀಡುವುದಿಲ್ಲ ಎಂದೂ ಮೋದಿ ಹೇಳಿದ್ದಾರೆ.
ಮುಸ್ಲಿಮರಿಗೆ ಪ್ರತ್ಯೇಕ ಕಾನೂನು: ಶಾ
ಭೋಪಾಲ್/ಬೆಮೆತಾರಾ: “ಕಾಂಗ್ರೆಸ್ ಒಬಿಸಿ ವಿರೋಧಿ ಮನಃಸ್ಥಿತಿ ಹೊಂದಿದೆ. ಅವರದ್ದು ಮುಸ್ಲಿಂ ಲೀಗ್ ಅಜೆಂಡಾ. ಆದರೆ ಅವರೇನೇ ಮಾಡಿಕೊಂಡರೂ, ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಮುಟ್ಟಲು ಕೂಡ ನಾವು ಬಿಡುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶುಕ್ರವಾರ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣ ರ್ಯಾಲಿ ನಡೆಸಿ ಮಾತನಾಡಿದ ಅವರು, “ಅಲ್ಪಸಂಖ್ಯಾಕರಿಗೆಂದೇ ಕಾಂಗ್ರೆಸ್ ಪ್ರತ್ಯೇಕ ಕಾನೂನು ರಚಿಸಲಿದೆ. ಈ ದೇಶವು ಶರಿಯಾ ಕಾನೂನಿನಡಿ ಬರಬೇಕೆಂದು ನೀವು ಬಯಸುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಜಾರಿಗೊಳಿಸಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.