Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Team Udayavani, Apr 27, 2024, 6:55 AM IST
ಹೊಸದಿಲ್ಲಿ: ಗೂಗಲ್ ಮತ್ತು ಯೂಟ್ಯೂಬ್ನಲ್ಲಿ ರಾಜಕೀಯ ಜಾಹೀರಾತಿಗಾಗಿ ಬಿಜೆಪಿಯು 2018ರಿಂದ ಈವರೆಗೆ ಬರೋಬ್ಬರಿ 101 ಕೋಟಿ ರೂ. ಖರ್ಚು ಮಾಡಿದೆ. ಈ ಮೂಲಕ ಡಿಜಿಟಲ್ ಪ್ರಚಾರಕ್ಕಾಗಿ ದೇಶದಲ್ಲಿ ಅತೀ ಹೆಚ್ಚು ವೆಚ್ಚ ಮಾಡಿದ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದೆ.
ಗೂಗಲ್ ಆ್ಯಡ್ಸ್ ಟ್ರಾನ್ಸ್ಫರೆನ್ಸಿ ವರದಿ ಪ್ರಕಾರ, 2018ರ ಮೇ 31ರಿಂದ 2024ರ ಎ.25ರ ವರೆಗೆ ಡಿಜಿಟಲ್ ಪ್ರಚಾರಕ್ಕಾಗಿ ಬಿಜೆಪಿ 101 ಕೋಟಿ ರೂ. ಖರ್ಚು ಮಾಡಿದ್ದು, ಇದು ಕಾಂಗ್ರೆಸ್, ಡಿಎಂಕೆ ಮತ್ತು ಇಂಡಿಯನ್ ಪೊಲಿಟಿ ಕಲ್ ಆ್ಯಕ್ಷನ್ ಕಮಿಟಿ(ಐ-ಪ್ಯಾಕ್) ಮೂರರ ಒಟ್ಟು ವೆಚ್ಚಕ್ಕೆ ಸಮನಾಗಿದೆ.
ಈ ಅವಧಿಯಲ್ಲಿ ಗೂಗಲ್ಗೆ ರಾಜಕೀಯ ಜಾಹೀರಾತುಗಳ ಮೂಲಕ 390 ಕೋಟಿ ರೂ. ಆದಾಯ ಬಂದಿದೆ. ಇದರಲ್ಲಿ ಶೇ.26ರಷ್ಟು ಪಾಲು ಬಿಜೆಪಿ ಯದು. ಬಿಜೆಪಿ ಡಿಜಿಟಲ್ ಜಾಹೀರಾತಿ ಗಾಗಿ ಕರ್ನಾಟಕಕ್ಕೆ ಅತೀ ಹೆಚ್ಚು 10.8 ಕೋಟಿ ರೂ. ವೆಚ್ಚ ಮಾಡಿದೆ. ಇದರ ಬಳಿಕದ ಸ್ಥಾನದಲ್ಲಿ ಉ.ಪ್ರದೇಶ (10.3 ಕೋಟಿ ರೂ.), ರಾಜಸ್ಥಾನ(8.5 ಕೋಟಿ ರೂ.), ದಿಲ್ಲಿ(7.6 ಕೋಟಿ ರೂ.) ಇದೆ ಇತ್ತ ಡಿಜಿಟಲ್ ಜಾಹೀರಾತಿಗಾಗಿ ಕಾಂಗ್ರೆಸ್ 45 ಕೋಟಿ ರೂ. ಡಿಎಂಕೆ 42 ಕೋಟಿ ರೂ. ವೆಚ್ಚ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.