Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Team Udayavani, Apr 27, 2024, 7:27 AM IST
ಮೇಷ: ಆರೋಗ್ಯ ಸ್ಥಿರ. ಉದ್ಯೋಗಸ್ಥರು ವ್ಯವಹಾರಸ್ಥರಿಗೆ ಉನ್ನತಿಯ ಕಾಲ. ಹಲವು ಕಾಲದಿಂದ ಬಾಧಿಸುತ್ತಿದ್ದ ಜಟಿಲ ಸಮಸ್ಯೆಗೆ ಪರಿಹಾರ. ಶುಭ ಕಾರ್ಯಕ್ಕೊದಗಿದ ವಿಘ್ನ ದೂರ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಆನಂದದ ದಿನ.
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ. ಗುರುಸಮಾನರ ಅಕಸ್ಮಾತ್ ಭೇಟಿ. ಸಂಗಾತಿಯ ಮನೋಗತವನ್ನು ಗೌರವಿಸಿ ನಡೆದುಕೊಂಡರೆ ಕ್ಷೇಮ. ಮಕ್ಕಳ ಮುಂದಿನ ಶಿಕ್ಷಣಕ್ಕೆ ಯೋಜನೆ.
ಮಿಥುನ: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ. ಶುಭ ಕಾರ್ಯ ನಡೆಸುವ ಬಗ್ಗೆ ಚಿಂತನೆ. ಜೀವನದಲ್ಲಿ ಹಿರಿಯರ ಆರೋಗ್ಯದತ್ತ ಗಮನವಿರಲಿ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ ನಿರೀಕ್ಷೆ.
ಕರ್ಕಾಟಕ: ನಾಮಸ್ಮರಣೆಯ ಮೂಲಕ ಖನ್ನತೆ ಯನ್ನು ತೊಲಗಿಸಿ. ಉದ್ಯೋಗ, ವ್ಯವಹಾರ ದಲ್ಲಿ ಯಶಸ್ಸಿನತ್ತ ದಾಪುಗಾಲು. ವೈವಾಹಿಕ ಜೀವನದಲ್ಲಿ ಸಂತೃಪ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ.
ಸಿಂಹ: ಕಾರ್ಯತತ್ಪರರಿಗೆ ಶ್ಲಾಘನೆ. ಹೊಸ ಅವಕಾಶ ಅನ್ವೇಷಣೆ. ಗೆಳೆಯರಿಂದ ಸಹಕಾರ. ಅನಿರೀಕ್ಷಿತ ಧನಾಗಮ. ಗುರುಹಿರಿಯರ ಮಾರ್ಗದರ್ಶನದಿಂದ ಕಾರ್ಯ ಯಶಸ್ವಿ. ವ್ಯವಹಾರದ ಸಂಬಂಧ ಉತ್ತರಕ್ಕೆ ಪ್ರಯಾಣ.
ಕನ್ಯಾ: ಆವಶ್ಯಕತೆಗೆ ಸರಿಯಾಗಿ ಧನಾಗಮ. ದೂರದಿಂದ ಶುಭವಾರ್ತೆ. ವಾಹನ ಖರೀದಿ ಯೋಜನೆ ಮುನ್ನಡೆ.ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ. ಹಿರಿಯರ ಮತ್ತು ಗೃಹಿಣಿಯರ ಆರೋಗ್ಯ ಗಮನಿಸಿ.
ತುಲಾ: ಚಿತ್ತ ಚಾಂಚಲ್ಯಕ್ಕೆ ಎಡೆಗೊಡದಿರಿ. ಪತಿ- ಪತ್ನಿಯರೊಳಗೆ ಪರಸ್ಪರ ಸಹಕಾರ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ. ಗುರುಹಿರಿಯರ ಮಾರ್ಗದರ್ಶನ ಲಭ್ಯ. ಮಕ್ಕಳಿಂದ ಮನೆಯಲ್ಲಿ ಸಂತಸ. ಆರೋಗ್ಯ ಸ್ಥಿರ.
ವೃಶ್ಚಿಕ: ಸತ್ಕರ್ಮಗಳ ಫಲ ಲಭಿಸುವ ಸಮಯ. ಹಿರಿಯರಿಗೆ ಆರೋಗ್ಯ ಉತ್ತಮ. ತಾಳ್ಮೆಯಿಂದ ಕಾರ್ಯದಲ್ಲಿ ಯಶಸ್ಸು. ಪಶ್ಚಿಮ ದಿಕ್ಕಿಗೆ ಪಯಣ ಸಂಭವ. ಗೃಹಿಣಿಯರಿಗೆ, ಮಕ್ಕಳಿಗೆ ಶುಭ. ಹೊಸ ಸ್ಥಿರಾಸ್ತಿ ಖರೀದಿಗೆ ಒಲವು.
ಧನು: ಸಮಾಧಾನದ ವರ್ತನೆಯಿಂದ ಸಕಲ ಕಾರ್ಯಸಿದ್ಧಿ. ವಸ್ತ್ರೋದ್ಯಮಿಗಳಿಗೆ ಲಾಭ. ಉದ್ಯೋಗಸ್ಥರಿಗೆ ಮಂದ ಗತಿಯಲ್ಲಿ ಮುನ್ನಡೆ. ವಿವಾಹ ಮಾತುಕತೆ ಯಶಸ್ವಿ. ಮಕ್ಕಳ ವಿದ್ಯಾಭ್ಯಾಸ ಮುಂದುವರಿಕೆಗೆ ಯೋಜನೆ.
ಮಕರ: ಅಭಿಪ್ರಾಯ ವ್ಯಕ್ತಪಡಿಸಲು ಆತುರ ಬೇಡ. ಉದ್ಯೋಗ, ವ್ಯವಹಾರ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ದೇವತಾರ್ಚನೆಯಲ್ಲಿ ಆಸಕ್ತಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಶುಭ.
ಕುಂಭ: ಸೇವಾ ಕಾರ್ಯಗಳಲ್ಲಿ ಆಸಕ್ತಿ ಉದ್ಯೋಗಸ್ಥರಿಗೆ ಹುದ್ದೆಯಲ್ಲಿ ಪದೋನ್ನತಿ ಸಂಭವ. ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ ಅನು ಕೂಲದ ವಾತಾವರಣ. ಹಿರಿಯರಿಗೆ, ಮಕ್ಕಳಿಗೆ ಸಂತಸದ ವಾತಾವರಣ.
ಮೀನ: ದೂರದ ಸ್ಥಳಕ್ಕೆ ಭೇಟಿ ಸಂಭವ. ಹೊಸ ಕಾರ್ಯಾರಂಭಕ್ಕೆ ವಿಘ್ನ. ಹಳೆಯ ವಿವಾದ ಪರಿಹಾರ. ಕೃಷ್ಯುತ್ಪನ್ನಗಳಿಂದ ಲಾಭ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಸ್ಥಿರ. ಸರಕಾರಿ ಅಧಿಕಾರಿಗಳಿಂದ ಸಹಾಯದ ಭರವಸೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.