Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

ನಿಮ್ಮಂಥವರನ್ನೆಲ್ಲ ಗುರು ಅಂತ ಕರೆಯೋದರಿಂದಲೇ ಝೆನ್‌ ಹಾಳಾಗ್ತಿರೋದು

Team Udayavani, Apr 27, 2024, 1:40 PM IST

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

ಯಮಒಕಾ ತೆಶ್ಶು ಎಂಬ ಯುವಕನಿಗೆ ಓರ್ವ ಉತ್ತಮ ಝೆನ್‌ ಗರುಗಳಿಂದ ಮಹತ್ತರವಾದ ವಿದ್ಯೆಯನ್ನು ಕಲಿಯಬೇಕು ಎಂಬ ಹಂಬಲ. ತಾನು ಎಲ್ಲವನ್ನೂ ತಿಳಿದಿದ್ದೇನೆ. ತಾನು ತಿಳಿದಿರುವುದಕ್ಕಿಂತ ಹೆಚ್ಚಿನದ್ದನ್ನು ಕಲಿಸುವ ಗುರುಗಳಿಗಾಗಿ ಆತ ಹುಡುಕಾಡುತ್ತಿದ್ದನು. ಅದಕ್ಕಾಗಿ ಆತ ಬೇರೆ ಬೇರೆ ಝೆನ್‌ ಗುರುಗಳ ಬಳಿಗೆ ಅಲೆದಾಡುತ್ತಾ ಶೊಕೋಕು ಎಂಬಲ್ಲಿ ನೆಲಿಸಿದ್ದ ಡುಕುಒನ್‌ ಎಂಬ ಝೆನ್‌ ಗುರುಗಳ ಆಶ್ರಮದ ಬಳಿ ಬಂದನು. ಚುಟ್ಟಾ ಸೇದುತ್ತ ಕುಳಿತಿದ್ದ ಗುರು, “ನಿನಗೇನಾಗಬೇಕು ? ಎಂದು ಆತನಲ್ಲಿ ಕೇಳಿದರು.

ಆಗ ತನ್ನ ಪಾಂಡಿತ್ಯ ಪ್ರದರ್ಶನ ಆರಂಭಿಸಿದ ಯುವಕ, “ಮನಸ್ಸು, ಜ್ಞಾನೋದಯ, ಭ್ರಮೆ ಎಂಬುದಿಲ್ಲ, ಬುದ್ಧ, ಸಂತ, ಪಾಪಿ ಎಂಬುವವನಿಲ್ಲ. ಅವುಗಳೆಲ್ಲವೂ ಶೂನ್ಯ ಎಂದೆಲ್ಲ ವಿವರಿಸಿದನು. ಚುಟ್ಟಾದ ಹೊಗೆ ಹೀರುತ್ತಾ ಕುಳಿತಿದ್ದ ಗುರು ಡುಕುಒನ್‌ ಥಟ್ಟನೆ ಹೊಗೆಯನ್ನು ಯುವಕನ ಮುಖದ ಮೇಲೆ ಬಿಟ್ಟ. ಯಮಒಕಾ ಇದರಿಂದ ಸಿಟ್ಟು ಬಂತು.”ನೀವೆಂಥಾ ಗುರು? ನಿಮ್ಮಂಥವರನ್ನೆಲ್ಲ ಗುರು ಅಂತ ಕರೆಯೋದರಿಂದಲೇ ಝೆನ್‌ ಹಾಳಾಗ್ತಿರೋದು…’ ಎಂದೆಲ್ಲ ರೇಗಾಡಿದ.

ಆಗ ಗುರುಗಳು, “ಅದಿಲ್ಲ, ಇದಿಲ್ಲ. ಎಲ್ಲವೂ ಶೂನ್ಯ ಅಂದ ಮೇಲೆ ನಿನಗೆ ಈ ಸಿಟ್ಟು ಎಲ್ಲಿಂದ ಬಂತು ?’ ಎಂದು ಕೇಳಿದರು. ತತ್‌ಕ್ಷಣ ತನ್ನ ತಪ್ಪಿನ ಅರಿವಾಗಿ ಯಮಒಕಾ ತನ್ನ ಬಟ್ಟೆಯ ಚೀಲವನ್ನು ಆಶ್ರಮದ ಒಳಗಿಟ್ಟು. ಅಲ್ಲಿನ ಕೆಲಸದಲ್ಲಿ ತೊಡಗಿದನು.

ಇನ್ನೊಂದಿ ಕಥೆಯಲ್ಲಿ ಇನ್ನೊಬ್ಬ ವಿದ್ಯಾರ್ಥಿಗೆ ಜಪಾನಿಗಳು ತಯಾರಿಸುವ ಚಾಹ ಕುಡಿಯುವ ಕಪ್‌ಗ್ಳನ್ನು ಕಂಡುಬಹಳ ಆಶ್ಚರ್ಯವಾಯಿತು. ಅವರು ಅಷ್ಟು ನಾಜೂಕಾದ, ತೆಳ್ಳಗಿನ ಕಪ್‌ಗಳನ್ನು ಯಾಕೆ ತಯಾರಿಸುತ್ತಾರೆ ? ಅವುಗಳು ಒಡೆದು ಹೋಗುವ ಅಪಾಯ ಹೆಚ್ಚು ಅಲ್ಲವೇ ಎಂಬ ಪ್ರಶ್ನೆ ಆತನನ್ನು ಕಾಡುತ್ತಿತ್ತು. ಒಂದು ದಿನ ತನ್ನ ಗುರುಗಳ ಬಳಿ ತನ್ನ ಸಂದೇಹದ ಬಗ್ಗೆ ಭಿನ್ನವಿಸಿಕೊಂಡನು. ಆಗ ಗುರುಗಳು, ಅದು ಕಪ್‌ ಬಳಕೆದಾರರಿಗೆ ಒಂದು ಪಾಠವಿ ದ್ದಂತೆ. ಕಪ್‌ ಅನ್ನು ಬಹಳ ಎಚ್ಚರಿಕೆಯಿಂದ ಅದಕ್ಕೆ ಹಾನಿ ಯಾಗ ದಂತೆ ಬಳಸುವಂತಾಗಬೇಕು ಹಾಗೂ ಯಾವು ದೊಂದು ಕೆಲಸ ಮಾಡುತ್ತೇವೆಯೋ ಅದರತ್ತ ನಮ್ಮ ಗಮನ ಕೇಂದ್ರೀಕರಿಸು ವಂತಾಗಬೇಕು. ಅಲ್ಲದೆ ಕಪ್‌ ತೆಳ್ಳಗಿದ್ದರೆ ಹಗುರವಾಗಿರುತ್ತದೆ.

ನಾಜೂಕಾಗಿರುವುದರಿಂದ ಆಕರ್ಷಕವಾಗಿ ಕಾಣುತ್ತದೆ. ಹಾಗೇ ಕಪ್‌ ತಯಾರಿಸಿದ ವ್ಯಕ್ತಿಯ ವೃತ್ತಿ ಪರಿಣತಿಯನ್ನು ಸೂಚಿಸುತ್ತದೆ ಎಂಬುದು ಜಪಾನಿಗಳ ಚಿಂತನೆ ಎಂದು ವಿವರಿಸಿದರು. ಯಾರೇ ಆಗಲಿ, ಕಲಿಯುವ ಮನಸ್ಸು ಮತ್ತು ತಾಳ್ಮೆ ಅತೀ ಅಗತ್ಯ. ಆಗ ಮಾತ್ರ ಸಾಧನೆಗೈಯಲು ಸಾಧ್ಯ. ನಾನು ಬಹಳಷ್ಟು ಕಲಿತಿದ್ದೇನೆ ಎಂಬ ಹುಂಬುತನ ಬಿಟ್ಟು, ಕಲಿಯುವುದು ಬಹಳಷ್ಟಿದೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು.

ಟಾಪ್ ನ್ಯೂಸ್

Punchalakatte ಕಾಜಲ-ಬೆಂಚಿನಡ್ಕ ಕಾಲ್ನಡಿಗೆಯಲ್ಲೇ ಮೃತದೇಹ ಸಾಗಾಟ

Punchalakatte ಕಾಜಲ-ಬೆಂಚಿನಡ್ಕ ಕಾಲ್ನಡಿಗೆಯಲ್ಲೇ ಮೃತದೇಹ ಸಾಗಾಟ

Smriti Singh: ಸುಮ್ಮನೆ ಸಾಯಲ್ಲ… ಯೋಧನ ಪತ್ನಿಯ ವೀಡಿಯೋ ವೈರಲ್‌!

Smriti Singh: ಸುಮ್ಮನೆ ಸಾಯಲ್ಲ… ಯೋಧನ ಪತ್ನಿಯ ವೀಡಿಯೋ ವೈರಲ್‌!

Shiv Lingam Melts: ಉಷ್ಣ ಮಾರುತ: ಅಮರನಾಥ ಶಿವಲಿಂಗ ಈಗಲೇ ಕರಗಲು ಶುರು?

Shiv Lingam Melts: ಉಷ್ಣ ಮಾರುತ: ಅಮರನಾಥ ಶಿವಲಿಂಗ ಈಗಲೇ ಕರಗಲು ಶುರು?

Sitharama tholpadi

Yakshagana: ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ ಗೌರವ

Elephant Corridor: ಅಭಿವೃದ್ಧಿ ಯೋಜನೆಗಳಿಂದ ಆನೆ ಕಾರಿಡಾರ್‌ಗೆ ಹಾನಿ

Elephant Corridor: ಅಭಿವೃದ್ಧಿ ಯೋಜನೆಗಳಿಂದ ಆನೆ ಕಾರಿಡಾರ್‌ಗೆ ಹಾನಿ

Gayana

Music Programme: ಸಂಗೀತ ರಸಿಕರನ್ನು ರಂಜಿಸಿದ ಮಳೆಗಾಲದ ರಾಗಗಳ ಗಾಯನ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Punchalakatte ಕಾಜಲ-ಬೆಂಚಿನಡ್ಕ ಕಾಲ್ನಡಿಗೆಯಲ್ಲೇ ಮೃತದೇಹ ಸಾಗಾಟ

Punchalakatte ಕಾಜಲ-ಬೆಂಚಿನಡ್ಕ ಕಾಲ್ನಡಿಗೆಯಲ್ಲೇ ಮೃತದೇಹ ಸಾಗಾಟ

Smriti Singh: ಸುಮ್ಮನೆ ಸಾಯಲ್ಲ… ಯೋಧನ ಪತ್ನಿಯ ವೀಡಿಯೋ ವೈರಲ್‌!

Smriti Singh: ಸುಮ್ಮನೆ ಸಾಯಲ್ಲ… ಯೋಧನ ಪತ್ನಿಯ ವೀಡಿಯೋ ವೈರಲ್‌!

Champions Trophy: ಚಾಂಪಿಯನ್ಸ್‌ ಟ್ರೋಫಿಗಾಗಿ ಪಾಕ್‌ಗೆ ಭಾರತ ಹೋಗಲ್ಲ; ವರದಿ

Champions Trophy: ಚಾಂಪಿಯನ್ಸ್‌ ಟ್ರೋಫಿಗಾಗಿ ಪಾಕ್‌ಗೆ ಭಾರತ ಹೋಗಲ್ಲ; ವರದಿ

Shiv Lingam Melts: ಉಷ್ಣ ಮಾರುತ: ಅಮರನಾಥ ಶಿವಲಿಂಗ ಈಗಲೇ ಕರಗಲು ಶುರು?

Shiv Lingam Melts: ಉಷ್ಣ ಮಾರುತ: ಅಮರನಾಥ ಶಿವಲಿಂಗ ಈಗಲೇ ಕರಗಲು ಶುರು?

Sitharama tholpadi

Yakshagana: ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.