Mollywood: ಸೂಪರ್ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್
Team Udayavani, Apr 27, 2024, 3:10 PM IST
ಕೊಚ್ಚಿ: ಮಾಲಿವುಡ್‌ನಲ್ಲಿ ಈ ವರ್ಷ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ʼಮಂಜುಮ್ಮೆಲ್ ಬಾಯ್ಸ್ʼ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ.
ಮಾಲಿವುಡ್ ನಲ್ಲಿ ಮಾತ್ರವಲ್ಲದೆ, ತೆಲುಗು ಭಾಷೆಯಲ್ಲೂ ಡಬ್ ಆಗಿ ರಿಲೀಸ್ ಆಗಿರುವ ಸರ್ವೈವಲ್ ಥ್ರಿಲ್ಲರ್ ‘ಮಂಜುಮ್ಮೆಲ್ ಬಾಯ್ಸ್’ಬಾಕ್ಸ್ ಆಫೀಸ್ ನಲ್ಲಿ 200 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಥಿಯೇಟರ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡ ಈ ಸಿನಿಮಾ ಇದೀಗ ಓಟಿಟಿಗೆ ಕಾಲಿಡಲು ಸಿದ್ದವಾಗಿದೆ.
ಫೆ.22 ರಂದು ತೆರೆಕಂಡಿದ್ದ ಸಿನಿಮಾ 50 ದಿನಕ್ಕೂ ಹೆಚ್ಚಿನ ದಿನಗಳ ಕಾಲ ಥಿಯೇಟರ್ ನಲ್ಲಿ ಸೌಂಡ್ ಮಾಡಿತ್ತು.
ಕುಟ್ಟನ್ (ಶೌಬಿನ್ ಶಾಹಿರ್), ಸುಭಾಷ್ (ಶ್ರೀನಾಥ್ ಬಾಷಿ) ಹಾಗೂ ಅವರ ಸ್ನೇಹಿತರು ಕೊಡೈಕೆನಾಲ್ ಪ್ರವಾಸಕ್ಕೆ ಹೋಗಿ ಅಲ್ಲಿನ ಗುಣ ಗುಹೆಗೆ ಹೋದಾಗ ನಡೆಯುವ ನೈಜ ಕಥೆಯನ್ನು ಥ್ರಿಲ್ ಆಗುವ ರೀತಿ ಹೇಳಲಾಗಿದೆ.
ಇದೇ ಮೇ 5 ರಿಂದ ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಮಲಯಾಳಂ, ಹಿಂದಿ, ಕನ್ನಡ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ. ಥಿಯೇಟರ್ ಬಳಿಕ ಓಟಿಟಿಯಲ್ಲೂ ಸಿನಿಮಾ ಕಮಾಲ್ ಮಾಡುವ ಸಾಧ್ಯತೆಯಿದೆ.
ಚಿದಂಬರಂ ಎಸ್. ಪೊದುವಾಳ್ ನಿರ್ದೇಶನದ ಈ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್ ಮತ್ತು ಅರುಣ್ ಕುರಿಯನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.