Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
ಕಲ್ಮನೆ ಕೆರೆ ಕಾಯಕಲ್ಪಕ್ಕೆ ಜೀವ ಜಲ ಸಂಕಲ್ಪ
Team Udayavani, Apr 29, 2024, 5:07 PM IST
ಶಿರಸಿ: ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಕೆರೆಗಳ ಅಭಿವೃದ್ದಿಗೆ ತೊಡಗಿಕೊಂಡ ಶಿರಸಿಯ ಜೀವ ಜಲ ಕಾರ್ಯಪಡೆ ಈಗ ಗ್ರಾಮೀಣ ಭಾಗದ ಇನ್ನೊಂದು ಕೆರೆಯ ಅಭಿವೃದ್ದಿಗೆ ಸಂಕಲ್ಪ ತೊಟ್ಟಿದೆ.
ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಗಡಿಯಾದ ಅಡಕಳ್ಳಿ ಕತ್ರಿ ಪಕ್ಕದ ಕಲ್ಮನೆ ಊರಿನ ಕೆರೆಪಾಲ್ ಕೆರೆ ಎಂದೇ ಹೆಸರಾದ ಕೆರೆಯ ಜೀರ್ಣೋದ್ಧಾರಕ್ಕೆ ಹೆಜ್ಜೆ ಇಟ್ಟಿದೆ. ಇದೀಗ ಕಾರ್ಯಪಡೆಯು ಇಪ್ಪತ್ತೆರಡನೇಯ ಕೆರೆ ಅಭಿವೃದ್ದಿಗೆ ಮುಂದಾದಂತಾಗಿದೆ.
26 ಗುಂಟೆ ಕೆರೆ:
ಮನೇನಳ್ಳಿ ಗ್ರಾಮದ ಕಲ್ಮನೆಯ 26 ಗುಂಟೆ ಕ್ಷೇತ್ರದ ಸಾರ್ವಜನಿಕ ಕೆರೆ ಇದಾಗಿದೆ. ಸುಮಾರು ಐದು ಅಡಿಗೂ ಅಧಿಕ ಹೂಳು ತುಂಬಿದೆ. ಇದರ ಅಭಿವೃದ್ದಿಗೆ ಜೀವ ಜಲ ಕಾರ್ಯಪಡೆ ಸೋಮವಾರದಿಂದ ಮುಂದಾಗಿದೆ.
ಕಲ್ಮನೆ ಊರಿನ ೧೪ ಎಕರೆ ಅಡಿಕೆ ತೋಟ, ಭತ್ತದ ಗದ್ದೆ ಕ್ಷೇತ್ರ ಸೇರಿದಂತೆ ವಿವಿಧಡೆ ನೀರಿನ ಮೂಲದ ಕೆರೆ ಇದಾಗಿದೆ. ವನ್ಯ ಜೀವಿಗಳಿಗೂ ಕುಡಿಯುವ ನೀರಿನ ಅಕ್ಷಯ ಪಾತ್ರೆ ಇದಾಗಿತ್ತು.
ವಾರದೊಳಗೆ ಶುರು:
ಕಲ್ಮನೆ ಊರಿನ ಕೆರೆ ಅಭಿವೃದ್ದಿ 2002ರಲ್ಲಿ ಹಾಗೂ ಹಿಂದೊಮ್ಮೆ ಗ್ರಾಮಸ್ಥರು ಮಾಡಿದ್ದರು. ಆದರೆ, ಈಗ ಮತ್ತೆ ಹೂಳು ತುಂಬಿತ್ತು. ತನ್ಮಧ್ಯೆ ವಾರದ ಹಿಂದೆ ಊರವರು ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರ ಬಳಿ ವಿನಂತಿಸಿಕೊಂಡಿದ್ದರು. ಜಡ್ಡುಗಟ್ಟಿದ ಕೆರೆಯನ್ನು ಹೆಬ್ಬಾರರು ಇದನ್ನು ಅಭಿವೃದ್ದಿ ಮಾಡಿಕೊಡುವ ವಾಗ್ದಾನ ಮಾಡಿದ್ದರು. ಭರವಸೆ ಕೊಟ್ಟ ವಾರದೊಳಗೆ ಕಾಮಗಾರಿ ಆರಂಭಿಸಿಯೇ ಬಿಟ್ಟರು.
ಹಿಟಾಚಿ ಬಂತು!
ಸೋಮವಾರ ಕೆರೆಯ ಜೀರ್ಣೋದ್ದಾರಕ್ಕೆ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಗುದ್ದಲಿ ಪೂಜೆ ನಡಸಿ ಚಾಲನೆ ನೀಡಿದರು.
ಹಿಟಾಚಿ ಬಳಸಿ ಕೆರೆ ಜೀರ್ಣೊದ್ದಾರ ಕಾಮಗಾರಿಗೆ ಆರಂಭಿಸಲಾಯಿತು. ಪ್ರಧಾನ ಮಂತ್ರಿಗಳ ಕಾರ್ಯಕ್ರಮದಲ್ಲಿ ಬಂದ ಲಕ್ಷಾಂತರ ಜನರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಕೊಟ್ಟ ಮರು ದಿನವೇ ಈ ಕಾರ್ಯದಲ್ಲಿ ತೊಡಗಿಕೊಂಡೂ ಗಮನ ಸೆಳೆದರು.
ಈ ವೇಳೆಗೆ ರಘುಪತಿ ವಿ ಹೆಗಡೆ, ಪ್ರಕಾಶ ಹೆಗಡೆ, ವೆಂಕಟ್ರಮಣ ಭಟ್ಟ, ಜಿ.ಎನ್.ಹೆಗಡೆ, ವಿವೇಕ ಹೆಗಡೆ, ರಾಮಕೃಷ್ಣ ಭಟ್ಟ, ಲಕ್ಷ್ಮೀನಾರಾಯಣ ಭಟ್ಟ, ಪ್ರಸನ್ನ ಹೆಗಡೆ, ಶ್ರೀಧರ ಭಟ್ಟ ಕೊಳಗಿಬೀಸ್, ವಿನಯ ನಾಯ್ಕ, ಕೇಮು ವಂದಿಗೆ ಇತರರು ಇದ್ದರು.
ನಮ್ಮೂರಿನ ಕೆರೆಯ ಅವಸ್ಥೆಯ ಕುರಿತು ಹೆಬ್ಬಾರರನ್ನು ವಿನಯ ನಾಯ್ಕ ಅವರ ಮೂಲಕ ಭೇಟ್ಟಿ ಮಾಡಿ ಕೇಳಿಕೊಂಡಿದ್ದೆವು. ಮನವಿ ಮಾಡಿದ ವಾರದೊಳಗೆ ಕೆರೆಯ ಅಭಿವೃದ್ದಿಗೆ ಹಿಟಾಚಿ ಜೊತೆ ಬಂದಿದ್ದು ನಮಗೂ ಅಚ್ಚರಿ, ಅಭಿಮಾನ, ಸಂಭ್ರಮವಾಗಿದೆ.
– ರಘುಪತಿ ಹೆಗಡೆ, ಕಲ್ಮನೆ ಗ್ರಾಮಸ್ಥರ ಪರವಾಗಿ
ಊರವರ ಮನಸ್ಸಿಗೆ ಆನಂದ ಆಗುವಂತೆ ಕೆರೆ ಅಭಿವೃದ್ದಿ ಮಾಡುವ ಸಂಕಲ್ಪ ನಮ್ಮದು. ಜೀವ ಜಲದ ಅಗತ್ಯ ಎಲ್ಲರಿಗೂ ಇಂದಿದೆ. ಅದನ್ನು ಉಳಿಸುವ ಪ್ರಯತ್ನದ ಭಾಗವಿದು.
– ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು, ಜೀವ ಜಲ ಕಾರ್ಯಪಡೆ, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Director Guruprasad: ಖ್ಯಾತ ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಆ*ತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.