ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Team Udayavani, Apr 30, 2024, 6:40 AM IST
ಉಡುಪಿ: ಒಂದು ಜೀವಕಣ ವಿಭಜನೆಗೊಂಡು ಎರಡಾಗುವುದು, ಎರಡು ನಾಲ್ಕಾಗುವುದು, ಪ್ರಕೃತಿಯ ನಿಯಮದಂತೆ ನಡೆಯುವ ಈ ಪ್ರಕ್ರಿಯೆಯು ಜೀವಿಯನ್ನು ಜೀವಂತವಾಗಿಡುತ್ತದೆ. ಆದರೆ ಕಾರಣಾಂತರದಿಂದ ಒಂದು ಜೀವಕಣ ಅಸ್ವಾಭಾಕವಾಗಿ ವಿಭಜನೆಗೊಂಡು ಹತ್ತಾಗುವುದು ಮತ್ತು ಹತ್ತು ನೂರಾಗುವ ಜೀವಕಣದ ಬುದ್ಧಿಭ್ರಮಣೆಯ ಈ ಪ್ರಕ್ರಿಯೆಗೆ ಕ್ಯಾನ್ಸರ್ ಎನ್ನಲಾಗುತ್ತದೆ. ಕ್ಯಾನ್ಸರ್ ದೇಹದ ಯಾವ ಅಂಗವನ್ನು ಆವರಿಸಿದೆಯೋ ಆ ಹೆಸರನ್ನು ಪಡೆದುಕೊಳ್ಳುತ್ತದೆ.
ಕಾರಣಗಳು: ಭಗವಾನ್ ಬುದ್ಧನ ಉಪದೇಶದಿಂದ ಪ್ರೇರಣೆಗೊಂಡು ಅಭಿವೃದ್ಧಿ ಪಡಿಸಲಾದ ಮಹೋಷದ ಕಲ್ಪವೆಂಬ ಈ ಚಿಕಿತ್ಸ ಕ್ರಮದಲ್ಲಿ ಕ್ಯಾನ್ಸರ್ ಕಾಯಿಲೆ ಉತ್ಪತ್ತಿಯಾಗಲು ಈ ಕೆಳಗಿನ ನಾಲ್ಕು ಮುಖ್ಯ ಕಾರಣಗಳನ್ನು ವಿವರಿಸಲಾಗಿದೆ. ಮಿಥ್ಯಾಹಾರ, ದೋಷಯುಕ್ತ ದಿನಚರ್ಯ ಮತ್ತು ಋತು ಚರ್ಯ, ಚಿತ್ತದ ಅಶುದ್ಧತೆ ಹಾಗೂ ಅಶುದ್ಧ ಚಿತ್ತದ ಪ್ರಭಾವದಿಂದ ಪೂರ್ವ ದಲ್ಲಿ ಮಾಡಿರಬಹುದಾದ ಕರ್ಮ.
ಪರಿಹಾರ: ಮೇಲಿನ ಕಾರಣಗಳನ್ನು ಸರಿಪಡಿಸಲು ಸರಿಯಾದ ಆಹಾರ ಕ್ರಮ ಮತ್ತು ಪಥ್ಯ, ಸರಿಯಾದ ದಿನಚರ್ಯ ಮತ್ತು ಋತುಚರ್ಯ, ಚಿತ್ತಶುದ್ಧಿಗೆ ಭಗವಾನ್ ಬುದ್ಧನು ವಿವರಿಸಿದ ಸಮತ, ಮೈತ್ರಿ ಮತ್ತು ವಿಪಸ್ಸನ ಧ್ಯಾನ ಕ್ರಮಗಳು ಹಾಗೂ ಪಿರಮಿಡ್ ಥೆರಪಿ. ಕಾಯಿಲೆಯೆಂದರೆ ವೈರಿಯಲ್ಲ ಪ್ರಕೃತಿ ನಿಯಮವನ್ನು ಅರುಹಲು ಬಂದ ಅತಿಥಿ ಎಂಬ ಬುದ್ಧನ ಧ್ಯೇಯ ವಾಕ್ಯವನ್ನು ಚಿಕಿತ್ಸೆಯಲ್ಲಿ ಅಳವಡಿಸಿಕೊಂಡು ಈ ಅತಿಥಿಯನ್ನು ಗೌರವದಿಂದ ಉಪಚರಿಸಲಾಗುವುದು. ಕ್ಯಾನ್ಸರ್ ರೋಗಿಯೂ ತನ್ನ ದೇಹಕ್ಕೆ ಬಂದ ಈ ಕಾಯಿಲೆಯು ಅತಿಥಿಯೆಂಬ ಸತ್ಯವನ್ನು ಅರಿತಾಗ ರೋಗಿಯ ಹತಾಶತೆ ಗಣನೀಯವಾಗಿ ಕಡಿಮೆಯಾಗಿ ರೋಗಿಯನ್ನು ಕಾಡುವ ಮೂರು ಬಗೆಯ ಭಯಗಳಾದ ನೋವು, ಕಾಯಿಲೆ ಹಾಗೂ ಸಾಯುವ ಭಯಗಳಿಂದ ಪಾರಾಗಿ ನಿರ್ಲಿಪ್ತತೆಯಿಂದ ಪ್ರಕೃತಿ ನಿಯಮದ ವಿವಿಧ ಆಯಾಮಗಳನ್ನು ಅರಿಯುವಲ್ಲಿ ಯಶಸ್ಸನ್ನು ಕಾಣುವನು.
ವೈಜ್ಞಾನಿಕ ಸಂಶೋಧನೆಗಳು
ಕಳೆದ ಹದಿನೇಳು ವರ್ಷಗಳಿಂದ ಸಾವಿರದ ನೂರಕ್ಕೂ ಮಿಕ್ಕಿ ವಿವಿಧ ತರಹದ ಕ್ಯಾನ್ಸರ್ ಪೀಡಿತ ರೋಗಿಗಳು ಈ ಮಹೋಷದ ಕಲ್ಪದ ಉಪಯೋಗವನ್ನು ಪಡೆದಿದ್ದಾರೆ. ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳ ಐದು ವರ್ಷಗಳ ಬದುಕುಳಿಯುವ ಪ್ರಮಾಣ ಶೇ. 31ರಷ್ಟು ಇರುವುದು (ಈ ವರ್ಗದ ರೋಗಿಗಳ ಜಾಗತಿಕ ಬದುಕುಳಿಯುವ ಪ್ರಮಾಣ ಶೇ.5) ಈ ಚಿಕಿತ್ಸೆ ಕ್ರಮದ ವೈಶಿಷ್ಟ್ಯ.
ಜೀವಕಣದ ಬುದ್ಧಿವಂತಿಕೆಯನ್ನು ಎಚ್ಚರಿಸಿ ಅದರ ಅನಿಯಮಿತ ವಿಭಜನೆ ಮತ್ತು ಹರಡುಕೆಯನ್ನು ತಡೆಯಲು ಸಹಾಯ ಮಾಡುವ ಹಾಗೂ ಯಾವ ದುಷ್ಪರಿಣಾಮಗಳೂ ಇಲ್ಲವೆಂದು ವೈಜ್ಞಾನಿಕವಾಗಿ ದೃಢಪಟ್ಟಿರುವ ಮುನೆಕ್ಸ್ ಮಾತ್ರೆಗಳು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುವ ಹಿರಣ್ಯಪ್ರಾಶದ ಬಿಂದುಗಳು ಹಾಗೂ ಪೀಡಿತ ದೇಹದ ವಿವಿಧ ಅಂಗಗಳ ಚಿಕಿತ್ಸೆಗೆ ಸಹಾಯ ಮಾಡುವ ಸಂಸ್ಥೆಯ ವಿವಿಧ ಔಷಧಗಳು ಈ ಚಿಕಿತ್ಸೆಯಲ್ಲಿ ಒಳಗೊಂಡಿವೆ.
ಈ ಎಲ್ಲ ಸಂಶೋಧಿತ ಔಷಧಗಳಿಗೆ ಮತ್ತು ಚಿಕಿತ್ಸ ಕ್ರಮಕ್ಕೆ ಅಮೆರಿಕಾದ 17 ಪೇಟೆಂಟ್ ದೊರೆತಿರುವುದು ಇಲ್ಲಿ ಸ್ತುತ್ಯರ್ಹ. ಮಹೋಷದ ಕಲ್ಪ ಚಿಕಿತ್ಸೆಯ ಶಿಬಿರವು ಮಣಿಪಾಲದ ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು ಆಸಕ್ತರು ಇದರ ಉಪಯೋಗವನ್ನು ಪಡೆಯಬಹುದೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.