ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್


Team Udayavani, Apr 30, 2024, 12:26 PM IST

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಬೆಂಗಳೂರು: ಸದ್ಯ ರಾಜ್ಯ ರಾಜಕಾರಣದಲ್ಲಿ ಹಾಸನದ ಪೆನ್‌ ಡ್ರೈವ್‌ ಪ್ರಕರಣ ಸುದ್ದಿಯಲ್ಲಿದೆ. ಪ್ರಭಾವಿ ರಾಜಕಾರಣಿಯೊಬ್ಬರ ವಿಡಿಯೋಗಳು ವೈರಲ್‌ ಆದ ಬೆನ್ನಲ್ಲೇ ಹತ್ತಾರು ಪ್ರತಿಭಟನೆಗಳು ಶುರುವಾಗಿದೆ.

ರಾಜಕೀಯ ಪಕ್ಷಗಳು ಸೇರಿದಂತೆ ಅನೇಕರು ಈ ಕೃತ್ಯ ಎಸೆಗಿದವರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಡಿಯೋ ಲೀಕ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಟಿ ಕಸ್ತೂರಿ, ತೆಲುಗು ನಟಿ ಪೂನಂ ಕೌರ್ ಮುಂತಾದ ಕಲಾವಿದರು ಹರಿಹಾಯ್ದಿದ್ದಾರೆ.

ನಟ ಪ್ರಥಮ್‌ ರಾಜ್ಯದಲ್ಲಿ ಸದ್ದು ಮಾಡಿದ ಪ್ರಕರಣಗಳಿಗೆ ಯಾವಾಗಲೂ ತಮ್ಮ ಪ್ರತಿಕ್ರಿಯೆಯನ್ನು ನೀಡಿ ನ್ಯಾಯದ ಪರವಾಗಿ ಧ್ವನಿ ಎತ್ತುತ್ತಾರೆ. ಇತ್ತೀಚೆಗೆ ನೇಹಾ ಹೀರೆಮಠ್ ಪ್ರಕರಣದಲ್ಲೂ ಧ್ವನಿ ಎತ್ತಿದ್ದರು. ಇದೀಗ ಪೆನ್‌ ಡ್ರೈವ್‌ ಬಗ್ಗೆ ಪ್ರಥಮ್‌ ಮಾತನಾಡಿದ್ದಾರೆ.

ರಾಜಕಾರಣಿಯೊಬ್ಬರ ವಿಡಿಯೋ ಕೇಸ್‌ ಗೆ ಸಂಬಂಧಿಸಿದಂತೆ ಪ್ರಥಮ್‌ ಪ್ರತಿಕ್ರಿಯೆ ನೀಡಬೇಕೆಂದು ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಟ್ವೀಟ್‌ ಮಾಡಿರುವ ಅವರು, “ಹಾಸನದ ಘಟನೆ ಅಕ್ಷಮ್ಯ. ತಪ್ಪಿತಸ್ಥರಿಗೆ ಗಲ್ಲು ಆಗಲಿ. ಎಸ್‌ ಐಟಿಯಲ್ಲಿರುವ ನಾಗಲಕ್ಷ್ಮೀ ಮೇಡಮ್ ಗೆ ಮಹಿಳೆಯರ ಕಾಳಜಿ ಇದೆ. FSIL test ಮಾಡಿದರೆ 4ದಿನದಲ್ಲಿ ವರದಿ ಬರುತ್ತದೆ. ಅಲ್ಲಿರುವ ಧ್ವನಿ ಸಂಬಂಧ ಪಟ್ಟವರದ್ದಾಗಿದರೆ ಶಿಕ್ಷಿಸಿ. ನಾನು ಫಿಲ್ಮ್ ಮಾಡಿ ಸಾಲದಲ್ಲಿದ್ದೇನೆ. ಎಲ್ಲದಕ್ಕೂ ಪ್ರಥಮ್ ನ ಕೇಳಬೇಡಿ. ʼಕರ್ನಾಟಕದ ಅಳಿಯʼ ಫಿಲ್ಮ್‌ ಮುಂದಿನ ತಿಂಗಳು ರಿಲೀಸ್‌ ಆಗುತ್ತಿದೆ. ಎಲ್ಲರೂ ಗೆಲ್ಲಿಸಿ” ಎಂದು ಟ್ವೀಟ್‌ ಮಾಡಿದ್ದರು.

ಇದಾದ ಬಳಿಕ ಅವರು ಪೆನ್‌ ಡ್ರೈವ್‌ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಪ್ರಚಾರವನ್ನು ಪೆನ್‌ ಡ್ರೈವ್‌ ವಿಚಾರವನ್ನು  ಹೇಳಿ ಮಾಡಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಪ್ರಥಮ್‌ ಹೇಳಿದ್ದೇನು?:

“ಪೆನ್‌ಡ್ರೈವ್ ಬಗ್ಗೆ ಮಾತನಾಡುವ ಟೈಂ ಬಂತು. ಪೆನ್‌ಡ್ರೈವ್ ಇದೆ. ಇದೇ ಪೆನ್‌ಡ್ರೈವ್ ಬಗ್ಗೆ ತಾನೇ ಮಾತಾಡಿ ಮಾತಾಡಿ ಅಂದಿದ್ದು. ಈ ಪೆನ್‌ಡ್ರೈವ್‌ನಲ್ಲಿರು ವಿಡಿಯೋ ನಿಜ. ನಾನು, ಹೀರೊಯಿನ್ ಇಬ್ಬರೂ ಸೇರಿ ಮಾಡಿದಂತಹ ವಿಡಿಯೋ ಇದು. ಈ ಪೆನ್‌ಡ್ರೈವ್‌ ಇಷ್ಟು ದೊಡ್ಡ ಸಮಸ್ಯೆ ಮಾಡುತ್ತದೆ ಎಂದು ಗೊತ್ತಿರಲಿಲ್ಲ. ಜನರ ಬಳಿ ಮುಚ್ಚಿಟ್ಟು ನಾನು ಏನು ಸಾಧಿಸಬೇಕಾದ್ದು ಇಲ್ಲ. ನಾನು ಮಾಡಿಲ್ಲ, ನನ್ನದ್ದಲ್ಲ. ಫೇಕ್ ಅಂತ ನಾನು ಹೇಳಲ್ಲ. “ಈ ಪೆನ್‌ಡ್ರೈವ್‌ನಲ್ಲಿರುವುದು ನಾನೇ. ಆ ನಟಿಯೂ ನಿಜ. ಇದನ್ನು ಸಿಎಂ ಗಮನಕ್ಕೂ ತಂದಿದ್ದೆ. ಅವರು ಮುಂದಿನ ತಿಂಗಳು ಗಮನ ಹರಿಸುತ್ತೇನೆ ಎಂದಿದ್ದರು. ಎಲ್ಲರಿಗೂ ಪೆನ್‌ಡ್ರೈವ್ ಮಾಡಿ ಹಂಚಲು ಸಾಧ್ಯವಿಲ್ಲ. ಒಂದು ಪೆನ್‌ಡ್ರೈವ್ ಬೆಲೆ 600 ರೂ. ಯಾರು ಕೊಡ್ತಾರೆ. ಆದರೂ ನೀವು ನೋಡಬೇಕು. ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ಯೂಟ್ಯೂಬ್‌ನಲ್ಲಿದೆ. ʼಕರ್ನಾಟಕದ ಆಳಿಯʼ ಸಿನಿಮಾದ ಹಾಡುಗಳು ಈ ಪೆನ್‌ ಡ್ರೈವ್‌ ನಲ್ಲಿದೆ. ಪೂರ್ತಿ ಸಿನಿಮಾ ಮುಂದಿನ ತಿಂಗಳು ಬರಲಿದೆ” ಎಂದಿದ್ದಾರೆ.

ಪ್ರಥಮ್‌ ನಿರ್ದೇಶನದ ʼಕರ್ನಾಟಕದ ಆಳಿಯʼ ಸಿನಿಮಾ ಮುಂದಿನ ತಿಂಗಳು ರಿಲೀಸ್‌ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಪ್ರಥಮ್‌ ಪೆನ್‌ ಡ್ರೈವ್‌ ವಿಚಾರವನ್ನು ಬಳಸಿಕೊಂಡಿದ್ದಾರೆ. ಆದರೆ ಕೆಲವರು ಪ್ರಥಮ್‌ ಅವರನ್ನು ಇದಕ್ಕಾಗಿ ಟೀಕಿಸಿದ್ದಾರೆ.

‘ಕರ್ನಾಟಕದ ಅಳಿಯ’ ಚಿತ್ರದಲ್ಲಿ ಪ್ರಥಮ್ ಜೊತೆಗೆ ಅಕ್ಷಿತಾ ಬೊಪಯ್ಯ, ರೇಖಾ, ಐಶ್ವರ್ಯಾ ಸೇರಿದಂತೆ ಹಲವರು ನಟಿಸಿದ್ದಾರೆ.

 

ಟಾಪ್ ನ್ಯೂಸ್

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Priya Shatamarshan spoke about her fame after Bheema movie

Priya Shatamarshan: ಇನ್ಸ್ ಪೆಕ್ಟರ್‌ ಗಿರಿಜಾ ರಿಪೋರ್ಟಿಂಗ್‌ ಸಾರ್‌..

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Karki kananda movie

Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ

Family drama ‘Langoti Man’ hits screens today

Langoti Man: ಫ್ಯಾಮಿಲಿ ಡ್ರಾಮಾ ʼಲಂಗೋಟಿ ಮ್ಯಾನ್‌ʼ ಇಂದು ತೆರೆಗೆ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

Untitled-1

Kasaragod ಅಪರಾಧ ಸುದ್ದಿಗಳು

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.