Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
Team Udayavani, Apr 30, 2024, 5:16 PM IST
ತೀರ್ಥಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೆಜೆಎಂ ಯೋಜನೆಯಡಿ ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಕೇಂದ್ರೀಕೃತ, ಅವೈಜ್ಞಾನಿಕ, ಜನ ವಿರೋಧಿ ಮತ್ತು ಪ್ರಕೃತಿ ವಿರೋಧಿ ಯೋಜನೆಯಾಗಿದೆ. ಇದರ ಕುರಿತು ಕಳೆದ ಸುಮಾರು 6 ತಿಂಗಳಿಂದ ಮನವಿ, ಪ್ರತಿಭಟನೆ, ಆಹೋರಾತ್ರಿ ಧರಣಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆಗಿನ ಸಭೆ, ಗಂಜಿ ಚಳವಳಿ ಹೀಗೆ ನಾನಾ ರೀತಿಯಲ್ಲಿ ನಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿಕೊಂಡು ಬಂದರೂ ಸಮಸ್ಯೆ ಪರಿಹಾರ ಆಗದ ಕಾರಣ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.
ಮಂಗಳವಾರ ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗಿ ತಾಲೂಕಿನ ಕೋಡ್ಲು, ಅಲಗೇರಿ, ಗುಡ್ಡೆಕೊಪ್ಪ ಕಾಸರವಳ್ಳಿ, ಹಾರೋಗೋಳಿಗೆ, ಹುಣಸವಳ್ಳಿ ಗ್ರಾಮಗಳ 1 ಸಾವಿರಕ್ಕೂ ಅಧಿಕ ಗ್ರಾಮಸ್ಥರು ಸ್ವ ಇಚ್ಛೆಯಿಂದ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಸಹಿ ಹಾಕಿ ಪತ್ರ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯೋಜನೆಗಳು ಜನರ ಹೆಸರಿನಲ್ಲಿ ಜಾರಿಯಾಗುತ್ತವೆ. ಆದರೆ ಜನರು ವಿರೋಧ ಬಂದ ಮೇಲೂ ಅನುಷ್ಠಾನಕ್ಕೆ ತಾವುಗಳು ಪೊಲೀಸ್ ಬಲ ಪ್ರಯೋಗ ಬಳಸಿಕೊಂಡಿದ್ದೀರಿ, ಯೋಜನೆಯ ರೂಪು-ರೇಷೆಗಳನ್ನು ಮನಸೋ ಇಚ್ಛೆ ಬದಲಾಯಿಸಿಕೊಂಡಿದ್ದೀರಿ, ಕಾಡನ್ನು ನಾಶಗೊಳಿಸಿದ್ದೀರಿ, ಮಲೆನಾಡಿನ ಪರಿಸರವನ್ನು ಹಾಳುಗೆಡವಿದ್ದೀರಿ, ಜನರ ಯಾವ ಪ್ರತಿರೋಧವನ್ನೂ ಲೆಕ್ಕಿಸದೆ, ಈ ನೆಲದ ಕಾನೂನನ್ನು ಗಾಳಿಗೆ ತೂರಿ ಬಲಿಷ್ಠರಿಗೆ ಅನುಕೂಲವನ್ನು ಮಾಡಿ ಕೊಟ್ಟಿದ್ದೀರಿ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜನರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದಾಗಲೂ ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದೆ ಎಂದು ನ್ಯಾಯಾಲಯ ಗಮನಿಸಿ, ಆದೇಶ ನೀಡಿದೆ. ಹೀಗಿದ್ದರೂ ತಾವುಗಳು ಸಾರ್ವಜನಿಕರ ಹಿತವನ್ನು ಬದಿಗೊತ್ತಿ, ಬಲಪ್ರಯೋಗದ ಮೂಲಕ ಪರಿಸರದ ಮೇಲೆ ಎರಗಿದ್ದೀರಿ. ಇದರ ಜೊತೆಗೆ ಈ ಭಾಗದ ತೂಗು ಸೇತುವೆ ದುರಸ್ತಿಗೆ ನೀವುಗಳು ತೋರಿಸುತ್ತಿರುವ ತಾತ್ಸಾರ, ಗುಣಮಟ್ಟವಿಲ್ಲದೆ ಹಾಕಿದ ರಸ್ತೆಗಳಿಂದಾಗಿ ಜನರಿಗೆ ವಿಶ್ವಾಸ ಕಡಿಮೆಯಾಗಿದೆ. ಹೀಗಿರುವಾಗ, ಲೋಕಸಭಾ ಚುನಾವಣೆ 2024ರ ಮತದಾನದಲ್ಲಿ ಭಾಗವಹಿಸುವ ಯಾವ ಆಸಕ್ತಿಯೂ ನಮಗೆ ಉಳಿದಿಲ್ಲ ಎಂದಿದ್ದಾರೆ.
ಇಡೀ ವ್ಯವಸ್ಥೆಯೇ ಕಣ್ ಕಟ್ಟಾಗಿರುವಾಗ ನಮ್ಮ ಮತವನ್ನು ಮಾತ್ರ ನೀವು ಪವಿತ್ರ ಎನ್ನುತ್ತಿರುವುದು ಸಂವಿಧಾನಕ್ಕೆ ನೀವೆಲ್ಲರೂ ಸೇರಿ ಎಸಗುತ್ತಿರುವ ಅಪಚಾರವಾಗಿದೆ. ವಿಕೇಂದ್ರಿಕರಣ ವ್ಯವಸ್ಥೆಯನ್ನು ಸಂವಿಧಾನದ ಆಶಯಗಳನ್ನು ಕಡೆಗಣಿಸಿರುವುದರಿಂದ ನಮಗೆ ಸಂವಿಧಾನವನ್ನು ಅನುಷ್ಠಾನಗೊಳಸುತ್ತಿರುವ ನಿಮ್ಮಗಳ ಮೇಲೆ ಇದ್ದ ನಂಬಿಕೆ, ವಿಶ್ವಾಸ ಕಡಿಮೆಯಾಗಿದೆ. ಬಂಡವಾಳಶಾಯಿ ವ್ಯವಸ್ಥೆಯ ಸರ್ವಾಧಿಕಾರಿ ಧೋರಣೆ ಆಡಳಿತ ಮತ್ತು ಸರ್ಕಾರ ನಿಮ್ಮದು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದರು.
ಇದರಿಂದಾಗಿ ಭಾರತದ ಸಂವಿಧಾನದ ಮಹಾಹಬ್ಬ 2024ರ ಲೋಕಸಭೆ ಚುನಾವಣೆಯ ಮತದಾನದಲ್ಲಿ ನಾವು/ನಮ್ಮ ಕುಟುಂಬ ಭಾಗವಹಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿರುತ್ತೇವೆ ಎಂದು ಸಹಿ ಹಾಕಿರುವ ಪತ್ರದ ಮೂಲಕ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.