![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 1, 2024, 2:47 PM IST
ಬೆಂಗಳೂರು: ಸಿಲಿಕಾನ್ ಸಿಟಿ ಫ್ಲೈ ಓವರ್‌ಗಳು ಈಗ ಕಸದ ತೊಟ್ಟಿಗಳಾಗಿ ಮಾರ್ಪ ಡುತ್ತಿವೆ. ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಬಂದು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿದ ಕಸ ಬಿಸಾಡಿ ಮುಂದೆ ಹೋಗುವ ಪ್ರವೃತ್ತಿ ಕಂಡು ಬಂದಿದೆ. ಜತೆಗೆ ಬಿಯರ್, ಬ್ರಾಂದಿ, ವಿಸ್ಕಿ ಬಾಟಲಿಗಳನ್ನು ಬಿಸಾಕಿ ಹೋಗುತ್ತಿದ್ದು, ರಾತ್ರಿ ವೇಳೆ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಒಂದು ಕಡೆ ಆಧುನಿಕ ಯಂತ್ರಗಳ ಬಳಕೆ ಮಾಡಿ ಬಿಬಿಎಂಪಿ ಸಿಬ್ಬಂದಿ ಮೇಲ್ಸೇತುವೆಗಳನ್ನು ಪ್ರತಿದಿನ ಸ್ವತ್ಛಗೊಳಿಸುತ್ತಾರೆ. ಆದರೆ, ಅವರು ಸ್ವತ್ಛಗೊಳಿಸಿ ಮುಂದೆ ಸಾಗುತ್ತಿದ್ದಂತೆ ಇತ್ತ ಎಲ್ಲೆಂದರಲ್ಲಿ ಕಸ ರಾಶಿ ರಾಶಿಯಾಗಿ ಬಿದ್ದಿರುತ್ತದೆ. ಈಗಾಗಲೇ ಬೆಂಗಳೂರಿನ ಹಲವು ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿÉ ಬ್ಲಾಕ್ ಸ್ಪಾಟ್‌ಗಳು ಸೃಷ್ಟಿಯಾಗುತ್ತಿದ್ದು, ಅವುಗಳ ಮಧ್ಯೆಯೇ ಈಗ ಜೆಪಿ ನಗರದ ದಾಲಿ¾ಯಾ ಸರ್ಕಲ್ ಮೇಲ್ಸೇತುವೆ ಮತ್ತು ಈಜಿಪುರದ ನಿರ್ಮಾಣ ಹಂತದ ಮೇಲ್ಸೇತುವೆ ಸೇರಿದಂತೆ ರಾಜಧಾನಿ ವ್ಯಾಪ್ತಿಯ ಹಲವು ಫ್ಲೈ ಓವರ್‌ಗಳಲ್ಲಿ ಕಸ ಎಸೆದು ಹೋಗುವ ಪ್ರವೃತ್ತಿ ಮುಂದುವರಿದಿದೆ.
ಜೆಪಿ ನಗರದ 4ನೇ ಹಂತದಲ್ಲಿರುವ ದಾಲಿ¾ ಯಾ ಸರ್ಕಲ್‌ನ ಮೇಲ್ಸೇತುವೆಯಲ್ಲಿ ಪ್ಲಾಸ್ಟಿಕ್‌ನಿಂದ ತುಂಬಿದ ಕಸಗಳನ್ನು ಹಾಕಲಾಗುತ್ತಿದೆ. ರಾತ್ರಿ ದ್ವಿಚಕ್ರವಾಹನದಲ್ಲಿ ಕಸವನ್ನು ಬಿಸಾಡಿ ಹೋಗು ತ್ತಾರೆ. ಈ ಪ್ರದೇಶದ ರಸ್ತೆ ಬದಿ ಯಲ್ಲಿರುವ ಮರಗಳ ಮಧ್ಯೆ ಕೂಡ ರಾಶಿಗಟ್ಟಲೆ ಕಸ ಬೀಳುತ್ತಿದೆ. ಈ ಅವ್ಯವಸ್ಥೆ ಹಲವು ದಿನಗಳಿಂದ ನಡೆಯುತ್ತಲೇ ಇದೆ ಎಂದು ಜೆ.ಪಿ.ನಗರ 4ನೇ ಹಂತದ ನಿವಾಸಿ, ಐಟಿ ಉದ್ಯೋಗಿ ಕಿರಣ್ ಕುಮಾರ್ ದೂರುತ್ತಾರೆ.
ಕೋಟ್ಯಂತರ ರೂ. ವೆಚ್ಚ ಮಾಡಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೆ ಮೇಲ್ಸೇತುವೆಗಳು ಕೂಡ ದಿನೇ ದಿನೆ ಕಸದ ತೊಟ್ಟಿಗಳಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಕಸ ಹಾಕುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈಜಿಪುರದ ಮೇಲ್ಸೇತುವೆ ನಿರ್ಮಾಣದ ಸ್ಥಳವು ಕೂಡ ಹಲವು ವರ್ಷಗಳಿಂದ ಡಂಪಿಂಗ್ ಯಾರ್ಡ್ ಆಗಿ ನಿರ್ಮಾಣವಾಗಿದೆ.
ಸಿಸಿ ಕ್ಯಾಮೆರಾ ಅಳವಡಿಸಲು ಪಾಲಿಕೆ ಚಿಂತನೆ :
ಮಷಿನ್ ಸ್ವೀಪರ್ ಬಳಕೆ ಮಾಡಿ ಮೇಲ್ಸೇತುವೆಗಳನ್ನು ಸ್ವತ್ಛ ಮಾಡಲಾಗುತ್ತದೆ. 25ಕ್ಕೂ ಅಧಿಕ ಮಷಿನ್‌ಗಳನ್ನು ಸ್ವತ್ಛತಾ ಕಾರ್ಯಕ್ಕೆ ಬಳಸಲಾಗುತ್ತಿದೆ. ಆದರೂ ರಾತ್ರಿ ವೇಳೆ ಕೆಲವು ಮೇಲ್ಸೇತುವೆಗಳ ಮೇಲೆ ಮೋಟಾರು ಬೈಕ್‌ನಲ್ಲಿ ಬಂದು ಕಸಹಾಕಿ ಹೋಗುತ್ತಿರುವುದು ಬಿಬಿಎಂಪಿ ಗಮನಕ್ಕೆ ಬಂದಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಪಾಲಿಕೆ ಕೂಡ ಹೆಚ್ಚಿನ ಗಮನ ನೀಡಿದ್ದು, ಫ್ಲೈ ಓವರ್‌ಗಳ ಮೇಲೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವ ಚಿಂತನೆಯಲ್ಲಿದೆ ಎಂದು ತಿಳಿಸಿದ್ದಾರೆ.
ಮೇಲ್ಸೇತುವೆ ಸೇರಿದಂತೆ ಮತ್ತಿತರ ಕಡೆ ಕಸ ಬಿಸಾಡುವ ಪ್ರವೃತ್ತಿ ಕಂಡು ಬಂದಿದೆ. ಕೆಲವು ದೇಶಗಳಲ್ಲಿ ಪೊಲೀಸರು ಕಸಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಆದರೆ, ನಮ್ಮಲ್ಲಿ ಆ ವ್ಯವಸ್ಥೆಯಿಲ್ಲ. ಬಿಬಿಎಂಪಿ ಆ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಳ್ಳಲು ಮುಂದಾಗಬೇಕು.-ಯಲ್ಲಪ್ಪ ರೆಡ್ಡಿ, ಹಿರಿಯ ಪರಿಸರವಾದಿ
– ದೇವೇಶ ಸೂರಗುಪ್ಪ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.