Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
Team Udayavani, May 1, 2024, 5:52 PM IST
ಹೈದರಾಬಾದ್: ಅಲ್ಲು ಅರ್ಜುನ್ ಅರ ʼಪುಷ್ಪ-2ʼ ಸಿನಿಮಾದ ಮೊದಲ ಸಿಂಗಲ್ ಹಾಡು ಬುಧವಾರ(ಮೇ.1 ರಂದು) ರಿಲೀಸ್ ಆಗಿದೆ.
ʼಪುಷ್ಪʼ ಸಿನಿಮಾದ ಮೊದಲ ಭಾಗ ದೊಡ್ಡಮಟ್ಟದಲ್ಲಿ ಯಶಸ್ಸು ಆಗುವುದರ ಜೊತೆಗೆ ಅಲ್ಲು ಅರ್ಜುನ್ ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟವನ್ನು ತಂದುಕೊಟ್ಟಿತ್ತು. ಮಾಸ್ ಸೀನ್ಸ್, ಸಖತ್ ಡ್ಯಾನ್ಸ್. ಮ್ಯಾನರಿಸಂನಿಂದ ʼಪುಷ್ಪʼ ಹಿಟ್ ಆಗಿತ್ತು.
ʼಪುಷ್ಪ-2ʼ ಸಿನಿಮಾದ ಮೇಲೂ ಬಹು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಪೋಸ್ಟರ್, ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಬರ್ತ್ ಡೇ ಟೀಸರ್ ಮೂಲಕ ಸಖತ್ ಕುತೂಹಲ ಮೂಡಿಸಿದ ʼಪುಷ್ಪ-2ʼ ಸಿನಿಮಾದ ಮೊದಲ ಲಿರಿಕಲ್ ಹಾಡು ಬುಧವಾರ ರಿಲೀಸ್ ಆಗಿದೆ.
ʼಪುಷ್ಪ.. ಪುಷ್ಪʼ ಎನ್ನುವ ಹಾಡಿನಲ್ಲಿ ಅಲ್ಲು ಅರ್ಜುನ್ ಅವರ ಕ್ಯಾರೆಕ್ಟರ್ ಝಲಕ್ ಹಾಗೂ ಡ್ಯಾನ್ಸ್ ನ್ನು ತೋರಿಸಲಾಗಿದೆ. ʼಪುಷ್ಪರಾಜ್ʼ ವ್ಯಕ್ತಿತ್ವದ ಬಗ್ಗೆ ಹಾಡನ್ನು ಬರೆಯಲಾಗಿದೆ. ಪುಷ್ಪರಾಜ್ ಆಗಿ ಅಲ್ಲು ಸಖತ್ ಸ್ಟೈಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ.
ʼಪುಷ್ಪ ಪುಷ್ಪʼ ಎಂಬ ಶೀರ್ಷಿಕೆಯಡಿ ಬಂದಿರುವ ಹಾಡಿನ ಸಾಹಿತ್ಯವನ್ನು ಚಂದ್ರ ಬೋಸ್ ಬರೆದಿದ್ದಾರೆ. ನಕಾಶ್ ಅಜೀಜ್ ,ದೀಪಕ್ ಬ್ಲೂ ಹಾಡಿಗೆ ಧ್ವನಿಯಾಗಿದ್ದಾರೆ. ದೇವಿ ಶ್ರೀ ಪ್ರಸಾದ್ ಹಾಡನ್ನು ಸಂಯೋಜಿಸಿದ್ದಾರೆ.
ಸುಕುಮಾರ್ ನಿರ್ದೇಶನದ ʼಪುಷ್ಪ 2: ದಿ ರೂಲ್ʼ ಚಿತ್ರದಲ್ಲಿ ಅಲ್ಲು, ರಶ್ಮಿಕಾ ಮತ್ತು ಫಾಹದ್ ಫಾಸಿಲ್ ಮುಂತಾದ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಆಗಸ್ಟ್ 15 ರಂದು ಚಿತ್ರ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jani Master: ನನ್ನ ಪತಿ ಎಲ್ಲಿದ್ದಾರೆ.. ಠಾಣೆ ಬಳಿ ಜಾನಿ ಮಾಸ್ಟರ್ ಪತ್ನಿ ರಾದ್ಧಾಂತ
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನ
Kanguva Movie: ಸೂರ್ಯ ಪ್ಯಾನ್ ಇಂಡಿಯಾ ʼಕಂಗುವʼ ಹೊಸ ರಿಲೀಸ್ ಡೇಟ್ ಔಟ್
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.