Nature: ಪ್ರಕೃತಿ ಮಾತೆಯೇ ನೀ ಏಕೆ ಮೌನವಾಗಿರುವೆ ?

Team Udayavani, May 2, 2024, 3:48 PM IST

15-uv-fusion

ಅದೊಂದು ಪುಟ್ಟ ಊರು. ಪೇಟೆಗಿಂತ ಸ್ವಲ್ಪ ದೂರದಲ್ಲಿ ಪ್ರಕೃತಿಯ ಮಡಿಲಿನಲ್ಲಿದ್ದ ಸಣ್ಣ ಪ್ರದೇಶ. ಸುತ್ತಲೂ ಕಾಡು ಗುಡ್ಡಗಳಿಂದ ಆವೃತ್ತವಾಗಿತ್ತು. ಮರಗಿಡಗಳಿಂದ ಆ ಊರು ಹಚ್ಚ ಹಸುರಿನಿಂದ ಕೂಡಿರುತ್ತಿತ್ತು.  ಮಳೆಗಾಲದಲ್ಲಂತೂ ಅಲ್ಲಿನ ಗದ್ದೆಯಲ್ಲಿ ನಾಟಿ ಮಾಡಿ ಪೈರುಗಳನ್ನು ನೋಡುವಾಗ ಹಸುರು ಕಂಬಳಿಯನ್ನು ಆ ಭೂಮಿಯು ಹೊದ್ದಂತೆ ಕಾಣುತ್ತಿತ್ತು.

ಮಳೆಗಾಲದಲ್ಲಿ ಹಸರು ತುಂಬಿದ ಆ ಊರನ್ನು ನೋಡಿದಾಗ  ಸ್ವರ್ಗವೇ ಕಂಡಂತೆ ಭಾಸವಾಗುತ್ತಿತ್ತು. ಸಂಜೆಯ ಹೊತ್ತಿನಲ್ಲಿ ತಣ್ಣನೆಯ ತಂಗಾಳಿ ಬೀಸುತ್ತಿತ್ತು. ಆ ಗಾಳಿಯು ಯಾವ ಫ್ಯಾನಿನ ಗಾಳಿಗೂ ಕಡಿಮೆ ಇರಲಿಲ್ಲ. ಮನೆಯ ಜಗಲಿಯಲ್ಲಿ ಕುಳಿತಾಗ ಬೀಸುವ ತಂಗಾಳಿಯು ಮೈಸೋಕಿದಾಗ ಮನಸ್ಸಿಗೆ ಒಂದು ರೀತಿಯ ಮುದ ನೀಡುತ್ತಿತ್ತು. ಹಚ್ಚ ಹಸುರಿನಿಂದ ಕೂಡಿದ ಗದ್ದೆಯನ್ನು ನೋಡುತ್ತ ಓದಲು ಕುಳಿತಾಗ ನೀಸುವ ತಂಗಾಳಿಯು ಆ ಪ್ರಕೃತಿ ಮಾತೆಯೇ ನಮ್ಮನ್ನು ಹರಸುವಂತಿತ್ತು.

ಕಾಲ ಕಳೆಯುತ್ತಾ ಹೋಯಿತು, ಕಾಲ ಕ್ಷಣಿಕ ಎನ್ನುವಂತೆ ಆ ಸಂತೋಷವು ಹೆಚ್ಚು ಸಮಯ ಉಳಿಯಲಿಲ್ಲ. ಮನುಷ್ಯರಿಗೆ ದುರಾಸೆ ಹೆಚ್ಚು, ಅದರಂತೆ ಆ ಊರಿನ ಕೆಲವು ಜನರು ಹಣದಾಸೆಗಾಗಿ ತಮಗೆ ಸೇರಿದ ಜಾಗದಲ್ಲಿರುವ ಮರಗಳನ್ನು ಕಡಿದು ಕಾಡು ನಾಶಗೊಳಿಸಿ ಆ ಜಾಗದಲ್ಲಿ ಕಲ್ಲಿನ ಗಣಿಗಾರಿಕೆಯನ್ನು ಮಾಡಲು ಪ್ರಾರಂಭಿಸಿದರು. ದುರಾಸೆ ಎನ್ನುವುದು ಮನುಷ್ಯನ ಹುಟ್ಟುಗುಣ. ಮಾನವ ಹಣದಾಸೆಗೆ ಯಾವ ಮಟ್ಟಕ್ಕೂ ಇಳಿಯಲು ಸಿದ್ಧನಿದ್ದಾನೆ.

ಮಾನವನ ಅತಿಯಾಸೆಗೆ ಪ್ರಕೃತಿ ಮಾತೆಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ಹಿಂದಿನ ಹಚ್ಚ ಹಸುರಿನ ಪರಿಸರ ಈಗ ಇಲ್ಲ. ಎಲ್ಲ ನಾಶವಾಗಿ ಸುಡುಗಾಡಿನ ಹಾಗೆ ಆಗಿದೆ. ಮುಂಚೆ ಮುಸ್ಸಂಜೆ ಬೀಸುತ್ತಿದ್ದ ತಂಗಾಳಿ ಈಗ ರಾತ್ರಿಯಲ್ಲಿಯೂ ಬೀಸುತ್ತಿಲ್ಲ. ಮಧ್ಯಾಹ್ನದ ಅತಿಯಾದ ಉರಿಬಿಸಿಲಿನಲ್ಲಿ ನಾವು ಮರಳುಗಾಡಿನಲ್ಲಿರುವಂತೆ ಭಾಸವಾಗುತ್ತಿದೆ. ಕಾಡುನಾಶದಿಂದ ಸರಿಯಾಗಿ ಮಳೆಯಾಗುತ್ತಿಲ್ಲ ಇದರಿಂದ ಬರಗಾಲದ ಪರಿಸ್ಥಿತಿ ಎದುರಾಗಿದೆ. ಇನ್ನು ಕೆಲವರು ಕಡಿಮೆ ಮಳೆಯಾಗುತ್ತಿರುವುದರಿಂದ ಬೇಸಾಯವನ್ನು ಕೈ ಬಿಟ್ಟಿದ್ದಾರೆ.

ಇಷ್ಟಾದರೂ ಮಾನವನಿಗೆ ಸ್ವಲ್ಪವೂ ಪರಿಜ್ಞಾನವಿಲ್ಲ. ಹಣದಾಸೆಗಾಗಿ ಬುದ್ಧಿ ಭ್ರಮಣೆ ಇಲ್ಲದವರಂತೆ ಕಾಡುನಾಶ ಮಾಡುತ್ತಿದ್ದಾರೆ. ಇಷ್ಟಾದರೂ ಪ್ರಕೃತಿ ಮಾತೆಯೂ ಮಾನವನ ದೌರ್ಜನ್ಯವನ್ನು ಸಹಿಸಿಕೊಂಡು ಮೂಕಳಾಗಿದ್ದಾಳೆ. ಪ್ರಕೃತಿ ಮಾತೆಯೇ ನನ್ನ ಬಳಿ ನಿನ್ನದೊಂದು ಪ್ರಶ್ನೆ ನೀ ಏಕೆ ಮೌನವಾಗಿರುವೆ?

ಕೀರ್ತನ್‌ ಎಸ್‌. ಮಡಿವಾಳ   

ಎಂಪಿಎಂ ಪ್ರ. ದ.ಕಾಲೇಜು ಕಾರ್ಕಳ

ಟಾಪ್ ನ್ಯೂಸ್

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-father

Father: ಅಪ್ಪನ ನೀತಿ ನಮ್ಮ ಬದುಕಿನ ರೀತಿ

18-uv-fusion

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

15-

Father: ಅಪ್ಪನೆಂಬ ಆಕಾಶ

13-uv-fusion

Terrace Garden: ಮನೆಗೊಂದು ತಾರಸಿ ತೋಟ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.