Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ
Team Udayavani, May 3, 2024, 6:02 AM IST
ಹೊಸದಿಲ್ಲಿ: ಭಾರತದ ವನಿತಾ ಹಾಕಿ ತಂಡದ ನಾಯಕತ್ವದಲ್ಲಿ ಬದಲಾವಣೆ ಸಂಭವಿಸಿದೆ. ಅನುಭವಿ ಗೋಲ್‌ಕೀಪರ್ ಸವಿತಾ ಪುನಿಯಾ ಬದಲು ಮಿಡ್ ಫೀಲ್ಡರ್ ಸಲೀಮಾ ಟೇಟೆ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ನವನೀತ್ ಕೌರ್ ಉಪನಾಯಕಿಯಾಗಿದ್ದಾರೆ.
ಮುಂಬರುವ ಬೆಲ್ಜಿಯಂ ಮತ್ತು ಇಂಗ್ಲೆಂಡ್ ಲೆಗ್‌ನ ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಗಾಗಿ ಗುರುವಾರ ಪ್ರಕಟಿಸಲಾದ ತಂಡದಲ್ಲಿ ಈ ಮಹತ್ವದ ಬದಲಾವಣೆ ಸಂಭವಿಸಿದೆ. ಸಲೀಮಾ ಟೇಟೆ ಇತ್ತೀಚೆಗಷ್ಟೇ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದರು.
ಸವಿತಾ ಪುನಿಯಾ ಸಾರಥ್ಯದ ಭಾರತ ಒಲಿಂಪಿಕ್ ಅರ್ಹತಾ ಸುತ್ತಿನ ಸ್ಪರ್ಧೆ ಹಾಗೂ ತವರಿನ ಪ್ರೊ ಲೀಗ್ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು.
ನಾಲ್ವರು ಹೊರಕ್ಕೆ :
ಡಿಫೆಂಡರ್ ಗುರ್ಜಿತ್ ಕೌರ್, ಮಿಡ್ ಫೀಲ್ಡರ್‌ಗಳಾದ ಸೋನಿಕಾ, ನಿಶಾ, ಸ್ಟ್ರೈಕರ್ ಬ್ಯೂಟಿ ಡುಂಗ್‌ಡುಂಗ್ ಅವರನ್ನು ಕೈಬಿಡಲಾಗಿದೆ. ಇವರ ಬದಲು ಮಹಿಮಾ ಚೌಧರಿ, ಮನೀಷಾ ಚೌಹಾಣ್, ಪ್ರೀತಿ ದುಬೆ ಮತ್ತು ದೀಪಿಕಾ ಸೊರೆಂಗ್ ಅವಕಾಶ ಪಡೆದಿದ್ದಾರೆ.
ಬೆಲ್ಜಿಯಂ ಆವೃತ್ತಿಯ ಪಂದ್ಯಗಳು ಮೇ 22ರಿಂದ ಮೇ 26ರ ತನಕ; ಇಂಗ್ಲೆಂಡ್ ಆವೃತ್ತಿಯ ಪಂದ್ಯಗಳು ಜೂ. 1ರಿಂದ ಜೂ. 9ರ ತನಕ ನಡೆಯಲಿದೆ. ಲಂಡನ್‌ನಲ್ಲಿ ಆಡಲಾಗುವ ಪಂದ್ಯಗಳಲ್ಲಿ ಗ್ರೇಟ್ ಬ್ರಿಟನ್ ಮತ್ತು ಜರ್ಮನಿ ವಿರುದ್ಧ ಭಾರತ ಸೆಣಸಲಿದೆ. ಸದ್ಯ ಭಾರತ ಎಫ್ಐಎಚ್ ಪ್ರೊ ಲೀಗ್ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
ಭಾರತ ತಂಡ :
ಗೋಲ್‌ಕೀಪರ್: ಸವಿತಾ ಪುನಿಯಾ, ಬಿಚು ದೇವಿ ಖರಿಬಾಮ್.
ಡಿಫೆಂಡರ್: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ, ಜ್ಯೋತಿ ಛತ್ರಿ, ಮಹಿಮಾ ಚೌಧರಿ.
ಮಿಡ್ ಫೀಲ್ಡರ್: ಸಲೀಮಾ ಟೇಟೆ (ನಾಯಕಿ), ನವನೀತ್ ಕೌರ್ (ಉಪನಾಯಕಿ), ವೈಷ್ಣವಿ ವಿಠuಲ್ ಫಾಲ್ಕೆ, ನೇಹಾ, ಜ್ಯೋತಿ, ಬಲ್‌ಜೀತ್ ಕೌರ್, ಮನೀಷಾ ಚೌಹಾಣ್, ಲಾಲ್ರೆಮಿÕಯಾಮಿ.
ಫಾರ್ವರ್ಡ್ಸ್: ಮುಮ್ತಾಜ್ ಖಾನ್, ಸಂಗೀತಾ ಕುಮಾರಿ, ದೀಪಿಕಾ, ಶರ್ಮಿಳಾ ದೇವಿ, ಪ್ರೀತಿ ದುಬೆ, ವಂದನಾ ಕಟಾರಿಯಾ, ಸುನೇಲಿಟಾ ಟೋಪೊ, ದೀಪಿಕಾ ಸೊರೆಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.