2,000 ರೂ.ನ 97.76% ನೋಟು ವಾಪಸ್: ಆರ್ಬಿಐ
Team Udayavani, May 4, 2024, 2:15 AM IST
ಹೊಸದಿಲ್ಲಿ: 2000 ರೂ. ಮುಖ ಬೆಲೆಯ ಶೇ.97.76ರಷ್ಟು ನೋಟುಗಳು 2024ರ ಎ.1ರ ಒಳಗೆ ಆರ್ಬಿಐಗೆ ವಾಪಸಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಆರ್ಬಿಐ ಪತ್ರಿಕಾ ಪ್ರಕಟನೆಯ ಪ್ರಕಾರ, 2023ರ ಮೇ 19ರಂದು ನೋಟಿನ ಚಲಾವಣೆ ಹಿಂಪಡೆಯುವ ನಿರ್ಧಾರ ಪ್ರಕಟಿಸಿದಾಗ 2,000 ರೂ. ಮುಖಬೆಲೆಯ 3.56 ಲ. ಕೋ. ರೂ. ಮೌಲ್ಯದ ನೋಟುಗಳು ಚಲಾವಣೆ ಯಲ್ಲಿದ್ದವು. ಆದರೀಗ 2024ರ ಎ.30ರ ವೇಳೆಗೆ ಚಲಾವಣೆಯಲ್ಲಿರುವ ನೋಟು ಗಳ ಮೌಲ್ಯ 7,961 ಕೋ. ರೂ. ಗೆ ಇಳಿಕೆಯಾಗಿದೆ ಎಂದು ತಿಳಿಸಿದೆ. ಈ ಮೂಲಕ ಶೇ.97.76ರಷ್ಟು ನೋಟುಗಳು ವಾಪಸಾದಂತಾಗಿವೆ ಎಂದಿದೆ.
2023ರ ಮೇ 19ರಂದು ನೋಟನ್ನು ಹಿಂಪಡೆಯುವುದಾಗಿ ಘೋಷಿಸಿದ ಬಳಿಕ ಆರ್ಬಿಐನ 19 ಶಾಖೆಗಳಲ್ಲಿ ನೋಟುಗಳನ್ನು ಹಿಂದಿರುಗಿಸಲು 2023ರ ಅಕ್ಟೋಬರ್ 9ರ ವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾ ಗಿತ್ತು. ಅನಂತರ ಜನರ ಅಗತ್ಯಗಳನ್ನು ಪರಿಗಣಿಸಿ ಇಂಡಿಯಾ ಪೋಸ್ಟ್ ಮೂಲಕ ಆರ್ಬಿಐ ಯಾವುದೇ ಶಾಖೆಗೆ 2,000 ರೂ.ಗಳ ನೋಟನ್ನು ಕಳುಹಿಸಿ, ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ಕೊಳ್ಳಲು ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.