Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!
Team Udayavani, May 5, 2024, 1:22 AM IST
ಕಾಪು: ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾಗಿರುವ ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ-ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ವಿಶೇಷ ಜನಾಕರ್ಷಣೆಯೊಂದಿಗೆ ಮೇ 4ರಂದು ಸಂಪನ್ನಗೊಂಡಿತು.
2 ಗಂಟೆಯ ಬಣ್ಣಗಾರಿಕೆಯ ಬಳಿಕ ಅಬ್ಬರದೊಂದಿಗೆ ಪಂಜರದೊಳಗಿಂದ ಹೊರಗೆ ಬಂದ ಹುಲಿಚಂಡಿ ದೈವವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದು, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಡಲಾಗಿದ್ದ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಮುಂದೆ ಗ್ರಾಮ ಭೇಟಿಗೆ ತೆರಳುವುದು ಸಂಪ್ರದಾಯವಾಗಿದೆ.
ಈ ಬಾರಿಯ ನಗರ ಪ್ರದಕ್ಷಿಣೆ ಮತ್ತು ಗ್ರಾಮ ಸಂಚಾರದ ವೇಳೆ ಪಿಲಿ ಭೂತವು ಓರ್ವನನ್ನು ಸ್ಪರ್ಶಿಸಿದ್ದು ಸ್ಪರ್ಷದ ಬಳಿಕ ದೈವಸ್ಥಾನಕ್ಕೆ ಓಡಿ ಬಂದು ಪೂರ್ವ ಸಂಪ್ರದಾಯದ ಪದ್ಧತಿಗಳನ್ನು ನೆರವೇರಿಸಲಾಯಿತು.
ಸಹಸ್ರಾರು ಮಂದಿ ಭಾಗಿ
ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಮುಂಬಯಿ ಸೇರಿದಂತೆ ದೇಶ-ವಿದೇಶಗಳಿಂದ ಬಂದಿರುವ ಸಹಸ್ರಾರು ಸಂಖ್ಯೆಯ ಭಕ್ತರು ಮತ್ತು ಜಾನಪದಾಸಕ್ತರು ಪಿಲಿ ಕೋಲಕ್ಕೆ ಸಾಕ್ಷಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.