IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ ಕೋಲ್ಕತಾ ನೈಟ್‌ರೈಡರ್:ಪ್ಲೇ ಆಫ್ ತೇರ್ಗಡೆಗೆ ಹೋರಾಟ
ಚೆನ್ನೈ ಸೂಪರ್ ಕಿಂಗ್ಸ್‌ಗೆ ಪಂಜಾಬ್ ಕಿಂಗ್ಸ್ ಸವಾಲು...ಹೊಸ ಅವತಾರದಲ್ಲಿ ಧೋನಿ
Team Udayavani, May 5, 2024, 6:31 AM IST
ಲಕ್ನೊ: ಅಂಕಪಟ್ಟಿಯಲ್ಲಿ ಸದ್ಯ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಕೋಲ್ಕತಾ ನೈಟ್
ರೈಡರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ರವಿವಾರದ ಎರಡನೇ ಪಂದ್ಯದಲ್ಲಿ ಮುಖಾಮುಖೀ ಯಾಗಲಿದ್ದು ಪ್ಲೇ ಆಫ್ ತೇರ್ಗಡೆಯ ಅವಕಾಶವನ್ನು ದೃಢಪಡಿಸಲು ಹೋರಾಡಲಿದೆ.
ಶನಿವಾರದ ಪಂದ್ಯದಲ್ಲಿ ಸರ್ವಾಂ ಗೀಣ ಆಟದ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ತಂಡವನ್ನು ಅವರದೇ ನೆಲದಲ್ಲಿ 24 ರನ್ನುಗಳಿಂದ ಕೆಡಹಿದ ಕೆಕೆಆರ್ ತಂಡವು ಇದೀಗ ಆಟಿದ 11 ಪಂದ್ಯಗಳಿಂದ 7ರಲ್ಲಿ ಜಯ ಸಾಧಿಸಿ 14 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇನ್ನೊಂದು ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಪ್ಲೇ ಆಫ್ಗೆ ತೇರ್ಗಡೆ ಬಹುತೇಕ ಖಚಿತವಾಗಲಿದೆ.
ಆಡಿದ 10 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು 12 ಅಂಕ ಹೊಂದಿರುವ ಲಕ್ನೋ ತಂಡ ಸದ್ಯ ಮೂರನೇ ಸ್ಥಾನದಲ್ಲಿದೆ. ಪ್ಲೆ ಆಫ್ ತೇರ್ಗಡೆಗೆ ಲಕ್ನೋ ಜತೆ ಹೈದರಾಬಾದ್ (12 ಅಂಕ) ತಲಾ 10 ಅಂಕ ಹೊಂದಿರುವ ಚೆನ್ನೈ ಮತ್ತು ಡೆಲ್ಲಿ ತೀವ್ರ ಪೈಪೋಟಿ ನೀಡುವ ಕಾರಣ ಲಕ್ನೋ ತಂಡಕ್ಕೆ ಕೆಕೆಆರ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡವಿದೆ. ಈ ನಾಲ್ಕು ತಂಡಗಳು ಪ್ರಬಲ ತಂಡಗಳೇ ಆಗಿರುವುದರಿಂದ ಮುಂದಿನ ಬಹುತೇಕ ಎಲ್ಲ ಪಂದ್ಯಗಳು ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದ್ದು ಗೆಲುವಿಗಾಗಿ ಎಲ್ಲ ತಂಡಗಳೂ ಕಠಿನ ಪ್ರಯತ್ನ ನಡೆಸಲಿವೆ.
ನಾಯಕ ರಾಹುಲ್ ಮತ್ತು ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ತಂಡದ ಪ್ರಮುಖ ಆಟಗಾರರಾಗಿ ದ್ದಾರೆ. ಕ್ವಿಂಟನ್ ಡಿ ಕಾಕ್, ನಿಕೋಲಾಸ್ ಪೂರಣ್, ದೀಪಕ್ ಹೂಡ, ಆಯುಷ್ ಬದೋನಿ ಉತ್ತಮವಾಗಿ ಆಡಿದರೆ ಲಕ್ನೋ ಮೇಲುಗೈ ಸಾಧಿಸಬಹುದು.
ಲಕ್ನೋ ತಂಡವನ್ನು ಗಮನಿಸಿದರೆ ಕೆಕೆಆರ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಮುಂಬೈ ವಿರುದ್ಧ ಶನಿವಾರದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಹೊರತುಪಡಿಸಿ ಉಳಿದವರು ಬ್ಯಾಟಿಂಗ್‌ನಲ್ಲಿ ವಿಫಲ ರಾಗಿದ್ದರು. ಆದರೆ ಅದ್ಭುತ ರೀತಿಯಲ್ಲಿ ಬೌಲಿಂಗ್ ದಾಳಿ ಸಂಘಟಿಸಿ ಮುಂಬೈ ಯನ್ನು 145 ರನ್ನಿಗೆ ಕಟ್ಟಿ ಹಾಕಿರವುದು ತಂಡದ ಬೌಲರ್‌ಗಳ ಶಕ್ತಿಯನ್ನು ತೋರಿಸುತ್ತದೆ.
ಪಿಚ್ ವರದಿ
ಇಲ್ಲಿನ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿದೆ. ತಂಡ ವೊಂದು 170ರಿಂದ 180 ರನ್ ಗಳಿಸಿ ದರೆ ಗೆಲುವು ದಾಖಲಿಸುವ ಸಾಧ್ಯತೆ ಯಿದೆ. ಸ್ಪಿನ್ನರ್‌ಗಳು ಮೇಲುಗೈ ಸಾಧಿ ಸುವ ಸಂಭವವಿದೆ. ಇಲ್ಲಿನ ತಾಪಮಾನ ಸಂಜೆಯ ವೇಳೆ 33 ಡಿ.ಸೆ. ಇರಲಿದ್ದು ಮಳೆ ಬರುವ ಸಾಧ್ಯತೆಯಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್‌ಗೆ ಪಂಜಾಬ್ ಕಿಂಗ್ಸ್ ಸವಾಲು
ತಿರುಗೇಟು ನೀಡಲು ಚೆನ್ನೈ ಸಜ್ಜು
ಧರ್ಮಶಾಲಾ, ಮೇ 4: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರವಿವಾರ ನಡೆಯುವ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಸತತ ಎರಡನೇ ಬಾರಿ ಪಂಜಾಬ್ ಸವಾಲನ್ನು ಎದುರಿಸಲಿರುವ ಚೆನ್ನೈ ಈ ಬಾರಿ ತಿರುಗೇಟು ನೀಡಲು ಸಜ್ಜಾಗಿದೆ.
ಮೂರು ದಿನಗಳ ಹಿಂದೆ ಚೆನ್ನೈ ನೆಲದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು ಚೆನ್ನೈಯನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿತ್ತು. ಇದರಿಂದ ಚೆನ್ನೈ ತೀವ್ರ ಆಘಾನ ಅನುಭವಿಸಿತ್ತು. ಐದು ಬಾರಿಯ ಚಾಂಪಿಯನ್ ಆಗಿರುವ ಚೆನ್ನೈ ಸದ್ಯ 10 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದು ಪ್ಲೇ ಆಫ್ಗೆ
ತೇರ್ಗಡೆಯಾಗಲು ಇನ್ನುಳಿದ ಪಂದ್ಯಗಳಲ್ಲಿ ಶ್ರೇಷ್ಠ ನಿರ್ವಹಣೆ ನೀಡಬೇಕಾಗದ ಅಗತ್ಯವಿದೆ.
ಕಳೆದ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ತೀವ್ರ ಕಳಪೆಯಾಗಿತ್ತು. ಅನುಭವಿ ಆಟಗಾರರಾದ ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ರವೀಂದ್ರ ಜಡೇಜ, ಧೋನಿ ಬ್ಯಾಟಿಂಗ್‌ನಲ್ಲಿ ಮಿಂಚಬೇಕಾಗಿದೆ. ತಂಡದ ಪ್ರಮುಖ ಬೌಲರ್‌ಗಳಾದ ಮತೀಶ ಪತಿರಣ ಮತ್ತು ತುಷಾರ್ ದೇಶಪಾಂಡೆ ಅವರ ಅನುಪಸ್ಥಿತಿಯೂ ಪಂಜಾಬ್ ವಿರುದ್ಧ ಸೋಲಿಗೆ ಕಾರಣವಾಗಿದೆ.
ಪಂಜಾಬ್‌ಗೆ ವಿಶ್ವಾಸ
ಇದೇ ವೇಳೆ ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಪಂಜಾಬ್ ಸದ್ಯ ಎಂಟಂಕದೊಂದಿಗೆ 7ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಗೆ ತೇರ್ಗಡೆಯಾಗುವ ವಿಶ್ವಾಸದೊಂದಿಗೆ ಹೋರಾಡುತ್ತಿದೆ. ಕೆಕೆಆರ್ ವಿರುದ್ಧ ಶತಕ ಸಿಡಿಸಿರುವ ಜಾನಿ ಬೇರ್‌ಸ್ಟೋ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಅವರೊಂದಿಗೆ ರಿಲೀ ರೊಸೊ, ಶಶಾಂಕ್ ಸಿಂಗ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ತಂಡದ ಬ್ಯಾಟಿಂಗನ್ನು ಬಲಪಡಿಸಲಿದ್ದಾರೆ.
ಬೌಲಿಂಗ್‌ನಲ್ಲಿ ಕಾಗಿಸೊ ರಬಾಡ ಅವರು ಅದ್ಭುತ ನಿರ್ವಹಣೆ ನೀಡುತ್ತಿದ್ದಾರೆ.
ಪಿಚ್ ವರದಿ
ಇಲ್ಲಿನ ಪಿಚ್ ವೇಗಿಗಳಿಗೆ ನೆರವಾಗುವ ನಿರೀಕ್ಷೆಯಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ ದೊಡ್ಡ ಮೊತ್ತ ಪೇರಿಸಲು ಪ್ರಯತ್ನಿಸಲಿದ್ದರೆ ಚೇಸಿಂಗ್ ಮಾಡುವ ತಂಡ ಗುರಿ ತಲುಪಲು ಒದ್ದಾಡುವ ಸಾಧ್ಯತೆಯಿದೆ.
ಹೊಸ ಅವತಾರದಲ್ಲಿ ಧೋನಿ
ರವಿವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಧರ್ಮಶಾಲಾಕ್ಕೆ ಬಂದಿಳಿದಾಗ ಧೋನಿ ಕಟ್ಟಿದ ಉದ್ದ ಕೂದಲು, ಕೂಲಿಂಗ್ ಗ್ಲಾಸ್ ಧರಿಸಿ ಹೊಸ ಲುಕ್‌ನಲ್ಲಿದ್ದರು. ಈ ಐಪಿಎಲ್ ಆವೃತ್ತಿಯಲ್ಲಿ ಧೋನಿ ತನ್ನ ಕೇಶ ವಿನ್ಯಾಸವನ್ನು ಹಲವಾರು ಬಾರಿ ಬದಲಾಯಿಸಿಕೊಂಡಿದ್ದಾರೆ. ಆದರೆ ಧರ್ಮಶಾಲಾದಲ್ಲಿ ಧೋನಿ ಇನ್ನೂ ಭಿನ್ನವಾಗಿ ಕಾಣಿಸುತ್ತಿದ್ದರು.
ಇನ್ನುಳಿದ ಪಂದ್ಯಗಳಿಗೆ ಮಾಯಾಂಕ್ ಯಾದವ್ ಇಲ್ಲ ?
ವೇಗಿ ಮಾಯಾಂಕ್ ಯಾದವ್ ಅವರು ಗಾಯದ ಸಮಸ್ಯೆ ಯಿಂದಾಗಿ ಐಪಿಎಲ್‌ನ ಇನ್ನುಳಿದ ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ಲಕ್ನೋ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಮಾಯಾಂಕ್ ಅವರ ಫಿಟ್‌ನೆಸ್ ಸ್ಥಿತಿ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಲ್ಯಾಂಗರ್ ಅವರು ಈ ಬಗ್ಗೆ ಏನೂ ಹೇಳುವುದಿಲ್ಲ. ಆದರೆ ಅವರು ಪ್ಲೇ ಆಫ್ನಲ್ಲಿ ಆಡುವ ಸಾಧ್ಯತೆಯಿದೆ. ಆದರೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.