![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 5, 2024, 10:39 AM IST
ಛತ್ತೀಸ್‌ಗಢ್: ಮೊಬೈಲ್ ನಲ್ಲಿ ಯಾವಾಗಾಲೂ ಹುಡುಗರ ಜೊತೆ ಮಾತನಾಡುತ್ತಿದ್ದ ತಂಗಿಯನ್ನು ಗದರಿದಕ್ಕೆ ಹಿರಿಯ ಸಹೋದರನನ್ನೇ ಹತ್ಯೆಗೈದಿರುವ ಘಟನೆ ಛತ್ತೀಸ್‌ಗಢದ ಖೈರಗಢ್-ಚುಯಿಖಾದನ್-ಗಂಡೈ (ಕೆಸಿಜಿ) ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಶುಕ್ರವಾರ(ಮೇ.3 ರಂದು) ಚುಯಿಖಾಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಲಿದಿಹ್ಕಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
14 ವರ್ಷದ ತನ್ನ ತಂಗಿ ಯಾವಾಗಲೂ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು. ಹುಡುಗರ ಜೊತೆ ಫೋನಿನಲ್ಲಿ ಮಾತನಾಡಬೇಡ ಎಂದು ಹಿರಿಯ ಸಹೋದರ ತಂಗಿಯನ್ನು ಗದರಿ, ಫೋನ್ ಬಳಸಬೇಡ ಎಂದು ಎಚ್ಚರಿಸಿದ್ದಾನೆ.
ಆದರೆ ಇದಕ್ಕೆ ಸಿಟ್ಟಾದ ಬಾಲಕಿ ಅಣ್ಣ ಮಲಗಿದ್ದ ವೇಳೆ ಕುತ್ತಿಗೆಗೆ ಕೊಡಲಿಯಿಂದ ಹೊಡೆದಿದ್ದಾಳೆ. ಪರಿಣಾಮ ಸಹೋದರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಣ್ಣನನ್ನು ಹತ್ಯೆಗೈದ ಬಳಿಕ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ತನ್ನ ಸಹೋದರನನ್ನು ಕೊಲೆ ಮಾಡಿದ್ದೇನೆ ಎಂದು ತನ್ನ ನೆರೆಹೊರೆಯವರಿಗೆ ತಿಳಿಸಿದ್ದಾಳೆ.
ಈ ಕೃತ್ಯದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯವೆಸಗಿದ ಬಾಲಕಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.