IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ
Team Udayavani, May 5, 2024, 12:08 PM IST
ಬೆಂಗಳೂರು: ಸೀಸನ್ ನ ಆರಂಭದಲ್ಲಿ ಆಟ ಮರೆತವರಂತೆ ಆಡಿ ಇದೀಗ ಎಚ್ಚೆತ್ತಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವು ಸತತ ಪಂದ್ಯ ಗೆಲ್ಲುತ್ತಿದೆ. ಶನಿವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಸುಲಭ ಜಯ ಸಾಧಿಸಿದೆ. ಚಿನ್ನಸ್ವಾಮಿ ಪಂದ್ಯದ ಗೆಲುವಿನ ಮೂಲಕ ಆರ್ ಸಿಬಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದೆ.
ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು 11 ಪಂದ್ಯಗಳಿಂದ ಎಂಟು ಅಂಕಗಳನ್ನು ಹೊಂದಿದೆ. ಇದೀಗ ಮತ್ತೆ ಆರ್ ಸಿಬಿಯ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಹಾಗಾದರೆ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದ ನಂತರ ಆರ್ ಸಿಬಿ ಪ್ಲೇಆಫ್ ಗೆ ಹೇಗೆ ಅರ್ಹತೆ ಪಡೆಯಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಆರ್ ಸಿಬಿ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ ಗರಿಷ್ಠ 14 ಅಂಕಗಳನ್ನು ಪಡೆಯಬಹುದು. ಗುಜರಾತ್ ವಿರುದ್ಧ 38 ಎಸೆತಗಳು ಬಾಕಿ ಇರುವಾಗಲೇ ಜಯ ಗಳಿಸಿದ ಕಾರಣ ಅದರ ನೆಟ್ ರನ್ ರೇಟ್ ಹೆಚ್ಚಿಸಿದೆ. ಅದು ಪ್ಲೇಆಫ್ ಗೆ ಅಗತ್ಯ ಬೀಳಬಹುದು. ಆರ್ ಸಿಬಿ ತನ್ನ ಉಳಿದ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.
ಪ್ಲೇ ಆಫ್ ಕನಸು ಜೀವಂತವಿರಿಸಲು ಆರ್ ಸಿಬಿ ಮುಂದಿನ ತನ್ನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಅಲ್ಲದೆ ಅದು ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಗಿರಲಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ ತಂಡಗಳಲ್ಲಿ ಒಂದು ತಂಡವು ಮುಂದಿನ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆಯಬಾರದು. ಉಭಯ ತಂಡಗಳು 10 ಪಂದ್ಯಗಳಿಂದ 12 ಅಂಕಗಳನ್ನು ಹೊಂದಿವೆ.
It’s Bowling Coach Adam Griffith’s turn to address the team, and sounds like he’s a numbers man! 😎😉
Watch some key moments from the dressing room chat after beating GT twice in a row. 📝#PlayBold #ನಮ್ಮRCB #IPL2024 #RCBvGT pic.twitter.com/1FWSdyqgUO
— Royal Challengers Bengaluru (@RCBTweets) May 5, 2024
ಇದಲ್ಲದೆ, 10 ಅಂಕಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆಯಬಾರದು. ಅದೇ ರೀತಿ, ಪಂಜಾಬ್ ಕಿಂಗ್ಸ್, 10 ಪಂದ್ಯಗಳಿಂದ ಎಂಟು ಅಂಕಗಳನ್ನು ಹೊಂದಿದ್ದು, ಮೂರಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಬಾರದು.
ಈ ಸನ್ನಿವೇಶಗಳನ್ನು ಆಡಿದರೆ, ಆರು ತಂಡಗಳು 14 ಅಂಕಗಳಲ್ಲಿ ಸಮನಾಗಿರುತ್ತವೆ, ಆಗ ನೆಟ್ ರನ್ ರೇಟ್ ಪ್ರಮುಖ ಪಾತ್ರ ವಹಿಸುತ್ತದೆ.
ಆರ್ ಸಿಬಿ ಒಂದು ಪಂದ್ಯದಲ್ಲಿ ಸೋತರೂ 12 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಪ್ರವೇಶಿಸುವ ಸಾಧ್ಯತೆಯಿದೆ. ಒಂದು ವೇಳೆ ಮೇಲೆ ತಿಳಿಸಿದ ತಂಡಗಳು 12 ಅಂಕಗಳಿಗಿಂತ ಹೆಚ್ಚು ಗಳಿಸಬಾರದು. ಆಗಲೂ ನೆಟ್ ರನ್ ರೇಟ್ ಪ್ರಮುಖ ಪಾತ್ರ ವಹಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.