Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು
Team Udayavani, May 6, 2024, 1:25 AM IST
ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಆಗಾಗ ಕಾಡಾನೆಗಳು ಜೀವ ಬಲಿ ಪಡೆಯುತ್ತಿದ್ದು, ಇಲ್ಲಿನ ಜನ ಕೂಲಿ ಕೆಲಸಕ್ಕೆ ತೆರಳಲು ಭಯಭೀತರಾಗಿದ್ದಾರೆ.
ಇತ್ತೀಚೆಗೆ “ಬೀಟಮ್ಮ ಗ್ಯಾಂಗ್’ (ಅರಣ್ಯ ಇಲಾಖೆ ಇಟ್ಟ ಹೆಸರು) ಕಾಡಾನೆಗಳ ಹಿಂಡು ಇಲ್ಲಿನ ಜನರ ನಿದ್ದೆಗೆಡಿಸಿತ್ತು. ಒಂಟಿ ಸಲಗವೊಂದು ಈ ಭಾಗದಲ್ಲಿ ಸಂಚರಿಸುತ್ತಲೇ ಇದೆ. ಕಾಡಾನೆಗಳು ಮಾನವ ಜೀವಕ್ಕೆ ಹಾನಿ ಮಾಡುತ್ತಿರುವುದಲ್ಲದೆ ರೈತರು ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತಿವೆ. ಕಾಡಾನೆಗಳ ಹಾವಳಿ ಮಲೆನಾಡಿನ ಜನರಿಗೆ ದೊಡ್ಡ ತಲೆನೋವಾಗಿದೆ. ಜಿಲ್ಲೆಯ ಚಿಕ್ಕಮಗಳೂರು ವಿಭಾಗದಲ್ಲಿ ಕಳೆದ ಐದು ವರ್ಷಗಳಲ್ಲಿ ಕಾಡಾನೆ 15 ಜನರನ್ನು ಬಲಿ ಪಡೆದಿವೆ.ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಗಟ್ಟಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ.
ಮೂಡಿಗೆರೆಯಲ್ಲೇ ಹೆಚ್ಚು
ಮೂಡಿಗೆರೆ ತಾಲೂಕು ಊರುಬಗೆಯ ಕುಂಬರಡಿ ಗ್ರಾಮದ ಸುನಿಲ್ 2018ರ ಅ.23ರಂದು ಕಾಡಾನೆ ದಾಳಿಗೆ ಮೃತಪಟ್ಟಿದ್ದರೆ, 2019ರ ಜ.22ರಂದು ಜಾಗರ ಹೋಬಳಿ ಗೊಣಕಲ್‌ನ ಕುಮಾರನಾಯ್ಕ, ಮಲ್ಲೇನಹಳ್ಳಿಯ ಪ್ರೇಮನಾಥ, 2019ರ ಮಾ.10ರಂದು ಮೂಡಿಗೆರೆ ತಾಲೂಕು ಕೋಗಿಲೆಯ ಜಯಮ್ಮ 2019ರ ಜು.30ರಂದು, ಶಿರಗೂರಿನ ರಂಗಯ್ಯ, 2019ರ ನ.11ರಂದು, 2021 ಜು. 5ರಂದು ಅರಣ್ಯ ರಕ್ಷಕ ಪುಟ್ಟರಾಜು ಗಲ್ಲನ್‌ಪೇಟೆ ಕಾಡಾನೆಯನ್ನು ಕಾಡಿಗಟ್ಟಲು ತೆರಳಿದ್ದ ವೇಳೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
2022ರ ಮಾ.26ರಂದು, ಕೆಳಗೂರು ಕಬ್ಬಿಣ ಸೇತುವೆ ಸಮೀಪ ಸರೋಜಬಾಯಿ ಆನೆ ದಾಳಿಗೆ ಸಿಲುಕಿ ಮೃತಟ್ಟಿದ್ದಾರೆ. ಮೂಡಿಗೆರೆ ಕೆಂಜಿಗೆ ಗ್ರಾಮದಲ್ಲಿ 2022ರ ಆ.15ರಂದು ಆನಂದ ದೇವಾಡಿಗ, ಮೂಡಿಗೆರೆ ತಾಲೂಕು ಊರುಬಗೆ ಕುಂಬರಡಿಯ ಅರ್ಜುನ್ 2022ರ ಸೆ.8ರಂದು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. 2022 ನ.20ರಂದು ಕುಂದೂರಿನ ಶೋಭಾ, ಅರೆನೂರು ಬಳಿ ಕಿನ್ನಿ 2023ರ ಜು.5ರಂದು, ಹೆಡದಾಳು ಬಳಿ ಮೀನಾ 2023ರ ಜ.8ರಂದು, ಆನೆ ನಿಗ್ರಹ ಪಡೆಯ ದಿನಗೂಲಿ ನೌಕರ ಕಾರ್ತಿಕ್ ಗೌಡ 2023ರ ನ.22ರಂದು ಮೃತಪಟ್ಟಿದ್ದಾರೆ.
ಕೆ.ಆರ್.ಪೇಟೆ ಸಮೀಪದ ದಾನಿಹಳ್ಳಿ ಗ್ರಾಮದ ಶ್ರೀಧರ್ ಹಾಗೂ ಆಲ್ದೂರು ಸಮೀಪದ ಕಂಚಿನಕಲ್ ದುರ್ಗಾದ ಸಮೀಪದ ಕೆಸುವಿನಕಲ್ ಕಾಫಿ ಎಸ್ಟೇಟ್‌ನ ಕೂಲಿ ಕಾರ್ಮಿಕ ಆನಂದ ಪೂಜಾರಿ (55) ಅವರನ್ನು ಕಾಡಾನೆ ತುಳಿದು ಸಾಯಿಸಿದೆ. ಮಲ್ಲೇನಹಳ್ಳಿ ಸಮೀಪದ ಹಲಸುಬಾಳಿನ ಕೆಂಚೇಗೌಡ ಕಾಡುಹಂದಿ ದಾಳಿಯಿಂದ ಮೃತಪಟ್ಟಿದ್ದಾರೆ. ವನ್ಯಜೀವಿಗಳ ದಾಳಿ ಯಿಂದ ಕಳೆದ ಐದು ವರ್ಷಗಳಲ್ಲಿ 16 ಜನ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Chikkamagaluru: ತಾಯಿ ಮನೆಗೆ ಬರಲಿಲ್ಲ ಎಂದು ಮಾವನ ಮೇಲೆ ಮಚ್ಚು ಬೀಸಿದ ಅಳಿಯ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್
ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.