![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 6, 2024, 8:51 AM IST
ಹೈದರಾಬಾದ್: ಬಹುಭಾಷಾ ನಟಿ ಸಮಂತಾ ಕಳೆದ ಕೆಲ ಸಮಯದಿಂದ ಅನಾರೋಗ್ಯ ಕಾರಣದಿಂದ ಚಿತ್ರರಂಗದಿಂದ ದೂರುವಾಗಿದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬದಂದು ಅವರು ಕಂಬ್ಯಾಕ್ ಮಾಡಲಿರುವ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ಮಯೋಸೈಟಿಸ್ ಎನ್ನುವ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸಿನಿಮಾದಲ್ಲಿ ನಟಿಸುವುದು ಕಡಿಮೆ ಆಗಿದೆ ವಿನಃ ಸಂಪೂರ್ಣವಾಗಿ ಅವರು ಸಿನಿಮಾರಂಗದಿಂದ ದೂರವಾಗಿಲ್ಲ. ಪ್ರವಾಸ – ಪಯಣ ಹೀಗೆ ನಾನಾ ಹವ್ಯಾಸಗಳೊಂದಿಗೆ ಅವರು ದಿನ ಕಳೆಯುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಆ್ಯಕ್ಟಿವ್ ಆಗಿರುತ್ತಾರೆ. ಭಾನುವಾರ(ಮೇ.5 ರಂದು) ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಸ್ಟೋರಿಯೊಂದು ವೈರಲ್ ಆಗಿರುವುದರ ಜೊತೆಗೆ ಒಂದಷ್ಟು ವಿವಾದಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ‘ಫಾರ್ ಇನ್‌ಫ್ರಾರೆಡ್ ಸೌನಾ’ ವಿಧಾನದ ಉಪಯೋಗದ ಕುರಿತು ಫೋಟೋವನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.
‘ಫಾರ್ ಇನ್‌ಫ್ರಾರೆಡ್ ಸೌನಾ’ ಎಂದರೆ ದೀರ್ಘಕಾಲದ ಕಾಯಿಲೆಗಳು, ಚರ್ಮದ ಸೌಂದರ್ಯ, ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯವಾಗುವ ವಿಧಾನ. ಈ ವಿಧಾನದಲ್ಲಿ ಅನುಸರಿಸುವವರು ಸ್ವಲ್ಪ ಸಮಯ ಬಾತ್ ಟಬ್ ನಲ್ಲಿರಬೇಕಾಗುತ್ತದೆ. ಸಮಂತಾ ಟವೆಲ್ ವೊಂದನ್ನು ಸುತ್ತಿಕೊಂಡು ಬಾತ್ ಟಬ್ ನಲ್ಲಿ ಕೂತು ಈ ವಿಧಾನವನ್ನು ಅನುಸರಿಸಿದ್ದರು.
ಇದರ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಸಮಂತಾ ಟವೆಲ್ ಹಾಕಿ ಕೂತಿರುವ ಫೋಟೋ ಪೋಸ್ಟ್ ಮಾಡುವ ಮುನ್ನ, ಬೆತ್ತಲಾಗಿರುವ ದೇಹದ ಫೋಟೋವನ್ನು ಹಂಚಿಕೊಂಡಿದ್ದರು. ಕೂಡಲೇ ಅದನ್ನು ಅವರು ಡಿಲೀಟ್ ಮಾಡಿದ್ದಾರೆ ಎನ್ನುವ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಮಂತಾ ಅವರು ಇದನ್ನು ಪೋಸ್ಟ್ ಮಾಡಿದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಟ್ರೆಂಡ್ ಆಗಿದ್ದಾರೆ. ಸಮಂತಾ ಅವರೇ ತಮ್ಮ ಬೆತ್ತಲೆ ಫೋಟೋವನ್ನು ಶೇರ್ ಮಾಡಿ ಡಿಲೀಟ್ ಮಾಡಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಅಭಿಮಾನಿಗಳು ಹಾಗೂ ನೆಟ್ಟಿಗರಲ್ಲಿ ಈ ವಿಚಾರ ಜಟಾಪಟಿಗೆ ಕಾರಣವಾಗಿದೆ. ಇಲ್ಲ ಸ್ಯಾಮ್ ಹೀಗೆ ಮಾಡಿಲ್ಲ ಇದನ್ನು ಮಾರ್ಫ್ ಮಾಡಿದ್ದಾರೆ. ಇದೊಂದು ಫೇಕ್ ಫೋಟೋವೆಂದು ಅಭಿಮಾನಿಗಳು ವಾದಿಸಿದ್ದಾರೆ.
ಇನ್ನೊಂದೆಡೆ ಫೇಕ್ ಆದರೆ ಸಮಂತಾ ಕತ್ತಿನಲ್ಲಿರುವ ಸರ ಒಂದೇ ರೀತಿ ಯಾಕಿದೆ ಎಂದು ಕೆಲವರು ಮರು ಪ್ರಶ್ನೆಯನ್ನು ಹಾಕಿದ್ದಾರೆ.
ಬಾತ್ ಟಬ್ ನಲ್ಲಿ ಬೆತ್ತಲಾಗಿ ಕೂತಿರುವ ಯುವತಿಯ ಫೋಟೋ ವೈರಲ್ ಆಗಿದೆ. ಆದರ ಅದರಲ್ಲಿ ಆಕೆಯ ಮುಖ ಕಾಣುತ್ತಿಲ್ಲ.
ಸದ್ಯ ಸಮಂತಾ ‘ಸಿಟಾಡೆಲ್’ ಹಿಂದಿ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಅವರು ʼಬಂಗಾರಂʼ ಎನ್ನುವ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.