Housefull 5: ಕಾಮಿಡಿ ಜರ್ನಿಯ ʼಹೌಸ್ ಫುಲ್ʼ ಕುಟುಂಬಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ
Team Udayavani, May 6, 2024, 1:30 PM IST
ಮುಂಬಯಿ: ʼಹೌಸ್ ಫುಲ್ʼ ಬಾಲಿವುಡ್ ಜನಪ್ರಿಯ ಫ್ರಾಂಚೈಸಿ ಸಿನಿಮಾಗಳಲ್ಲಿ ಒಂದು. ʼಹೌಸ್ ಫುಲ್ -5ʼ ಅನೌನ್ಸ್ ಆದ ಬಳಿಕ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.
ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಚಿತ್ರತಂಡ ಬಾಲಿವುಡ್ ನ ಖ್ಯಾತ ನಟನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹಾಸ್ಯದ ಪಯಣಕ್ಕೆ ಹೊಸ ನಟನೊಬ್ಬನ ಸೇರ್ಪಡೆಯಾಗಿದೆ.
ಇದುವರೆಗೆ ರಿಲೀಸ್ ಆಗಿರುವ ʼಹೌಸ್ ಫುಲ್ʼ ಸಿನಿಮಾಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದರ ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿದೆ.
ಈ ಹಿಂದೆಯೇ ʼಹೌಸ್ ಫುಲ್ -5ʼ ಸಿನಿಮಾ ಅನೌನ್ಸ್ ಆಗಿದ್ದು,ಇದೀಗ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ನಟ ಅಭಿಷೇಕ್ ಬಚ್ಚನ್ ʼಹೌಸ್ ಫುಲ್ʼ ಫ್ಯಾಮಿಲಿಗೆ ಬಂದಿರುವುದಾಗಿ ಸಾಜಿದ್ ಹೇಳಿದ್ದಾರೆ.
ʼಹೌಸ್ ಫುಲ್ -5ʼ ನಲ್ಲಿ ಅಕ್ಷಯ್ ಕುಮಾರ್, ಅನಿಲ್ ಕಪೂರ್, ನಾನಾ ಪಾಟೇಕರ್, ರಿತೇಶ್ ದೇಶಮುಖ್ ಮತ್ತು ಚಂಕಿ ಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಅಭಿಷೇಕ್ ಬಚ್ಚನ್ ಸೇರಿಕೊಂಡಿದ್ದಾರೆ.
ಮೊದಲ ʼಹೌಸ್‌ಫುಲ್ʼ ಸಿನಿಮಾ 2010 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಮತ್ತು ಜಿಯಾ ಖಾನ್, ಅರ್ಜುನ್ ರಾಂಪಾಲ್, ಜಾಕ್ವೆಲಿನ್ ಫರ್ನಾಂಡೀಸ್, ಲಾರಾ ದತ್ತಾ ಮತ್ತು ಚಂಕಿ ಪಾಂಡೆ ಅವರೊಂದಿಗೆ ಅಕ್ಷಯ್ ಕುಮಾರ್ ನಟಿಸಿದ್ದರು. 2012 ರಲ್ಲಿ ಫ್ರ್ಯಾಂಚೈಸ್ ನ ಎರಡನೇ ಭಾಗ ರಿಲೀಸ್ ಆಗಿತ್ತು. ʼಹೌಸ್‌ಫುಲ್ 3ʼ ಮತ್ತು 4 ಕ್ರಮವಾಗಿ 2016 ಮತ್ತು 2019 ರಲ್ಲಿ ಬಿಡುಗಡೆಯಾಯಿತು.
ʼಹೌಸ್‌ಫುಲ್ – 5ʼ ಸಿನಿಮಾವನ್ನು ತರುಣ್ ಮನ್ಸುಖಾನಿ ನಿರ್ದೇಶಿಸಲಿದ್ದಾರೆ. ಇದೇ ವರ್ಷದ ಆಗಸ್ಟ್ ನಲ್ಲಿ ಚಿತ್ರ ಸೆಟ್ಟೇರಲಿದೆ. 2025 ರ ಜೂನ್. 6 ರಂದು ಸಿನಿಮಾ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
UI Movie: ಉಪ್ಪಿ ʼಯುಐʼ ಟ್ರೇಲರ್ ನೋಡಿ ಬಾಲಿವುಡ್ ನಟ ಆಮಿರ್ ಖಾನ್ ಶಾಕ್.!
MUST WATCH
ಹೊಸ ಸೇರ್ಪಡೆ
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.