Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತದಾರರಿಗೆ ಬಿಸಿಲಿನ ಝಳದಿಂದ ರಕ್ಷಣೆ ನೀಡಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ
Team Udayavani, May 7, 2024, 12:10 AM IST
ಬೆಂಗಳೂರು: ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಬೆಳಗ್ಗಿನಿಂದಲೇ ಮತ
ದಾನ ನಡೆಯಲಿದ್ದು, ಚುನಾವಣ ಆಯೋಗ ಸಹಿತ ಆಯಾ ಜಿಲ್ಲಾಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿರುವ ಕಾರಣ, ಮತದಾರರಿಗೆ ಬಿಸಿ ಲಿನ ಝಳದಿಂದ ರಕ್ಷಣೆ ನೀಡಲು ಜಿಲ್ಲಾಡಳಿತ ವಿವಿಧ ಕ್ರಮಗಳನ್ನೂ ಕೈಗೊಂಡಿದೆ.
ಮತದಾರರನ್ನು ಮತಗಟ್ಟೆ ಕೇಂದ್ರಗಳತ್ತ ಆಕರ್ಷಿಸಲು ವಿಶಿಷ್ಟ ಯೋಜನೆಯನ್ನು ಹಮ್ಮಿಕೊಂಡಿರುವ ಆಯಾ ಜಿಲ್ಲಾಡಳಿತ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ಸಂಸ್ಕೃತಿ, ಆಚರಣೆ, ಇತಿಹಾಸಗಳನ್ನು ಬಿಂಬಿಸುವ ಪ್ರಯತ್ನವನ್ನೂ ಮಾಡಿವೆ.
ಮತಗಟ್ಟೆಗಳಿಗೆ ಚಿತ್ರಕಲೆ ಮೆರಗು
ರಬಕವಿ ಬನಹಟ್ಟಿ ತಾಲೂಕಿನ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರು ಹತ್ತಾರು ದಿನಗಳ ಕಾಲ ಶ್ರಮ ವಹಿಸಿ ಮತಗಟ್ಟೆಗಳನ್ನು ಅಲಂಕಾರಗೊಳಿಸಿದ್ದಾರೆ. ರಾಮಪುರದ ಮತಗಟ್ಟೆ ಸಂಖ್ಯೆ 109 ವಿಶೇಷವಾಗಿದ್ದು, ಇಲ್ಲಿಯ ಚಿತ್ರಕಲಾ ಶಿಕ್ಷಕರಾದ ಐ.ಬಿ.ತೇರಣಿಯವರು ವರ್ಲಿಕ್ ಕಲೆಯ ಮೂಲಕ ಮತಗಟ್ಟೆಗೆ ವಿಶೇಷ ಮೆರಗು ತಂದುಕೊಟ್ಟಿದ್ದಾರೆ.
ರಬಕವಿ ಬನಹಟ್ಟಿಯಲ್ಲಿ ನೇಕಾರಿಕೆಯ ಉದ್ಯೋಗ ಇರುವುದರಿಂದ ಇಲ್ಲಿ ಕೈಮಗ್ಗ ನೇಕಾರರ ಹಾಗೂ ನೇಕಾರಿಕೆಗೆ ಅಗತ್ಯವಾಗಿರುವ ಪೂರಕ ಕೆಲಸಗಳ ಚಿತ್ರಗಳನ್ನು ಬಿಡಿಸಲಾಗಿದೆ. ಪಟ್ಟದಕಲ್ಲು ದೇವಸ್ಥಾನವನ್ನು ಚಿತ್ರವನ್ನು ಬಿಡಿಸಿದ್ದು, ಇದು ಅತ್ಯಾಕರ್ಷಕವಾಗಿದೆ.
ಬೀದರ್ ಜಿಲ್ಲೆಯಲ್ಲಿ 1,528 ಮತಗಟ್ಟೆಗಳ ಪೈಕಿ 48 ಸಖೀ, 6 ಥೀಮ್ ಮತಗಟ್ಟೆಗಳು, ತಲಾ 6 ಯುವ ಹಾಗೂ ವಿಶೇಷಚೇತನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ವಿಶೇಷ ಕೇಂದ್ರಗಳನ್ನು ಪೆಂಡಾಲ್, ಬಲೂನ್ ಮತ್ತು ಕಲಾಕೃತಿಗಳ ಮೂಲಕ ಸಿಂಗರಿಸಲಾಗಿದ್ದು, ಇಲ್ಲಿ ವಿಶೇಷ ಸಿಬಂದಿಗಳೇ ಕೇಂದ್ರಗಳನ್ನು ನಿರ್ವಹಣೆ ಮಾಡಲಿದ್ದಾರೆ.
ಮಕ್ಕಳ ಕನಸಿನ ಮತಗಟ್ಟೆ
ಕೂಡ್ಲಿಗಿ ಪಟ್ಟಣದ ಮತಗಟ್ಟೆ ಸಂಖ್ಯೆ 35ರಲ್ಲಿ ವಿದ್ಯಾರ್ಥಿಗಳ ಕನಸು, ಡಾಕ್ಟರ್, ಎಂಜಿನಿಯರಿಂಗ್ ಇನ್ನಿತರ ಉನ್ನತ ಶಿಕ್ಷಣ ಕಲ್ಪನೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಚಿತ್ರಕಲೆಯಿಂದ ಗಮನ ಸೆಳೆಯುತ್ತಿದೆ. ಅರಣ್ಯ ಪರಿಸರ ಸಂರಕ್ಷಣೆಗೆ ಸಂಬಂಧಿ ಸಿ ಚಿತ್ರಕಲೆ ಹಾಗೂ ಸಸಿಗಳನ್ನು ಮತಗಟ್ಟೆ ಆವರಣದಲ್ಲಿ ಆಕರ್ಷಣೀಯವಾಗಿ ಇರಿಸಿರುವುದರಿಂದ ಹರಪನಹಳ್ಳಿಯ ಮತಗಟ್ಟೆ ಆಕರ್ಷಿಸುತ್ತಿದೆ.
ಮೆಣಸಿನಕಾಯಿ ಮತಗಟ್ಟೆ
ಬ್ಯಾಡಗಿ ಪಟ್ಟಣದ ಮತಗಟ್ಟೆ ಸಂಖ್ಯೆ-139 ಹಾಗೂ 107 (ಇಂಗಳಗೊಂದಿ) ಅನ್ನು ಪಿಂಕ್ ಬೂತ್‌ಗಳಾಗಿ ಪರಿವರ್ತಿಸಲಾಗಿದೆ.
ಮೋಟೆಬೆನ್ನೂರಿನ ಮತಗಟ್ಟೆ ಸಂಖ್ಯೆ 80ನ್ನು ಮೆಣಸಿನಕಾಯಿ ಬೂತ್ ನಿರ್ಮಿಸಲಾಗಿದೆ. ಧಾರವಾಡದಲ್ಲಿ ಮತದಾರರ ಆಕರ್ಷಿಸಲು ಪ್ರಸೆಂಟೇಶನ್ ಪ್ರೌಢ ಶಾಲೆಯಲ್ಲಿ ಪೇಡಾ ಮತಗಟ್ಟೆ ನಿರ್ಮಿಸಲಾಗಿದೆ. ಮತಗಟ್ಟೆಯ ಮೇಲೆ ಧಾರವಾಡ ಪೇಡಾ ಇರುವ ಚಿತ್ರಗಳನ್ನು ಬಿಡಿಸುವ ಮೂಲಕ ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಕಲಘಟಗಿಯಲ್ಲಿ ಲಂಬಾಣಿ ಸಂಪ್ರದಾಯ ಬಿಂಬಿಸುವ ಮತಗಟ್ಟೆ ಸ್ಥಾಪಿಸಲಾಗಿದೆ. ಕಲಘಟಗಿ ಪಪಂ ಮತಗಟ್ಟೆಯಲ್ಲಿ ಪ್ರಸಿದ್ಧ ತೊಟ್ಟಿಲು ಮಾದರಿಗಳು ಗಮನ ಸೆಳೆದಿವೆ.
ಹುಬ್ಬಳ್ಳಿಯಲ್ಲಿ ಮತ ಹಾಕಿ ಬಂದವರಿಗೆ 5 ರೂ.ಗೆ ಇಡ್ಲಿ
ಹುಬ್ಬಳ್ಳಿ: ಇಲ್ಲಿನ ಇಡ್ಲಿ ಮಾರಾಟ ವ್ಯಾಪಾರಿಯೊಬ್ಬರು ಮತದಾನ ಮಾಡಿ ಬಂದವರಿಗೆ ಬೆಳಗ್ಗೆ 11 ಗಂಟೆಯವರೆಗೆ ಕೇವಲ 5 ರೂ.ನಲ್ಲಿ ಇಡ್ಲಿ ನೀಡಲು ಮುಂದಾಗಿದ್ದರೆ, ಇನ್ನೊಬ್ಬ ವ್ಯಾಪಾರಿ ಮತದಾನ ಮಾಡಿ ಬಂದವರಿಗೆ ಉಚಿತ ಚಹಾ ನೀಡಲು ಮುಂದೆ ಬಂದಿದ್ದಾರೆ. ಹುಬ್ಬಳ್ಳಿಯ ಪ್ರತಿಷ್ಠಿತ ಹನ್ಸ್ ಹೊಟೇಲ್‌ನಲ್ಲಿ ಮತದಾನ ಮಾಡಿ ಬಂದವರಿಗೆ ಭೋಜನ ದರದಲ್ಲಿ ಶೇ.20ರಷ್ಟು ರಿಯಾಯಿತಿ ನೀಡಲಿದೆ. ಇನ್ನು ಡೈರಿಸ್ ಐಸ್‌ಕ್ರೀಂ ಕಂಪೆನಿ ಮತದಾನ ಮಾಡಿ ಬಂದವರಿಗೆ ಉಚಿತವಾಗಿ ಐಸ್‌ಕ್ರೀಂ ಹಂಚಲು ಮುಂದಾಗಿದೆ
2 ಗಂಟೆಯೊಳಗೆ ಮತ ಹಾಕಿದರೆ ಶೇ.15 ರಿಯಾಯಿತಿ
ಶಿವಮೊಗ್ಗ: ಮಂಗಳವಾರ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಧ್ಯಾಹ್ನ 2 ಗಂಟೆಯೊಳಗೆ ಮತದಾನ ಮಾಡಿದ ಮತದಾರರಿಗೆ ಬಟ್ಟೆ ಖರೀದಿಯಲ್ಲಿ ರಿಯಾಯಿತಿ ಸಿಗಲಿದೆ. ಮತದಾನ ಮಾಡಿದ ಗುರುತು ತೋರಿಸಿದ ಮತದಾರರಿಗೆ ಶ್ರೀನಿ ಧಿ ಸಿಲ್ಕ್$Õ ಆ್ಯಂಡ್ ಟೆಕ್ಸ್‌ಟೈಲ್ಸ್‌ನಲ್ಲಿ ಬಟ್ಟೆ ಖರೀದಿಯಲ್ಲಿ ಶೇ.15ರಷ್ಟು ರಿಯಾಯಿತಿ ನೀಡಲಿದೆ ಎಂದು ಪ್ರಕಟನೆಯಲ್ಲಿ ತಿಳಿದ್ದಾರೆ.
ಮತ ಹಾಕಿದವರಿಗೆ ಉಚಿತ ಆರೋಗ್ಯ ತಪಾಸಣೆ
ಧಾರವಾಡ: ಮತದಾನ ಜಾಗೃತಿ ಹಿನ್ನೆಲೆಯಲ್ಲಿ ಇಲ್ಲಿನ ಹರೀಶ್ ಮೆಡಿ ಲ್ಯಾಬ್ ರಕ್ತ ತಪಾಸಣ ಕೇಂದ್ರದ ನೇತೃತ್ವದಲ್ಲಿ ಚಿರಾಯು ಆರೋಗ್ಯ ಜಾಗೃತಿ ಹಾಗೂ ಸಂಶೋಧನ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಮತ ಹಾಕಿದವರಿಗೆ ಉಚಿತ ಮಧುಮೇಹ, ರಕ್ತ ತಪಾಸಣೆ, ಹೃದಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Director Guruprasad: ಖ್ಯಾತ ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಆ*ತ್ಮಹತ್ಯೆ
Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
MUST WATCH
ಹೊಸ ಸೇರ್ಪಡೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.