Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
Team Udayavani, May 7, 2024, 3:47 PM IST
ನವದೆಹಲಿ: ನ್ಯೂಯಾರ್ಕ್ ನಲ್ಲಿ ನಡೆಯುವ ಜಗತ್ತಿನ ಶ್ರೇಷ್ಠ ಫ್ಯಾಷನ್ ಇವೆಂಟ್ ಮೆಟ್ ಗಾಲಾ ಈ ಬಾರಿ ಅದ್ಧೂರಿಯಾಗಿ ಆಯೋಜನೆಗೊಂಡಿದೆ.
ಪ್ರತಿ ವರ್ಷದ ವಿಶಿಷ್ಠ ಥೀಮ್ ನಲ್ಲಿ ಮೆಟ್ ಗಾಲಾ ನಡೆಯುತ್ತದೆ. ಈ ಫ್ಯಾಷನ್ ಹಬ್ಬದಲ್ಲಿ ಜಗತ್ತಿನ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಈ ಬಾರಿ ಭಾರತದ ಆಲಿಯಾ ಭಟ್ ಟ್ರೆಡಿಷನಲ್ ಲುಕ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬ್ಯೂಟಿ ಲುಕ್ ವೈರಲ್ ಆಗಿದೆ.
ಈ ನಡುವೆ ಮೆಟ್ ಗಾಲಾದಲ್ಲಿ ಭಾಗಿಯಾಗಿದ್ದಾರೆ ಎಂದು ಖ್ಯಾತ ಸೆಲೆಬ್ರಿಟಿಗಳ ಫೋಟೋವನ್ನು ಡೀಪ್ ಫೇಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿದುಬಿಡಲಾಗಿದೆ.
ಬಾರ್ಬಡಿಯನ್ ಗಾಯಕಿ, ಪಾಪ್ ವರ್ಲ್ಡ್ ನಲ್ಲಿ ಖ್ಯಾತ ಹೆಸರಾಗಿರುವ ರಿಹಾನ್ನಾ, ಅಮೆರಿಕಾದ ಗಾಯಕಿ ಕೇಟಿ ಪೆರ್ರಿ, ಹಾಲಿವುಡ್ ನಟಿ ಲೇಡಿ ಗಾಗಾ ಅವರ ಎಐ ರಚಿತ ಡೀಪ್ ಫೇಕ್ ಫೋಟೋಗಳು ವೈರಲ್ ಆಗಿದೆ.
ರಿಹಾನ್ನಾ ಮೆಟ್ ಗಾಲದಲ್ಲಿ ಭಾಗಿಯಾಗಬೇಕಿದ್ದ ಪ್ರಮುಖ ಸೆಲೆಬ್ರಿಟಿ ಆಗಿದ್ದರು. ಅವರು ಭಾಗಿಯಾಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರು ಇವೆಂಟ್ ಗೆ ಬಂದಿಲ್ಲ. ಆದರೆ ಹಸಿರು ಬಣ್ಣದ ಗೌನ್ ತೊಟ್ಟು, ಕಮಾನಿನಂತಿರುವ ವಿಸ್ತಾರವಾದ ಬಟ್ಟೆಯನ್ನು ಹಾಕಿರುವ ರಿಹಾನ್ನಾ ಅವರ ಫೋಟೋ ವೈರಲ್ ಆಗಿದೆ.
ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕಿ ರಿಹಾನ್ನಾ ಜ್ವರದಿಂದ ಬಳಲುತ್ತಿರುವ ಕಾರಣ ವಾರ್ಷಿಕ ಮೆಟ್ ಗಾಲಾ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಪೀಪಲ್ಸ್ ಮ್ಯಾಗ್ ಜಿನ್ ವರದಿ ತಿಳಿಸಿದೆ.
ಇದಲ್ಲದೆ ಗಾಯಕಿ ಕೇಟಿ ಪೆರ್ರಿ, ಅವರು ರೆಡ್ ಕಾರ್ಪೆಟ್ ಗೆ ಬಂದಿರುವ ಎಐ ರಚಿತ ಡೀಪ್ ಫೇಕ್ ಫೋಟೋ ವೈರಲ್ ಆಗಿದೆ. ಇದನ್ನು ನೋಡಿ ಸ್ವತಃ ಕೇಟಿ ಅವರೇ ಶಾಕ್ ಆಗಿದ್ದಾರೆ. ಅವರ ಎಐ ಫೋಟೋವನ್ನು ಕೇಟಿ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅವರ ತಾಯಿ ಮೆಟ್ ಗಾಲಾದಲ್ಲಿ ಮಗಳು ಭಾಗಿಯಾಗಿದ್ದಾಳೆ ಅಂದುಕೊಂಡಿದ್ದಾರೆ. ಆದರೆ ಇದು ಎಐ ಫೋಟೋವೆಂದು ಕೇಟಿ ಅವರೇ ತಾಯಿಗೆ ಸ್ಪಷ್ಟನೆ ನೀಡಿದ್ದಾರೆ.
ಇನ್ನು ನಟಿ ಲೇಡಿ ಗಾಗಾ ಅವರ ಸ್ಟೈಲಿಸ್ಟ್ ಉಡುಗೆಯ ಫೋಟೋ ಕೂಡ ಎಐನಿಂದ ರಚಿಸಿ ಮೆಟ್ ಗಾಲಾ ಇವೆಂಟ್ ನಲ್ಲಿ ಭಾಗಿಯಾದ ಫೋಟೋವೆಂದು ವೈರಲ್ ಮಾಡಲಾಗಿದೆ.
ವರ್ಷದ ಮೆಟ್ ಗಾಲಾದ ಥೀಮ್ ‘ಸ್ಲೀಪಿಂಗ್ ಬ್ಯೂಟೀಸ್: ರೀವೇಕನಿಂಗ್ ಫ್ಯಾಶನ್’ ಮತ್ತು ಡ್ರೆಸ್ ಕೋಡ್ ‘ದಿ ಗಾರ್ಡನ್ ಆಫ್ ಟೈಮ್ ಆಗಿದೆ.
Rihanna attends The 2024 #MetGala #MetGala2024 pic.twitter.com/bO0QqmxWkD
— ✨ (@tereluprados) May 6, 2024
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.