Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ
Team Udayavani, May 8, 2024, 12:08 AM IST
ರಾಂಚಿ: ಝಾರ್ಖಂಡ್ನ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಮನೆ ಕೆಲಸದಾಳಿನ ನಿವಾಸದಲ್ಲಿ ಸೋಮವಾರದ ದಾಳಿ ವೇಳೆ ಒಟ್ಟು 32 ಕೋಟಿ ನಗದು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ.) ಮಾಹಿತಿ ನೀಡಿದೆ. ಜತೆಗೆ, ಮಂಗಳವಾರ ಆಲಂ ಆಪ್ತ ಕಾರ್ಯದರ್ಶಿ ಸಂಜೀವ್ ಕುಮಾರ್ ಲಾಲ್ ಮತ್ತು ಅವರ ಮನೆ ಕೆಲಸದಾಳು ಜಹಾಂಗೀರ್ ಆಲಂರನ್ನು ಬಂಧಿಸಲಾಗಿದೆ.
ಇವರಿಬ್ಬರನ್ನೂ ಮಂಗಳವಾರ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 6 ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸಿದೆ. ಸಚಿವ ಅಲಂಗೀರ್ ಆಲಂ ಅವರ ಸಹಾಯಕ ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲಿ ಕಮಿಷನ್ ರೂಪದಲ್ಲಿ ಟೆಂಡರ್ ಹಣ ಪಡೆದಿದ್ದಾರೆ ಎಂದು ಇ.ಡಿ. ಕೋರ್ಟ್ಗೆ ತಿಳಿಸಿದೆ.
ಝಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಕೆಳದರ್ಜೆಯಿಂದ ಮೇಲ್ದರ್ಜೆಯ ಹಲವು ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದಿದೆ. ಜತೆಗೆ ಈ ಪ್ರಕರಣದ ಸಂಬಂಧ ರಾಜ್ಯದಲ್ಲಿ ಮತ್ತೂ 5 ಕಡೆಗಳಲ್ಲಿ ಶೋಧ ನಡೆಸಿದ ಇ.ಡಿ.ಗೆ ರಾಜೀವ್ ಕುಮಾರ್ ಎಂಬ ಗುತ್ತಿಗೆ ದಾರನ ಬಳಿ ಮತ್ತೆ 1.5 ಕೋಟಿ ರೂ. ನಷ್ಟು ಹಣ ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.