Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

ಪಾಲಕ್ಕಾಡ್‌ ವಿಭಾಗ ಯೋಜನೆ; ಸಹಾಯಕರ ನಿಯೋಜನೆಗೆ ಸಿದ್ಧತೆ

Team Udayavani, May 8, 2024, 6:55 AM IST

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

ಮಂಗಳೂರು: ಮಂಗಳೂರು ಸೆಂಟ್ರಲ್‌ ಮತ್ತು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಕಾದಿರಿಸದ ಟಿಕೆಟ್‌ಗಳನ್ನು ನೀಡಲು ಸ್ವಯಂಚಾಲಿತ ಟಿಕೆಟ್‌ ವಿತರಣೆ ಯಂತ್ರ(ಎಟಿವಿಎಂ) ಅಳವಡಿಸಲಾಗಿದೆ. ಇದರಲ್ಲಿ ಈ ಹಿಂದೆಸಹಾಯಕರನ್ನು ನಿಯೋಜಿಸಿ ಟಿಕೆಟ್‌ಗಳನ್ನು ವಿತರಿಸಲಾಗು ತ್ತಿದ್ದರೂ ಕೋವಿಡ್‌ ಅವಧಿಯಲ್ಲಿ ಈ ಸೇವೆ ರದ್ದುಗೊಂಡಿತ್ತು.

ಪ್ರಯಾಣಿಕರಿಗೆ ನೇರವಾಗಿ ಇದರ ಬಳಕೆ ಕಷ್ಟವಾಗಿರುವುದರಿಂದ ಬಹುತೇಕ ಮಂದಿ ಕೌಂಟರ್‌ಗಳಿಂದಲೇ ಟಿಕೆಟ್‌ ಪಡೆದು ಪ್ರಯಾಣಿಸುತ್ತಿದ್ದಾರೆ. ಇದೀಗ ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗ ಈ ಯಂತ್ರದ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗಬೇಕು ಎನ್ನುವ ಉದ್ದೇಶದಿಂದ ಸಹಾಯಕರನ್ನು ನಿಯೋಜಿಸಿ ಟಿಕೆಟ್‌ ವಿತರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಅದರಂತೆ ಮೊದಲ ಹಂತದಲ್ಲಿ ಎಟಿವಿಎಂ ಇರುವ ಮಂಗಳೂರು ಸೆಂಟ್ರಲ್‌, ಮಂಗಳೂರು ಜಂಕ್ಷನ್‌ ಮತ್ತು ಕಾಸರಗೋಡು ಸಹಿತ ವಿಭಾಗ ವ್ಯಾಪ್ತಿಗೆ 300 ಸಹಾಯಕರನ್ನು ನಿಯೋಜಿಸಲು ಮುಂದಾಗಿದೆ.

ಪ್ರಸ್ತುತ ಇಲಾಖಾ ಸಿಬಂದಿಯೇ ಪ್ರಯಾಣಿಕರಿಗೆ ಟಿಕೆಟ್‌ ಪಡೆಯಲು ನೆರವಾಗುತ್ತಿದ್ದಾರೆ. ಇದು ಅವರ ಕೆಲಸದ ಒತ್ತಡವನ್ನು ಹೆಚ್ಚಿಸಿದೆ. ಹಾಗಾಗಿ ಈ ಸಹಾಯಕರ ನಿಯೋಜನೆ ಯಾಗುತ್ತಿದೆ.

ಪ್ರತಿದಿನ ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ 8 ಲಕ್ಷ ರೂ. ಮತ್ತು ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ 2 ಲಕ್ಷ ರೂ. ಮೌಲ್ಯದ ಕಾದಿರಿಸದ ಟಿಕೆಟ್‌ ವಿತರಣೆ ಆಗುತ್ತಿದೆ. ಇನ್ನು ಮುಂದೆ ಇದನ್ನು ಸಂಪೂರ್ಣವಾಗಿ ಎಟಿವಿಎಂ ಮೂಲಕವೇ ವಿತರಿಸುವುದು ಇಲಾಖೆಯ ಗುರಿ. ಮಂಗಳೂರು ಸೆಂಟ್ರಲ್‌ಗೆ 21 ಮತ್ತು ಜಂಕ್ಷನ್‌ಗೆ 9 ಸಿಬಂದಿ ನಿಯೋಜಿಸಲು ಉದ್ದೇಶಿಸಲಾಗಿದ್ದು, ದಿನದ 24 ಗಂಟೆಯೂ ಪ್ರಯಾಣಿಕರಿಗೆ ಈ ಸೇವೆ ದೊರೆಯಲಿದೆ.

ಒಂದು ವರ್ಷದ ಒಪ್ಪಂದದ ಆಧಾರದಲ್ಲಿ ಸಹಾಯಕರ ನೇಮಕಾತಿ ನಡೆಯಲಿದ್ದು, ಇವರು ರೈಲ್ವೇ ಇಲಾಖೆಯ ನೌಕರರಲ್ಲ. ಟಿಕೆಟ್‌ ಮಾರಾಟದ ಮೇಲಿನ ಕಮಿಷನ್‌ ಆಧಾರದಲ್ಲಿ ಈ ಸಹಾಯಕರ ಆದಾಯ ಪಡೆಯಲಿದ್ದಾರೆ. ಇದಕ್ಕಾಗಿ ರೈಲ್ವೇ ಅರ್ಜಿ ಆಹ್ವಾನಿಸಿದ್ದು, http://www.sr.indianrailways.gov.in ನಲ್ಲಿ ಅರ್ಜಿ ನಮೂನೆಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟ ಎಸೆಸೆಲ್ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 24 ಕೊನೇ ದಿನಾಂಕ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಟಾಪ್ ನ್ಯೂಸ್

CM-Siddu–EX-CM-BSY

Covid Scam: ನ್ಯಾ.ಮೈಕೆಲ್ ಡಿ ಕುನ್ಹಾ ಸಮಿತಿ ವರದಿ ಆಧರಿಸಿ ಸರಕಾರದಿಂದ ಕ್ರಮ: ಸಿದ್ದರಾಮಯ್ಯ

1-pa

Pankaj Advani; ದಾಖಲೆಯ 28ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಂಕಜ್

1-wqqwe

Davanagere:ಪ್ರತಿಷ್ಠಿತ ಬಡಾವಣೆಯ ಪಹಣಿಯಲ್ಲಿಯೂ ವಕ್ಫ್ ಹೆಸರು!

covid

Covid scam: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮಿತಿ ಶಿಫಾರಸು

06

Ullala: ಟ್ಯಾಂಕರ್-ಸ್ಕೂಟರ್ ಅಪಘಾತ; ಮಹಿಳೆ ಸ್ಥಳದಲ್ಲೇ ಮೃತ್ಯು!

Uddav 2

Uddhav; 30 ವರ್ಷ ಮೈತ್ರಿಯಿದ್ದರೂ ಶಿವಸೇನೆ ಬಿಜೆಪಿಯಾಗಲಿಲ್ಲ,ಕಾಂಗ್ರೆಸ್ ಹೇಗಾಗುತ್ತದೆ?

1-kkk

Australia series; ಕೊಹ್ಲಿ ಅವರನ್ನು ಈಗಿನ ಫಾರ್ಮ್ ನಲ್ಲಿ ನಿರ್ಣಯಿಸಬೇಡಿ: ಪಾಂಟಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

Mangaluru: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

Mulki: ಚಿನ್ನಾಭರಣ ಕಳವು ಆರೋಪಿಯ ಸೆರೆ

Mulki: ಚಿನ್ನಾಭರಣ ಕಳವು ಆರೋಪಿಯ ಸೆರೆ

06

Ullala: ಟ್ಯಾಂಕರ್-ಸ್ಕೂಟರ್ ಅಪಘಾತ; ಮಹಿಳೆ ಸ್ಥಳದಲ್ಲೇ ಮೃತ್ಯು!

ಪಕ್ಷಿಕೆರೆಯಲ್ಲೊಂದು ಘೋರ ದುರಂತ: ಪತ್ನಿ, ಮಗುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

ಪಕ್ಷಿಕೆರೆಯಲ್ಲೊಂದು ಘೋರ ದುರಂತ: ಪತ್ನಿ, ಮಗುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

8-mng

Charmadi Ghat ಹೆದ್ದಾರಿ ದ್ವಿಪಥಗೊಳಿಸಲು 343.74  ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಚೌಟ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

CM-Siddu–EX-CM-BSY

Covid Scam: ನ್ಯಾ.ಮೈಕೆಲ್ ಡಿ ಕುನ್ಹಾ ಸಮಿತಿ ವರದಿ ಆಧರಿಸಿ ಸರಕಾರದಿಂದ ಕ್ರಮ: ಸಿದ್ದರಾಮಯ್ಯ

Unofficial Test: ಭಾರತ “ಎ’ ತಂಡಕ್ಕೆ ಮತ್ತೂಂದು ಸೋಲು

Unofficial Test: ಭಾರತ “ಎ’ ತಂಡಕ್ಕೆ ಮತ್ತೂಂದು ಸೋಲು

FIH Star Awards: ಹರ್ಮನ್‌ಪ್ರೀತ್‌, ಶ್ರೀಜೇಶ್‌ಗೆ ಹಾಕಿ ಗೌರವ

FIH Star Awards: ಹರ್ಮನ್‌ಪ್ರೀತ್‌, ಶ್ರೀಜೇಶ್‌ಗೆ ಹಾಕಿ ಗೌರವ

Pro Kabaddi: ಬೆಂಗಾಲ್‌ಗೆ ಬಾಗಿದ ಬೆಂಗಳೂರು ಬುಲ್ಸ್‌

Pro Kabaddi: ಬೆಂಗಾಲ್‌ಗೆ ಬಾಗಿದ ಬೆಂಗಳೂರು ಬುಲ್ಸ್‌

21

Ranji Trophy: ಕರ್ನಾಟಕ-ಬಂಗಾಲ ಪಂದ್ಯ ಡ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.