Muslim ಆ್ಯನಿಮೇಟೆಡ್ ವೀಡಿಯೋ ತೆಗದುಹಾಕಲು ಎಕ್ಸ್‌ಗೆ ಆಯೋಗ ಸೂಚನೆ
ಕರ್ನಾಟಕ ಬಿಜೆಪಿ ಘಟಕ ಹಂಚಿಕೊಂಡಿರುವ ವೀಡಿಯೋದಲ್ಲಿ ಏನಿದೆ?
Team Udayavani, May 8, 2024, 11:10 AM IST
ಹೊಸದಿಲ್ಲಿ: ಮುಸ್ಲಿಂ ಮೀಸಲಾತಿಗೆ ಸಂಬಂಧಿಸಿ ಕರ್ನಾಟಕ ಬಿಜೆಪಿ ಘಟಕವು ತನ್ನ “ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಆ್ಯನಿಮೇಟೆಡ್ ವೀಡಿಯೋವನ್ನು ತತ್‌ಕ್ಷಣ ತೆಗದುಹಾಕುವಂತೆ ಚುನಾವಣ ಆಯೋಗ(ಇಸಿ)ವು ಟ್ವೀಟ ರ್‌ಗೆ ಮಂಗಳವಾರ ಸೂಚಿಸಿದೆ.
ಎಕ್ಸ್ ಸಂಸ್ಥೆಯ ನೋಡಲ್ ಆಫಿಸರ್‌ಗೆ ಈ ಕುರಿತು ಆಯೋಗ ಪತ್ರ ಬರೆದಿದ್ದು, ಬಿಜೆಪಿ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋವು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ. ಈ ಹಿನ್ನೆಲೆಯಲ್ಲಿ ತತ್‌ಕ್ಷಣವೇ ವೀಡಿಯೋವನ್ನು ತೆಗೆದುಹಾಕಿ ಎಂದಿದೆ.
ವೀಡಿಯೋದಲ್ಲಿ ಏನಿದೆ?
ವೀಡಿಯೋದಲ್ಲಿ ರಾಹುಲ್ ಗಾಂಧಿ ಮತ್ತು ಖರ್ಗೆ ಅವರ ಕಾರ್ಟೂನ್‌ಗಳಿವೆ. ಎಸ್ಸಿ, ಎಸ್ಟಿ, ಒಬಿಸಿ ಎಂದು ಬರೆದಿರುವ ಮೂರು ಮೊಟ್ಟೆಗಳಿದ್ದ ಗೂಡಿಗೆ ರಾಹುಲ್ ಮುಸ್ಲಿಂ ಎಂದು ಬರೆದಿರುವ ದೊಡ್ಡ ಮೊಟ್ಟೆಯನ್ನು ತಂದಿಡುತ್ತಾರೆ. ಆ ಮೊಟ್ಟೆಗಳು ಒಡೆದು ಮರಿಯಾದ ಬಳಿಕ ಫಂಡ್ ಎಂದು ಬರೆದಿರುವ ಚೀಲವನ್ನು ಮುಸ್ಲಿಂ ಎಂಬ ಕೋಳಿ ಮರಿಗೆ ರಾಹುಲ್ ತಿನ್ನಿಸುತ್ತಾರೆ. ಬಳಿಕ ಆ ಕೋಳಿ ಮರಿಯು ಎಸ್ಸಿ, ಎಸ್ಟಿ, ಒಬಿಸಿ ಮರಿಗಳನ್ನು ಗೂಡಿನಿಂದ ಹೊರಗೆ ತಳ್ಳುತ್ತದೆ. ಅನಂತರ ರಾಹುಲ್, ಖರ್ಗೆ, ಮುಸ್ಲಿಂ ಕೋಳಿ ನಗುತ್ತಿರುವಂತೆ ಚಿತ್ರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.