![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 8, 2024, 2:34 PM IST
ಹುಬ್ಬಳ್ಳಿ: ‘2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್ ಮಾಡುತ್ತೇವೆ. ಯುಪಿಎ ಆಡಳಿದಲ್ಲಿ ದೇಶದಲ್ಲಿ ಕಲ್ಲಿದ್ದಲು ಕೊರತೆ ಇತ್ತು.ಇದೀಗ ಕಲ್ಲಿದ್ದಲು ಹೆಚ್ಚುವರಿ ಉತ್ಪಾದನೆಯಾಗಿದೆ.ರಾಜ್ಯಕ್ಕೆ ಬೇಡಿಕೆಗಿಂತ ಹೆಚ್ಚಿನ ಕಲ್ಲಿದ್ದಲು ನೀಡಿದ್ದೇವೆ. ರಾಜ್ಯದಿಂದ 900 ಕೋಟಿ ರೂ. ಬಾಕಿ ಬರಬೇಕಾಗಿದ್ದು, ರಾಜ್ಯ ಸರ್ಕಾರ ಪಾಪರ್ ಆಗಿದ್ದರಿಂದ ಇದುವರೆಗೂ ಬಾಕಿ ನೀಡಿಲ್ಲ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬುಧವಾರ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಕಾಂಗ್ರೆಸ್ ವಿಚಾರ, ವಿಷಯ, ಅಭಿವೃದ್ಧಿಗಿಂತ ಅಪಪ್ರಚಾರ ಕೈಗೊಂಡಿತು.ಚುನಾವಣೆಯಲ್ಲಿ ನನ್ನ ತೇಜೋವಧೆ ಯತ್ನ ನಡೆಯಿತು. ನಾನು ಭ್ರಷ್ಟಚಾರಿ ಅಲ್ಲ, ನೈತಿಕ ಅಧಃಪತನಕ್ಕೂ ಇಳಿದಿಲ್ಲ. ನಾನು ಏನೆಂಬುದು ಹಾಗೂ ಅಭಿವೃದ್ಧಿ ಕಾರ್ಯಗಳು ಜನತೆ ಗೊತ್ತಿದೆ. ವ್ಯಕ್ತಿಗತ ಟೀಕೆಗೆ ಉತ್ತರಿಸಲಾರೆ’ ಎಂದರು.
‘ಅಭಿವೃದ್ಧಿ ವಿಚಾರದಲ್ಲಿ ಚರ್ಚೆ, ಪ್ರಚಾರಕ್ಜೆ ಮುಂದಾದರೆ ನಷ್ಟ ತನಗೆಂದು ಕಾಂಗ್ರೆಸ್ ಗೆ ಸ್ಪಷ್ಟ ಅರಿವಿತ್ತು.ಇನ್ನು 10-15 ವರ್ಷ ಮೋದಿಯವರ ಆಡಳಿತ ಮುಂದುವರೆದರೆ ದೇಶದ ಪರಿವರ್ತನೆ ಪರಿಣಾಮ ಇನ್ನಷ್ಟು ಹೆಚ್ಚಲಿದೆ’ ಎಂದರು.
‘ಎರಡನೇ ಹಂತದ ಮತದಾನದಲ್ಲಿ ಧಾರವಾಡ ಸೇರಿದಂತೆ ಎಲ್ಲ 14 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.