Malpe Beach: ಲೈಫ್ಗಾರ್ಡ್ ಮೇಲೆ ಹಲ್ಲೆ
Team Udayavani, May 9, 2024, 12:55 AM IST
ಮಲ್ಪೆ: ಇಲ್ಲಿನ ಸಮುದ್ರ ದಲ್ಲಿ ಹಾಕಿದ ಈಜು ವಲಯವನ್ನು ದಾಟಿ ಮುಂದೆ ಹೋಗುತ್ತಿದ್ದ ವ್ಯಕ್ತಿ ಯನ್ನು ಎಚ್ಚರಿಸಿದ ಜೀವರಕ್ಷಕರ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿ ರುವ ಘಟನೆ ಬುಧವಾರ ನಡೆದಿದೆ.
ಬೆಂಗಳೂರು ಮೂಲದವರೆನ್ನ ಲಾದ 6 ಜನರು ಸಮುದ್ರದಲ್ಲಿ ಸ್ನಾನಕ್ಕಿಳಿದ್ದರು. ಓರ್ವ ಈಜು ವಲಯ ದಾಟಿ ಅಲೆಗಳ ಒತ್ತಡ ಹೆಚ್ಚಿರುವುದರಿಂದ ಜೀವರಕ್ಷಕ ತೇಜ ಕೋಟ್ಯಾನ್ ಈತನಿಗೆ ಬಹಳ ಸಲ ಎಚ್ಚರಿಸಿದರೂ ಆತ ಮಾತಿಗೆ ಬೆಲೆ ಕೊಡಲಿಲ್ಲ. ಬಳಿಕ ಜೀವ ರಕ್ಷಕ ತೇಜ ಕೋಟ್ಯಾನ್ ಸಮುದ್ರಕ್ಕೆ ಇಳಿದು ಆತನನ್ನು ತೀರಕ್ಕೆ ಎಳೆದು ತಂದರು.
ಈ ವೇಳೆ ಜತೆಗಿದ್ದ ಇತರರು ತೇಜ ಕೋಟ್ಯಾನ್ ಅವರ ಮೇಲೆ ಹಲ್ಲೆಗೆ ಮುಂದಾದರು. ಬಳಿಕ ಇತರ ಲೈಫ್ಗಾರ್ಡ್, ಹೋಮ್ಗಾರ್ಡ್ಗಳು ಬಂದಾಗ ಈ 6 ಮಂದಿ ಯುವಕರ ತಂಡ ಅಲ್ಲಿಂದ ಪರಾರಿಯಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.