UV Fusion: ಅರಿತು ಬಾಳಲು… ಬದುಕು ಬಂಗಾರ…
Team Udayavani, May 9, 2024, 3:42 PM IST
ಮನುಷ್ಯ ಸಂಘಜೀವಿ, ಇಂದಿನ ಯಾಂತ್ರಿಕ ಯುಗದಲ್ಲಿ ಒತ್ತಡಗಳ ನಡುವೆ ನಾವು ಒಂಟಿತನವನ್ನೇ ಇಷ್ಟಪಡುತ್ತೇವೆ. ಭಾವನಾತ್ಮಕವಾಗಿ ಬೆಸೆದ ಸಂಬಂಧಗಳು ಕ್ರಮೇಣ ಹದಗೆಡುತ್ತಿದೆ. ಇಂದಿನ ಯುವ ಪೀಳಿಗೆ ಬಹುತೇಕ ಏಕಾಂಗಿತನವನ್ನೇ ಬಯಸುತ್ತದೆ. ನಮ್ಮ ಹಿರಿಯರು ಪರಂಪರಾನುಗತವಾಗಿ ಬೆಳೆದು ಬಂದ ರೀತಿ – ನೀತಿ ಇಂದು ಮರೆಯಾಗುತ್ತಿದೆ.
ಈ ಭೂಮಿಯ ಮೇಲೆ ಯಾರು, ಯಾರಿಗೆ ಅಂತ ಮೇಲಿರುವ ಭಗವಂತ ಮೊದಲೇ ನಿರ್ಧರಿಸಿ ಬಿಡುತ್ತಾನೆ. ನಾವೇನಿದ್ದರೂ ಅವನ ಆಣತಿಯಂತೆ ನಡೆಯುತ್ತಿರುವುದು.
ಹೆಣ್ಣಿಗೆ ಬಾಲ್ಯದಲ್ಲಿ ತಂದೆ ಆಸರೆಯಲ್ಲಿ, ಯೌವ್ವನದಲ್ಲಿ ಗಂಡನ ಆಶ್ರಯದಲ್ಲಿ, ವೃದ್ಧಾಪ್ಯದಲ್ಲಿ ಮಕ್ಕಳ ಆವಶ್ಯಕತೆ ಬೇಕು. ಗಂಡಿಗೆ ಹೆಣ್ಣಿನ, ಹೆಣ್ಣಿಗೆ ಗಂಡಿನ ಅವಶ್ಯಕತೆ ಬೇಕು. ಯಾರಧ್ದೋ ಒತ್ತಾಯಕ್ಕೆ, ಇನ್ಯಾರಧ್ದೋ ಬಲವಂತಕ್ಕೆ ನಾವು ಕೆಲವೊಮ್ಮೆ ಮದುವೆ ಆಗಿ ಬಿಡುತ್ತೇವೆ. ಮದುವೆಯಾದ ಮೇಲೆ ಒಂದೆರಡು ಸಲ ಜಗಳವಾಡಿ ಮೂರನೇ ಸಲ ಆ ಜಗಳ ವಿಚ್ಚೇದನದಲ್ಲಿ ಅಂತ್ಯವಾಗುದಾದರೆ ಮದುವೆಗೆ ಅರ್ಥ ಎಲ್ಲಿದೆ?
ಪ್ರತಿದಿನ ಗಂಡ- ಹೆಂಡತಿಯ ನಡುವಿನ ಜಗಳವೇನು ಸರಳ ಎನಿಸಬಹುದು, ಆದರೆ ಈ ಜಗಳದ ಮಧ್ಯೆ ಮಕ್ಕಳ ಸ್ಥಿತಿಯೇನು? ಹೊಸತನವನ್ನು ಕಲಿಯುವ ಹೊಸ್ತಿಲಲ್ಲಿ ಈ ರೀತಿಯಾದ ಜಗಳ ಅವರ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ.
ಇಚ್ಚೆ ಅರಿತ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹೆಚ್ಚೆಂದ ಎಂಬ ಮಾತಿನಂತೆ ಇಬ್ಬರು ಒಬ್ಬರನ್ನೊಬ್ಬರು ಅರಿತಾಗ ಸಂಸಾರವೆಂಬ ನೌಕೆ ಸುಗಮವಾಗಿ ಸಾಗಲು ಸಾಧ್ಯ.
ಕೆಲವೊಮ್ಮೆ ಹೆಣ್ಣು ಮದುವೆಯಾದ ಮೇಲೆ ಸಣ್ಣ ಜಗಳಕ್ಕೂ ಒಂಟಿಯಾಗಿ ಬದುಕುವ ನಿರ್ಧಾರ ಮಾಡಿಬಿಡುತ್ತಾಳೆ. ಆದರೆ ಇದರ ಮಧ್ಯೆ ತಂದೆಯ ಪ್ರೀತಿಯಿಂದ ಮಕ್ಕಳು ವಂಚಿತರಾಗುದಿಲ್ಲವೇ ?
ಹಾಡಿನಲ್ಲಿ ಹೇಳಿರುವಂತೆ ಬಂಧು ಕೋಡಿಸೋ ಸೀರೆ ಬಣ್ಣ ಹೋಗೋ ವರೆಗೆ, ತಂದೆ ಕೋಡಿಸೋ ಸೀರೆ ಮದುವೆ ಆಗೋವರೆಗೆ, ಆದರೆ ಗಂಡ ಕೊಡಿಸೋ ಸೀರೆ ಹೆಣ್ಣಿನ ಕುಂಕುಮ ಇರುವ ವರೆಗೆ. ಧರಿಸುವ ಕಾಲುಂಗುರ, ಕರಿಮಣೆ ಉಂಗುರ ಇದೆಲ್ಲವೂ ಮದುವೆ ಆಗಿದೆ ಎನ್ನುವ ಸಂಕೇತವಾದರೆ, ಈ ಸಂಕೇತಗಳೆಲ್ಲವೂ ನಿನಗೆ ಬೇಕು ಆದರೆ ಈ ಸಂಕೇತಗಳಿಗೆ ಕಾರಣನಾದವನು ಮಾತ್ರ ಬೇಡವೆ?
ಗಂಡಿನ ಅವಶ್ಯಕತೆ ಇಲ್ಲದ ಬದುಕು ಹಿತ ಅನ್ನಿಸಬಹುದು ಕ್ರಮೇಣ ಅದು ಹೆಚ್ಚು ಪ್ರಿಯವಾಗಬಹುದು. ಆದರೆ ನೀನು ಜೀವನದಲ್ಲಿ ಕುಸಿದಾಗ ಧೈರ್ಯ ತುಂಬಿ ನಿನ್ನನ್ನು ಮೇಲೆತ್ತಲು ಗಂಡಿನ ಹೆಗಲು ಅಗತ್ಯ. ಯಾವುದೋ ಒಂದು ಸಣ್ಣ ವಿಚಾರದ ಜಗಳ ಗಂಡ ಹೆಂಡತಿಯ ಸಂಬಂಧವನ್ನೇ ಹಾಳುಮಾಡಿಬಿಡುತ್ತದೆ. ಇದಕ್ಕೆ ಒಬ್ಬರನ್ನೊಬ್ಬರು ಅರಿಯದ ಕಾರಣವೂ ಇರಬಹುದು.
ನಾನು ನೋಡಿದ ಮಟ್ಟಿಗೆ ಬಹುತೇಕರು ಮದುವೆ ಆಗಿಯೂ ಆಗದಂತೆ ಇರುತ್ತಾರೆ. ಗಂಡಿನ ಆಸರೆ ಇಲ್ಲದೆ ನಾನೊಬ್ಬಳೇ ಬದುಕುತ್ತೇನೆ, ಹೆಣ್ಣಿನ ಆಸರೆಯಿಲ್ಲದೇ ನಾನೊಬ್ಬನೇ ಬುದಕುತ್ತೇನೆ ಎನ್ನುವುದು ನಿನ್ನ ಆತ್ಮಸ್ಥೈರ್ಯವಾದರೆ, ಪರಂಪರಾನುಗತವಾಗಿ ಬಂದ ಸಂಸ್ಕೃತಿ ಏನು ಹೇಳುತ್ತದೆ?
ಒಟ್ಟಿನಲ್ಲಿ ಯಾವುದೇ ಹೆಣ್ಣಿಗೆ ಗಂಡನ, ಯಾವುದೇ ಗಂಡಿಗೆ ಹೆಂಡತಿಯ ಆಸರೆ ಮತ್ತು ಆಶ್ರಯ ಅವಶ್ಯಕ. ಹೆಂಡತಿ ಅರ್ಧಾಂಗಿ ಅಲ್ಲಾ, ಅವಳು ಪೂರ್ಣಾಂಗಿ ಎನ್ನುವಂತೆ, ಬದುಕಿನಲ್ಲಿ ಸಿಹಿ ಕಹಿ ಏನಾದರೂ ಪ್ರತಿ ಕ್ಷಣ ಜತೆಯಾಗಿರುವೆ ಎಂದಾಗ ಬದುಕು ಸುಂದರ.
-ಸುಜಯ ಶೆಟ್ಟಿ ಹಳ್ನಾಡು
ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.