ಇಲ್ಲಿದೆ ʼKhatron Ke Khiladi 14ʼ ನಲ್ಲಿ ಭಾಗಿಯಾಗುವ ಸ್ಪರ್ಧಿಗಳ ಪಟ್ಟಿ..
Team Udayavani, May 9, 2024, 5:54 PM IST
ಮುಂಬಯಿ: ನಿರ್ದೇಶಕ ರೋಹಿತ್ ಶೆಟ್ಟಿ ನಡೆಸಿಕೊಡುವ ಜನಪ್ರಿಯ ಸ್ಟಂಟ್ ರಿಯಾಲಿಟ್ ಶೋ ʼ ಖತ್ರೋನ್ ಕೆ ಕಿಲಾಡಿ ಸೀಸನ್ -14ʼ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕಾರ್ಯಕ್ರಮ ಆರಂಭಗೊಳ್ಳಲಿದೆ ಎನ್ನುತ್ತಿರುವಾಗಲೇ ಸ್ಪರ್ಧಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಪ್ರತಿಬಾರಿ ʼ ಖತ್ರೋನ್ ಕೆ ಕಿಲಾಡಿʼ ಆರಂಭಗೊಳ್ಳುವ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸ್ಪರ್ಧಿಗಳ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿರುತ್ತದೆ. ಯಾರೆಲ್ಲಾ ಸ್ಪರ್ಧಿಗಳಾಗಿರುತ್ತಾರೆ ಎನ್ನುವುದರ ಬಗ್ಗೆ ಕುತೂಹಲವಿದ್ದೇ ಇರುತ್ತದೆ.
ಈ ಬಾರಿ ಅಧಿಕೃತವಾಗಿ ಯಾರೆಲ್ಲಾ ಸ್ಪರ್ಧಿಗಳಾಗಿ ಇದ್ದಾರೆ ಹಾಗೂ ಸಾಧ್ಯತೆಯಿರುವ ಸ್ಪರ್ಧಿಗಳ ಪಟ್ಟಿಯೊಂದು ಹೊರಬಿದ್ದಿದೆ. ಇಲ್ಲಿದೆ ವಿವರ..
ಅಭಿಷೇಕ್ ಕುಮಾರ್: ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮದ 17ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ದೊಡ್ಮನೆಯಲ್ಲಿ ಪ್ರೇಕ್ಷಕರ ಗಮನ ಸೆಳೆದು, ಫಸ್ಟ್ ರನ್ನರ್ ಅಪ್ ಆದ ಅಭಿಷೇಕ್ ಕುಮಾರ್ ಅವರು ʼ ಖತ್ರೋನ್ ಕೆ ಕಿಲಾಡಿ ಸೀಸನ್ -14ʼ ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಲಿರುವುದು ಅಧಿಕೃತವಾಗಿದೆ.
ನಿಮೃತ್ ಕೌರ್ ಅಹ್ಲುವಾಲಿಯಾ: ಹಿಂದಿ ಕಿರುತೆರೆ ನಟಿಯಾಗಿ, ಬಿಗ್ ಬಾಸ್ ಸೀಸನ್ -16 ನಲ್ಲಿ ಭಾಗಿಯಾಗಿ ಜನಪ್ರಿಯತೆ ಹೆಚ್ಚಿಸಿಕೊಂಡ ನಟಿ ನಿಮೃತ್ ಕೌರ್ ಅಹ್ಲುವಾಲಿಯಾ ʼಖತ್ರೋನ್ ಕೆ ಕಿಲಾಡಿ ಸೀಸನ್ -14ʼ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುವುದು ಅಧಿಕೃತವಾಗಿದೆ.
ಸಮರ್ಥ್ ಜುರೆಲ್: ಹಿಂದಿ ಕಿರುತೆರೆಯಲ್ಲಿ ತನ್ನ ನಟನೆ ಮೂಲಕ ಪ್ರೇಕ್ಷಕರ ಪ್ರೀತಿಯನ್ನು ಗಳಿಸಿರುವ ಸಮರ್ಥ್ ಜುರೆಲ್, ಬಿಗ್ ಬಾಸ್ ಸೀಸನ್ -17 ನಲ್ಲಿ ಸ್ಪರ್ಧಿಯಾಗಿದ್ದರು. ಇತ್ತೀಚೆಗಷ್ಟೇ ಗೆಳತಿ ಇಶಾ ಮಾಳವೀಯ ಅವರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದರು. ಇವರು ರೋಹಿತ್ ಶೆಟ್ಟಿ ಅವರ ಸಾಹಸಮಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Jyothi Rai: ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್; ಮೌನ ಮುರಿದ ನಟಿ
ಗಶ್ಮೀರ್ ಮಹಾಜನಿ: ಹಿಂದಿಯಲ್ಲಿ ʼ ಇಮ್ಲೀʼ, ʼ ತೇರೆ ಇಷ್ಕ್ ಮೇ ಘಾಯಲ್ʼ ಮುಂತಾದ ಧಾರಾವಾಹಿಯಲ್ಲಿ ನಟಿಸಿ ‘ಝಲಕ್ ದಿಖ್ಲಾ ಜಾ’ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾದ ಗಶ್ಮೀರ್ ಈ ಬಾರಿ ʼಖತ್ರೋನ್ ಕೆ ಕಿಲಾಡಿ ಸೀಸನ್ -14ʼ ನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಆಗಲಿದ್ದಾರೆ.
ಶಿಲ್ಪಾ ಶಿಂಧೆ: &TVಯಲ್ಲಿ ಪ್ರಸಾರ ಕಂಡ ʼಭಾಭಿ ಜಿ ಘರ್ ಪರ್ ಹೈʼ ಧಾರಾವಾಹಿಯಲ್ಲಿ ಅಂಗೂರಿ ಮನಮೋಹನ್ ತಿವಾರಿ ಪಾತ್ರದಲ್ಲಿ ಮಿಂಚಿದ ಶಿಲ್ಪಾ ಶಿಂಧೆ, ಈ ಹಿಂದೆ ಬಿಗ್ ಬಾಸ್ 11 ಕಾರ್ಯಕ್ರಮದ ವಿನ್ನರ್ ಆಗಿದ್ದರು. ಇವರು ರೋಹಿತ್ ಶೆಟ್ಟಿ ಅವರ ಸ್ಟಂಟ್ ಶೋನಲ್ಲಿ ಸ್ಪರ್ಧಿ ಆಗಲಿದ್ದಾರೆ ಎಂದು ವರದಿಯಾಗಿದೆ.
ಕರಣ್ವೀರ್ ಶರ್ಮಾ/ ಅದಿತಿ ಶರ್ಮಾ: ಹಿಂದಿಯ ಸಿನಿಮಾ ಹಾಗೂ ಕಿರುತೆರೆಯಲ್ಲಿ ಮಿಂಚಿರುವ ಕರಣ್ವೀರ್ ಶರ್ಮಾ ʼರಬ್ ಸೆ ಹೈ ದುವಾʼ ಧಾರಾವಾಹಿಯಲ್ಲಿ ಮಿಂಚಿದ್ದಾರೆ. ಈ ಬಾರಿಯ ʼಖತ್ರೋನ್ ಕೆ ಕಿಲಾಡಿ ಸೀಸನ್ -14ʼ ಕಾರ್ಯಕ್ರಮದಲ್ಲಿ ಅವರು ಸ್ಪರ್ಧಿಯಾಗಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಇವರೊಂದಿಗೆ ʼರಬ್ ಸೆ ಹೈ ದುವಾʼ ಧಾರಾವಾಹಿ ಸಹನಟಿ ಅದಿತಿ ಶರ್ಮಾ ಕೂಡ ಕಾರ್ಯಕ್ರಮದ ಭಾಗವಾಗಲಿದ್ದಾರೆ ಎನ್ನಲಾಗಿದೆ.
ಸುಮೋನಾ ಚಕ್ರವರ್ತಿ: ಕಪಿಲ್ ಶರ್ಮಾ ಶೋನಿಂದ ಜನಪ್ರಿಯತೆಯನ್ನು ಗಳಿಸಿರುವ ಸುಮೋನಾ ಚಕ್ರವರ್ತಿ ರೋಹಿತ್ ಶೆಟ್ಟಿ ಅವರ ಶೋನಲ್ಲಿ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗಿದೆ.
ಕೃಷ್ಣ ಶ್ರಾಫ್: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಸಹೋದರಿಯಾಗಿರುವ ಕೃಷ್ಣ ಶ್ರಾಫ್ ʼಖತ್ರೋನ್ ಕೆ ಕಿಲಾಡಿ ಸೀಸನ್ -14ʼ ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗುವುದು ಅಧಿಕೃತವಾಗಿದೆ.
ಆಶಿಶ್ ಮೆಹ್ರೋತ್ರಾ: ಹಿಂದಿ ಜನಪ್ರಿಯ ಧಾರಾವಾಹಿ ʼಅನುಪಮಾʼ ದಲ್ಲಿ ನಟನಾಗಿ ಗುರುತಿಸಿಕೊಂಡಿರುವ ಆಶಿಶ್ ಮೆಹ್ರೋತ್ರಾ ಅವರು ರೋಹಿತ್ ಶೆಟ್ಟಿ ಅವರ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಲಿದ್ದಾರೆ. ಈ ಕಾರಣದಿಂದ ಅವರು ʼಅನುಪಮಾʼದಿಂದ ಹೊರ ಬಂದಿದ್ದಾರೆ.
ಅಸಿಮ್ ರಿಯಾಜ್: ಬಿಗ್ ಬಾಸ್ ಸೀಸನ್ -13 ನಲ್ಲಿ ಗಮನ ಸೆಳೆದಿದ್ದ ಅಸಿಮ್ ರಿಯಾಜ್ ಅವರಿಗಿಂದು ದೊಡ್ಡ ಫ್ಯಾನ್ ಫಾಲೋವರ್ಸ್ ಇದ್ದಾರೆ. ಬಿಗ್ ಬಾಸ್ -13 ನಲ್ಲಿ ರನ್ನರ್ ಅಪ್ ಆದ ಅವರು ಸಿದ್ಧಾರ್ಥ್ ಶುಕ್ಲಾ ಅವರ ಸ್ನೇಹದಿಂದ ಗಮನ ಸೆಳೆದಿದ್ದರು. ಅವರು ರೋಹಿತ್ ಶೆಟ್ಟಿ ಸ್ಟಂಟ್ ಶೋನಲ್ಲಿ ಸ್ಪರ್ಧಿಯಾಗಿ ಭಾಗಿಯಾಗುವುದು ಅಧಿಕೃತವಾಗಿದೆ.
ಇವರಿಷ್ಟು ಮಾತ್ರವಲ್ಲದೆ ಶೋಯೆಬ್ ಇಬ್ರಾಹಿಂ, ಧನಶ್ರೀ ವರ್ಮಾ, ಮನೀಶಾ ರಾಣಿ, ಜಿಯಾ ಶಂಕರ್, ಅಭಿಷೇಕ್ ಮಲ್ಹಾನ್, ಶ್ರೀರಾಮ ಚಂದ್ರ ಸೇರಿದಂತೆ ಇತರರ ಹೆಸರು ಸ್ಪರ್ಧಿಗಳ ಲಿಸ್ಟ್ ನಲ್ಲಿ ಕೇಳಿ ಬರುತ್ತಿದೆ.
ʼಖತ್ರೋನ್ ಕೆ ಕಿಲಾಡಿʼಯ ಹೊಸ ಸೀಸನ್‌ನ ಶೂಟಿಂಗ್ ಮೇ-ಅಂತ್ಯದಲ್ಲಿ ರೊಮೇನಿಯಾದಲ್ಲಿ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.