Mumbai Indians ತಂಡದಲ್ಲಿ ಒಳ ಜಗಳ..; ರೋಹಿತ್, ಬುಮ್ರಾ, ಸೂರ್ಯ ಪ್ರತ್ಯೇಕ ಸಭೆ!
Team Udayavani, May 9, 2024, 5:09 PM IST
ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ನಿರಾಶಾದಯಕ ಪ್ರದರ್ಶನ ನೀಡುತ್ತಿದೆ. ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಮುಂಬೈ ತಂಡವು ಜಯ ಗಳಿಸಿದೆ. ಎಂಟು ಪಂದ್ಯಗಳನ್ನು ಸೋತಿರುವ ಹಾರ್ದಿಕ್ ಪಡೆಯು ಕೂಟದಿಂದ ಹೊರಬಿದ್ದ ಮೊದಲ ತಂಡವಾಗಿದೆ.
ಹೊಸ ನಾಯಕನ ಅಡಿಯಲ್ಲಿ, ಮುಂಬೈ ಯಶಸ್ಸು ಕಾಣಲು ವಿಫಲವಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ ಮತ್ತು ಋತುವಿನ ಉದ್ದಕ್ಕೂ ಮೈದಾನದಲ್ಲಿ ನಿರಂತರ ನಿಂದನೆಗೆ ಒಳಗಾಗಿದ್ದಾರೆ. ನಾಯಕನಾಗಿ ಐದು ಪ್ರಶಸ್ತಿಗಳನ್ನು ಗೆದ್ದ ರೋಹಿತ್ ಶರ್ಮಾ ಅವರನ್ನು ಫ್ರಾಂಚೈಸಿ ತೆಗೆದುಹಾಕಿದ್ದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಬಿಟ್ಟು ಗುಜರಾತ್ ನಲ್ಲಿದ್ದ ಹಾರ್ದಿಕ್ ಅವರನ್ನು ನಾಯಕರಾಗಿ ಆಯ್ಕೆ ಮಾಡಿದ್ದು ಅಭಿಮಾನಿಗಳನ್ನು ಅಸಮಾಧಾನಗೊಳಿಸಿದೆ. ನಾಯಕ ಮತ್ತು ಆಲ್ ರೌಂಡರ್ ಆಗಿ ಹಾರ್ದಿಕ್ ಅವರ ಕಳಪೆ ಪ್ರದರ್ಶನವು ಅಭಿಮಾನಿಗಳಲ್ಲಿ ಈ ಕೋಪವನ್ನು ಹೆಚ್ಚಿಸಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿನ ವರದಿಯ ಪ್ರಕಾರ, ತಂಡದ ಹಿರಿಯ ಆಟಗಾರರು ಕೋಚಿಂಗ್ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ. ಡ್ರೆಸ್ಸಿಂಗ್ ರೂಮ್ ನಲ್ಲಿ ಉತ್ತಮ ವಾತಾವರಣದ ಕೊರತೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಾರ್ದಿಕ್ ಅವರ ನಾಯಕತ್ವವನ್ನು ದೂಷಿಸಿದ್ದಾರೆ.
ಮುಂಬೈ ತಂಡದ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್ ನೊಂದಿಗೆ ಮಾತನಾಡುವ ವೇಳೆ ಹಾರ್ದಿಕ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ತಂಡವು ವಿಭಿನ್ನ ಶೈಲಿಯ ನಾಯಕತ್ವಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ತಂಡದ ಹಿರಿಯ ಆಟಗಾರರು ಮತ್ತು ಕೋಚಿಂಗ್ ಸ್ಟಾಫ್ ನಡುವೆ ಚರ್ಚೆ ನಡೆದಿದೆ. ಊಟದ ಸಮಯದಲ್ಲಿ ಈ ಚರ್ಚೆ ನಡೆದಿದ್ದು. ರೋಹಿತ್, ಬುಮ್ರಾ, ಸೂರ್ಯ ಮುಂತಾದವರು ಈ ಋತುವಿನಲ್ಲಿ ಏಕೆ ಪಂದ್ಯಗಳನ್ನು ಗೆಲ್ಲಲು ತಂಡಕ್ಕೆ ಸಾಧ್ಯವಾಗಲಿಲ್ಲ ಎಂಬ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.