KL Rahul; ಮಾಲಕರ ತರಾಟೆಯ ಬಳಿಕ ಲಕ್ನೋ ತಂಡದ ನಾಯಕತ್ವ ತೊರೆದ ರಾಹುಲ್?
Team Udayavani, May 9, 2024, 6:48 PM IST
ಹೈದರಾಬಾದ್: ಕಳೆದ ಎರಡು ಸೀಸನ್ ಗಳಲ್ಲಿ ಪ್ಲೇ ಆಫ್ ತಲುಪಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿಯ ಐಪಿಎಲ್ ನಲ್ಲಿ ಪ್ಲೇ ಆಫ್ ರೇಸ್ ನಿಂದ ದೂರ ದೂರ ಸಾಗುತ್ತಿದೆ. ಸೀಸನ್ ಕೊನೆಯಾಗುತ್ತಿದ್ದಂತೆ ಎಲ್ಎಸ್ ಜಿ ತಂಡವು ಹೀನಾಯವಾಗಿ ಸೋಲುತ್ತಿದೆ. ಬುಧವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅತ್ಯಂತ ಹೀನಾಯವಾಗಿ ಸೋಲುಕಂಡ ಲಕ್ನೋ ಪ್ಲೇ ಆಫ್ ರೇಸ್ ನಿಂದ ಮತ್ತಷ್ಟು ದೂರ ಸಾಗಿದೆ.
ಹೈದರಾಬಾದ್ ವಿರುದ್ಧದ ಪಂದ್ಯದ ಬಳಿಕ ಲಕ್ನೋ ನಾಯಕ ಕೆಎಲ್ ರಾಹುಲ್ ಅವರಿಗೆ ಮಾಲಿಕ ಸಂಜೀವ್ ಗೋಯೆಂಕಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಗೆ ಬಯ್ಯವಂತೆ ಕಾಣುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೀಗ ಈ ಸೀಸನ್ ನಲ್ಲಿ ಎಲ್ಎಲ್ ಜಿ ತಂಡಕ್ಕೆ ಉಳಿದಿರುವ ಎರಡು ಪಂದ್ಯಗಳಲ್ಲಿ ರಾಹುಲ್ ನಾಯಕರಾಗಿ ಆಡುವುದಿಲ್ಲ ಎಂದು ವರದಿಯಾಗಿದೆ. ಅವರು ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎನ್ನುತ್ತಿದೆ ವರದಿ.
2022 ರಲ್ಲಿ ದಾಖಲೆಯ 17 ಕೋಟಿ ರೂ ಗೆ ಲಕ್ನೋ ತಂಡಕ್ಕೆ ಸೇರಿದ್ದ ರಾಹುಲ್ ಅವರನ್ನು 2025 ರ ಮೆಗಾ ಹರಾಜಿನ ಮೊದಲು ತನ್ನಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಲ್ಲದೆ ಮುಂದಿನ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಸಲುವಾಗಿ ರಾಹುಲ್ ನಾಯಕನ ಸ್ಥಾನದಿಂದ ಸ್ವತಃ ಕೆಳಗಿಳಿಯಬಹುದು ಎಂದು ವರದಿಯಾಗಿದೆ.
“ಡೆಲ್ಲಿ ವಿರುದ್ಧದ ಮುಂದಿನ ಪಂದ್ಯಕ್ಕೆ ಐದು ದಿನಗಳ ಅಂತರವಿದೆ. ಸದ್ಯಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಆದರೆ ರಾಹುಲ್ ಉಳಿದ ಎರಡು ಪಂದ್ಯಗಳಿಗೆ ತಮ್ಮ ಬ್ಯಾಟಿಂಗ್ ನತ್ತ ಗಮನ ಹರಿಸಲು ಯೋಜಿಸಿದರೆ, ಮ್ಯಾನೇಜ್‌ಮೆಂಟ್ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿದುಬಂದಿದೆ” ಎಂದು ಐಪಿಎಲ್ ಮೂಲವೊಂದು ಪಿಟಿಐಗೆ ತಿಳಿಸಿದೆ.
ಈ ಹಿಂದೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ಗೋಯೆಂಕಾ ಮಾಲೀಕರಾಗಿದ್ದ ವೇಳೆ ಅವರು ತಮ್ಮ ಎರಡನೇ ಋತುವಿನಲ್ಲಿ ಎಂಎಸ್ ಧೋನಿಯನ್ನು ನಾಯಕನ ಸ್ಥಾನದಿಂದ ವಜಾಗೊಳಿಸಿ ಸ್ಟೀವ್ ಸ್ಮಿತ್ ಅವರನ್ನು ನೇಮಿಸಿದ್ದರು ಎನ್ನುವುದನ್ನು ಗಮನಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.