ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್
Team Udayavani, May 10, 2024, 9:13 AM IST
ಟೆಹ್ರಾನ್: ಕತಾರ್‌ನಿಂದ 8 ಮಾಜಿ ಭಾರತೀಯ ನೌಕಾಪಡೆಯ ಸೈನಿಕರು ಸುರಕ್ಷಿತವಾಗಿ ಹಿಂದಿರುಗಿದ ನಂತರ ಭಾರತವು ಮತ್ತೊಂದು ಪ್ರಮುಖ ರಾಜತಾಂತ್ರಿಕ ಯಶಸ್ಸನ್ನು ಪಡೆದುಕೊಂಡಿದೆ.
ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲ್-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರು ಗುರುವಾರ ಬಿಡುಗಡೆ ಮಾಡಿದ್ದಾರೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ. ನಾವಿಕರು ಸಂಜೆಯ ವೇಳೆಗೆ ದೇಶವನ್ನು ತೊರೆದಿದ್ದಾರೆ ಎಂದು ಅದು ಹೇಳಿದೆ.
ಭಾರತೀಯರ ಬಿಡುಗಡೆಗಾಗಿ ನವದೆಹಲಿಯಿಂದ ನಿರಂತರ ರಾಜತಾಂತ್ರಿಕ ಪ್ರಯತ್ನಗಳು ನಡೆಯುತಿತ್ತು ಇದಕ್ಕೆ ಪ್ರತಿಯಾಗಿ ಪೋರ್ಚುಗೀಸ್ ಧ್ವಜದ ಕಂಟೈನರ್ ಹಡಗಿನ ಎಂಸಿಎಸ್ ಏರೀಸ್‌ನಿಂದ ಇರಾನ್ ಐವರು ಭಾರತೀಯರನ್ನು ಬಿಡುಗಡೆ ಮಾಡಿದೆ, ಇದಕ್ಕೂ ಮುನ್ನ ಏಪ್ರಿಲ್ 18 ರಂದು ಮಹಿಳಾ ಕೆಡೆಟ್ ಆನ್ ಟೆಸ್ಸಾ ಜೋಸೆಫ್ ಅವರನ್ನು ಬಿಡುಗಡೆ ಮಾಡಲಾಯಿತು. 11 ಭಾರತೀಯ ಸಿಬ್ಬಂದಿ ಇನ್ನೂ ಇರಾನ್‌ನಲ್ಲಿ ಸೆರೆಯಲ್ಲಿದ್ದಾರೆ.
ಈ ಸರಕು ಹಡಗನ್ನು ಏಪ್ರಿಲ್ 13 ರಂದು ವಶಪಡಿಸಿಕೊಳ್ಳಲಾಗಿತ್ತು. ಬಿಡುಗಡೆಗೊಂಡವರಲ್ಲಿ 5 ಭಾರತೀಯರು ಸೇರಿದಂತೆ ಫಿಲಿಪಿನೋ ಮತ್ತು ಎಸ್ಟೋನಿಯಾ ಪ್ರಜೆ ಸೇರಿದ್ದಾರೆ ಎಂದು ಪೋರ್ಚುಗಲ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ
ಇರಾನ್ ಹೇಳಿದ್ದೇನು?
ಹಡಗನ್ನು ವಶಪಡಿಸಿಕೊಂಡ ನಂತರ, ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು, ‘ಈ ಹಡಗು ಯಹೂದಿ ಆಡಳಿತದೊಂದಿಗೆ ಸಂಪರ್ಕ ಹೊಂದಿದೆ ಎಂಬುದು ಖಚಿತವಾಗಿದೆ,’ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ಬಿಡುಗಡೆ ಮಾಡುವಂತೆ ಭಾರತವು ಬೇಡಿಕೆಯನ್ನು ಇಟ್ಟಿತ್ತು. ಏಪ್ರಿಲ್ 14 ರಂದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಇರಾನ್ ಸಹವರ್ತಿ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಅವರೊಂದಿಗೆ ಭಾರತೀಯ ಸಿಬ್ಬಂದಿಯ ಬಿಡುಗಡೆಯ ಬಗ್ಗೆ ಚರ್ಚಿಸಿದ್ದರು ಎಂದು ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.