Coimbatore ಅಮೃತ ವಿಶ್ವವಿದ್ಯಾಪೀಠಕ್ಕೆ ಟಿಎಚ್‌ಇ ಏಷ್ಯಾ ಪ್ರಶಸ್ತಿ
ಪರಿಸರ ನಾಯಕತ್ವಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಗಾಗಿ ಒಲಿದು ಬಂದ ಪ್ರತಿಷ್ಠಿತ ಗೌರವ
Team Udayavani, May 11, 2024, 6:35 AM IST
ಕೊಯಮತ್ತೂರು: ದೇಶದ ಟಾಪ್ 10 ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾನ ಪಡೆದಿರುವ ಅಮೃತ ವಿಶ್ವವಿದ್ಯಾಪೀಠವು ಪರಿಸರ ನಾಯಕತ್ವಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಗಾಗಿ ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಶನ್(ಟಿಎಚ್‌ಇ) ಏಷ್ಯಾ ಪ್ರಶಸ್ತಿಗೆ ಭಾಜನವಾಗಿದೆ.
ಅಮೃತ ವಿದ್ಯಾಪೀಠವು ಗ್ರಾಮೀಣ ಭಾರತವನ್ನು ತಲುಪುವ ಉದ್ದೇಶದಿಂದ “ಲೈವ್ ಇನ್‌ಲ್ಯಾಬ್ ‘ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮುದಾಯದೊಂದಿಗೆ ಬೆರೆಯುವ, ಅವರ ದೈನಂದಿನ ಜೀವನದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಅಮೃತದ ವಿದ್ಯಾರ್ಥಿಗಳು ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ.
ದಿನದಿಂದ ದಿನಕ್ಕೆ ವಿಜ್ಞಾನ-ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದ್ದು, ನಾನಾ ಸುಧಾರಣೆಗಳೂ ಆಗುತ್ತಿವೆ. ಇವು ಬಡವರನ್ನು ತಲುಪುವುದು ಹೇಗೆ? ಎಲ್ಲರಿಗೂ ಭವಿಷ್ಯದಲ್ಲಿ ಸುಸ್ಥಿರ ಬದುಕು ಒದಗಿಸುವುದು ಹೇಗೆ ಎಂಬ ಪ್ರಶ್ನೆ ಮೂಡಿದಾಗ “ಅಮೃತ’ದ ಹಿರಿಯರು ಸೇರಿ ರೂಪಿಸಿದ ಕಾರ್ಯಕ್ರಮ “ಲೈವ್ ಇನ್ ಲ್ಯಾಬ್’. ಇದರ ಮೂಲಕ ಅಮೃತದ ವಿದ್ಯಾರ್ಥಿಗಳು ಮತ್ತು ಸಿಬಂದಿಯು ಭಾರತದ ಗ್ರಾಮೀಣ ಸಮುದಾಯಗಳನ್ನು ಭೇಟಿ ಮಾಡಿ, ಅಲ್ಲಿನ ದೈನಂದಿನ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಜತೆಗೆ ನಮ್ಮ ವಿದ್ಯಾರ್ಥಿಗಳು ಸಹಾನುಭೂತಿ, ವಿನಯತೆ ಗುಣಗಳನ್ನು ಬೆಳೆಸಿಕೊಂಡು, ಸುಸ್ಥಿರತೆಯ ವಕ್ತಾರರಾಗಲು ಅಗತ್ಯವಾದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಸಹಾಯವಾಗಿದೆ ಎಂದು ಅಮೃತ ಸ್ಕೂಲ್ ಫಾರ್ ಸಸ್ಟೈನಬಲ್ ಫ್ಯೂಚರ್‌ನ ಡೀನ್ ಮನೀಷಾ ವಿ.ರಮೇಶ್ ತಿಳಿಸಿದ್ದಾರೆ.
ಕುಲಪತಿ ಮಾತಾ ಅಮೃತಾನಂದಮಯಿ ದೇವಿ ಅವರು ದಶಕದ ಹಿಂದೆ “ಲೈವ್ ಇನ್ ಲ್ಯಾಬ್ಸ್’ ಆರಂಭಿಸಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ಹಳ್ಳಿಯ ಜೀವನ ಅನುಭವಿಸಲು ಮತ್ತು ಸಮುದಾ ಯದ ಸವಾಲುಗಳನ್ನು ಪರಿಹರಿಸಲು ಸುಸ್ಥಿರ ಪರಿಹಾರಗಳನ್ನು ನೀಡಲು ಅವಕಾಶ ಒದಗಿಸಿದ ವಿಶ್ವದ ಮೊದಲ ವಿಶ್ವವಿದ್ಯಾನಿಲಯಗಳಲ್ಲಿ ಇದು ಒಂದು. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಫಲಾನುಭವಿ ಗಳನ್ನು ತಲುಪಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.