Punjab ಅಭಿಮಾನಿಗಳ ಕ್ಷಮೆ ಕೋರಿದ ನಾಯಕ ಸ್ಯಾಮ್ ಕರನ್
Team Udayavani, May 11, 2024, 12:07 AM IST
ಧರ್ಮಶಾಲಾ: ಆರ್‌ಸಿಬಿ ಎದುರಿನ ಗುರುವಾರದ ನಿರ್ಣಾಯಕ ಪಂದ್ಯವನ್ನು ಸೋಲುವ ಮೂಲಕ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಇದಕ್ಕಾಗಿ ತಂಡದ ಉಸ್ತುವಾರಿ ನಾಯಕ, ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರನ್ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ.
“ಪಂದ್ಯಾವಳಿಯುದ್ದಕ್ಕೂ ಸಾಕಷ್ಟು ಸಕಾರಾತ್ಮಕ ಅಂಶಗಳು ನಮಗೆ ಎದು ರಾದವು. ದುರದೃಷ್ಟವಶಾತ್ ಎಲ್ಲವನ್ನೂ ಬಳಸಿಕೊಳ್ಳಲಾಗಲಿಲ್ಲ. ನಮ್ಮದು ಅತ್ಯುತ್ತಮ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ವಿಶ್ವದಾಖಲೆಯ ಮೊತ್ತ ವನ್ನೂ ಬೆನ್ನಟ್ಟಿ ಗೆದ್ದ ಹಿರಿಮೆ ನಮ್ಮದು. ಆದರೆ ಇನ್ನೂ ಕೆಲವು ಗೆಲುವು ಗಳ ಅಗತ್ಯವಿತ್ತು. ಮುಂದಿನ ಪಂದ್ಯ ಗಳನ್ನು ಗೆದ್ದು ಒಂದಿಷ್ಟು ಖುಷಿ ಪಡ ಬೇಕಿದೆ. ನಿರ್ಗಮನಕ್ಕಾಗಿ ನಾವು ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸುತ್ತೇವೆ’ ಎಂಬುದಾಗಿ ಸ್ಯಾಮ್ ಕರನ್ ಹೇಳಿದರು.
ಶಿಖರ್ ಧವನ್ ಗಾಯಾಳಾಗಿ ಹೊರಬಿದ್ದ ಬಳಿಕ ಸ್ಯಾಮ್ ಕರನ್ ಅವರನ್ನು ಪಂಜಾಬ್ ತಂಡದ ನಾಯಕ ನನ್ನಾಗಿ ನೇಮಿಸಲಾಗಿತ್ತು.
ಗುರುವಾರದ ಆರ್‌ಸಿಬಿ- ಪಂಜಾಬ್ ನಡುವಿನ ಪಂದ್ಯದಲ್ಲಿ ಪರಾಜಿತ ತಂಡ ಕೂಟದಿಂದ ಹೊರ ಬೀಳಲಿದೆ ಎಂಬ ಸ್ಥಿತಿ ಇತ್ತು. ಇದು ಪಂಜಾಬ್‌ಗ ಎದು ರಾಯಿತು. ಇದರೊಂದಿಗೆ 2 ತಂಡ ಗಳು 2024ರ ಐಪಿಎಲ್‌ನಿಂದ ನಿರ್ಗಮಿಸಿ ದಂತಾಯಿತು. ಮೊದಲ ತಂಡ ಮುಂಬೈ ಇಂಡಿಯನ್ಸ್. ಪಂಜಾಬ್ ಕಿಂಗ್ಸ್ ಇನ್ನು ರಾಜಸ್ಥಾನ್ ಮತ್ತು ಹೈದರಾಬಾದ್ ವಿರುದ್ಧ ಆಡಲಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.