![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, May 11, 2024, 6:45 AM IST
ಹೊಸದಿಲ್ಲಿ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ತಾನಾಗಿಯೇ ಭಾರತವನ್ನು ಸೇರಲಿದೆ ಎಂದು ಲೋಕಸಭೆ ಚುನಾವಣೆ ವೇಳೆ ಹೇಳಿಕೆಗಳು ಕೇಳಿ ಬರುತ್ತಿರುವಾಗಲೇ ಪಿಒಕೆಯಲ್ಲಿ ಭಾರೀ ಸಂಘರ್ಷ ನಡೆದಿದೆ. ಬೆಲೆಯೇರಿಕೆ, ನ್ಯಾಯಸಮ್ಮತವಲ್ಲದ ತೆರಿಗೆ, ಪದೇಪದೆ ವಿದ್ಯುತ್ ಕಡಿತ ವಿರೋಧಿಸಿ ಪಾಕ್ ಸರಕಾರದ ವಿರುದ್ಧ ಪಿಒಕೆ ಜನರು ಶುಕ್ರವಾರ ಬೀದಿಗಿಳಿದಿದ್ದಾರೆ.
ಶನಿವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯು ಶುಕ್ರವಾರ ದಿಢೀರನೆ ಪಿಒಕೆಯ ಮೀರ್ಪುರ್ ಜಿಲ್ಲೆಯ ದದ್ಯಾಲ್‌ನಲ್ಲಿ ಸ್ಫೋಟಗೊಂಡಿದೆ.
ಜಮ್ಮು – ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿ ಶನಿವಾರ ಪ್ರತಿಭಟನೆಯನ್ನು ಆಯೋಜಿಸಿತ್ತು. ಆದರೆ ಪಾಕ್ ಸರಕಾರವು ಹೆಚ್ಚುವರಿ ಪಡೆಗಳ ನಿಯೋಜಿಸಿ 70ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದರಿಂದ ಜನರು ಶುಕ್ರವಾರವೇ ಬೀದಿಗಿಳಿದರು. ಪ್ರತಿಭಟನೆ ನಡೆಸಿ ಭದ್ರತ ಪಡೆಗಳತ್ತ ಕಲ್ಲುತೂರಾಟ ನಡೆಸಿದರು. ಪ್ರತಿಭಟನೆ ನಿಯಂತ್ರಣಕ್ಕಾಗಿ ಪೊಲೀಸರು ಅಶ್ರುವಾಯು ಸಿಡಿಸಿದ್ದು, ಕೆಲವು ಶಾಲೆಗಳ ಆವರಣದಲ್ಲಿ ಬಿದ್ದಿವೆ. ಇದರಿಂದಾಗಿ ಅನೇಕ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.
ದದ್ಯಾಲ್ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಪ್ರತಿಭಟನೆ ಸಂಬಂಧ ಇಬ್ಬರು ವಿದ್ಯಾರ್ಥಿ ನಾಯಕರ ಸಹಿತ ಕ್ರಿಯಾಸಮಿತಿಯ 8 ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಪಿಒಕೆಯಲ್ಲಿ ಇದೇ ರೀತಿಯ ಪ್ರತಿಭಟನೆ 2023ರ ಆಗಸ್ಟ್‌ನಲ್ಲೂ ನಡೆದಿತ್ತು.
ಪ್ರತಿಭಟನೆ ಏಕೆ?
ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಕಳೆದ ಫೆಬ್ರವರಿಯಲ್ಲಿ ಜಮ್ಮು -ಕಾಶ್ಮೀರ ಅವಾಮಿ ಜಂಟಿ ಕ್ರಿಯಾ ಸಮಿತಿ ಮತ್ತು ಪಾಕ್ ಸರಕಾರದ ಮಧ್ಯೆ ಒಪ್ಪಂದವಾಗಿತ್ತು. ಆದರೆ ಈ ಒಪ್ಪಂದದ ಅನ್ವಯ ಬೇಡಿಕೆಗಳನ್ನು ಈಡೇರಿಸಲು ವಿಫಲವಾದ ಹಿನ್ನೆಲೆಯಲ್ಲಿ ಕ್ರಿಯಾ ಸಮಿತಿ ಪ್ರತಿಭಟನೆಗೆ ಕರೆ ನೀಡಿತ್ತು.
ಸಚಿವ ರಾಜನಾಥ್, ಶಾ ಹೇಳಿದ್ದೇನು?
ಪಿಒಕೆ ಮೇಲಿನ ಹಕ್ಕನ್ನು ಭಾರತ ಎಂದಿಗೂ ಬಿಟ್ಟುಕೊಡುವುದಿಲ್ಲ. ಆದರೆ ಅದನ್ನು ಪಡೆಯಲು ಭಾರತವು ಸೇನೆಯನ್ನು ಉಪಯೋಗಿಸುವುದಿಲ್ಲ. ಕಾಶ್ಮೀರದ ಬೆಳವಣಿಗೆಯನ್ನು ಕಂಡು ಅಲ್ಲಿನ ಜನರೇ ಭಾರತದೊಂದಿಗೆ ಬರಲಿದ್ದಾರೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಪಿಒಕೆ ಪ್ರತೀ ಇಂಚು ಭಾರತಕ್ಕೆ ಸೇರಿದ್ದಾಗಿದೆ. ಅದನ್ನೂ ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಶುಕ್ರವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.