IPL; ಚೆನ್ನೈ ವಿರುದ್ಧ ಅಬ್ಬರ; ಗುಜರಾತ್ ಪ್ಲೇ ಆಫ್ ಆಸೆ ಜೇವಂತ


Team Udayavani, May 11, 2024, 12:28 AM IST

1-wqeqwew

ಅಹ್ಮದಾಬಾದ್‌: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರಿಸಿದ ಗುಜರಾತ್ ಟೈಟಾನ್ಸ್ 35 ರನ್ ಗಳ ಜಯ ಸಾಧಿಸಿ ಪ್ಲೇ ಆಫ್ ಗೆ ಪ್ರವೇಶಿಸುವ ಆಸೆ ಜೇವಂತವಾಗಿರಿಸಿಕೊಂಡಿದೆ.

ಆರಂಭಿಕರಾದ ಶುಭಮನ್‌ ಗಿಲ್‌ ಮತ್ತು ಸಾಯಿ ಸುದರ್ಶನ್‌ ಸಿಡಿಸಿದ ಶತಕ, ಇವರಿಬ್ಬರು ದಾಖಲಿಸಿದ ದ್ವಿಶತಕದ ಜತೆಯಾಟದ ಸಾಹಸದಿಂದ ಚೆನ್ನೈ ಎದುರಿನ ಪಂದ್ಯದಲ್ಲಿ ಗುಜರಾತ್‌ 3 ವಿಕೆಟಿಗೆ 231 ರನ್‌ ರಾಶಿ ಹಾಕಿತು. ಇದು ಗುಜರಾತ್‌ನ 2ನೇ ಅತ್ಯಧಿಕ ಗಳಿಕೆ. ಚೆನ್ನೈ ವಿರುದ್ಧ ಪೇರಿಸಲ್ಪಟ್ಟ ಅತ್ಯಧಿಕ ಮೊತ್ತದ ಜಂಟಿ ದಾಖಲೆ. 2014ರ ಕಟಕ್‌ ಪಂದ್ಯದಲ್ಲಿ ಪಂಜಾಬ್‌ 4ಕ್ಕೆ 231 ರನ್‌ ಮಾಡಿತ್ತು.

ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ 8 ವಿಕೆಟ್ ನಷ್ಟಕ್ಕೆ 196 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. 10 ಕ್ಕೆ 3 ವಿಕೆಟ್ ಕಳೆದುಕೊಂಡು ಭಾರೀ ಆಘಾತ ಅನುಭವಿಸಿದ್ದು ಚೆನ್ನೈ ಪಾಲಿಗೆ ಶಾಪವಾಯಿತು. ಡ್ಯಾರಿಲ್ ಮಿಚೆಲ್ 63, ಮೊಯಿನ್ ಅಲಿ 56, ಶಿವಂ ದುಬೆ 21, ರವೀಂದ್ರ ಜಡೇಜ18 ಮತ್ತು ಧೋನಿ ಅವರು ಔಟಾಗದೆ 26 ರನ್ ಗಳಿಸಿದರೂ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ. ಗುಜರಾತ್ ಪರ ಬಿಗಿ ದಾಳಿ ನಡೆಸಿದ ಮೋಹಿತ್ ಶರ್ಮ 3 ವಿಕೆಟ್ ಕಬಲಿಸಿದರು.

17.2 ಓವರ್‌ಗಳ ತನಕ ಕ್ರೀಸ್‌ ಆಕ್ರಮಿಸಿಕೊಂಡ ಗಿಲ್‌-ಸುದರ್ಶನ್‌ 210 ರನ್‌ ಜತೆಯಾಟ ನಡೆಸಿ ಚೆನ್ನೈ ಬೌಲರ್‌ಗಳಿಗೆ ಬೆವರಿಳಿಸಿದರು. ಇಬ್ಬರ ಶತಕವೂ 50 ಎಸೆತಗಳಲ್ಲಿ ಪೂರ್ತಿಗೊಂಡಿತು. ಇದು ಐಪಿಎಲ್‌ ಇನ್ನಿಂಗ್ಸ್‌ ಒಂದರಲ್ಲಿ ದಾಖಲಾದ ಅವಳಿ ಶತಕದ 3ನೇ ನಿದರ್ಶನ.

ಗಿಲ್‌ 55 ಎಸೆತ ಎದುರಿಸಿ 104 ರನ್‌ ಬಾರಿಸಿದರು (9 ಫೋರ್‌, 6 ಸಿಕ್ಸರ್‌). ಇದು ಗಿಲ್‌ ಅವರ 4ನೇ ಶತಕ. ಅವರ ಎಲ್ಲ ಶತಕಗಳೂ ಅಹ್ಮದಾಬಾದ್‌ನಲ್ಲೇ ದಾಖಲಾದದ್ದು ವಿಶೇಷ. ಇದರೊಂದಿಗೆ ಅಹ್ಮದಾಬಾದ್‌ನಲ್ಲಿ ಆಡಿದ 19 ಇನ್ನಿಂಗ್ಸ್‌ಗಳಲ್ಲಿ ಗಿಲ್‌ ಗಳಿಕೆ 1,079ಕ್ಕೆ ಏರಿತು. ಸಾಯಿ ಸುದರ್ಶನ್‌ ಮೊದಲ ಸೆಂಚುರಿ ಹೊಡೆದರು. 51 ಎಸೆತ ಎದುರಿಸಿದ ಅವರು 7 ಸಿಕ್ಸರ್‌, 5 ಬೌಂಡರಿ ನೆರವಿನಿಂದ 103 ರನ್‌ ಬಾರಿಸಿದರು.

ಪ್ರಚಂಡ ಜತೆಯಾಟ
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್‌ ಟೈಟಾನ್ಸ್‌ಗೆ ಸಾಯಿ ಸುದರ್ಶನ್‌ ಮತ್ತು ಶುಭ ಮನ್‌ ಗಿಲ್‌ ಪ್ರಚಂಡ ಆರಂಭವಿತ್ತರು. ಮಿಚೆಲ್‌ ಸ್ಯಾಂಟ್ನರ್‌ ಎಸೆದ ಮೊದಲ ಓವರ್‌ನಲ್ಲೇ 14 ರನ್‌ ಸೋರಿಹೋಯಿತು. ಇಬ್ಬರೂ ಸೇರಿಕೊಂಡು ಹತ್ತರ ಸರಾಸರಿ ಕಾಯ್ದುಕೊಂಡು ದಾಪುಗಾಲಿಕ್ಕಿದರು.
ಪವರ್‌ ಪ್ಲೇಯಲ್ಲಿ 58 ರನ್‌ ಒಟ್ಟು ಗೂಡಿತು. 9.3 ಓವರ್‌ಗಳಲ್ಲಿ ಶತಕದ ಜತೆಯಾಟ ಪೂರ್ತಿಗೊಂಡಿತು. 10 ಓವರ್‌ ಅಂತ್ಯಕ್ಕೆ ಸ್ಕೋರ್‌ 107ಕ್ಕೆ ಏರಿತು. ಮೊದ ಲಾರ್ಧ ದಲ್ಲಿ ಚೆನ್ನೈ 6 ಮಂದಿ ಬೌಲರ್‌ಗಳನ್ನು ದಾಳಿ ಗಿಳಿಸಿ ತಾದರೂ ಗುಜರಾತ್‌ನ ಆರಂಭಿಕರನ್ನು ಬೇರ್ಪಡಿ ಸಲು ಸಾಧ್ಯ  ವಾಗಲಿಲ್ಲ. ರವೀಂದ್ರ ಜಡೇಜ ಅವರಂತೂ ಬಹಳ ದುಬಾರಿ ಯಾದರು.

ದ್ವಿತೀಯಾರ್ಧದಲ್ಲಿ ಗಿಲ್‌-ಸುದರ್ಶನ್‌ ಜೋಡಿಯ ಬ್ಯಾಟಿಂಗ್‌ ಇನ್ನಷ್ಟು ಬಿರುಸು ಪಡೆಯಿತು. ಸಿಮ್ರನ್‌ಜಿàತ್‌ ಸಿಂಗ್‌ ಚೆನ್ನಾಗಿ ದಂಡಿಸಿಕೊಂಡರು. 12.4 ಓವರ್‌ಗಳಲ್ಲಿ ಗುಜರಾತ್‌ ಮೊತ್ತ ನೂರೈವತ್ತರ ಗಡಿ ದಾಟಿತು. 15 ಓವರ್‌ ಮುಕ್ತಾಯಕ್ಕೆ 190 ರನ್‌ ಆಗಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಕೇವಲ 41 ರನ್‌ ನೀಡುವ ಮೂಲಕ ಚೆನ್ನೈ ನಿಯಂತ್ರಣ ಸಾಧಿಸಿತು.

ಸಾಯಿ ಸಾವಿರ ರನ್‌
ಈ ಬ್ಯಾಟಿಂಗ್‌ ಅಬ್ಬರದ ವೇಳೆ ಸಾಯಿ ಸುದರ್ಶನ್‌ ಐಪಿಎಲ್‌ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದರು. ಇದಕ್ಕಾಗಿ ಅವರು ತೆಗೆದುಕೊಂಡದ್ದು 25 ಇನ್ನಿಂಗ್ಸ್‌. ಈ ಲೆಕ್ಕಾಚಾರದಲ್ಲಿ ಅವರಿಗೆ ಮ್ಯಾಥ್ಯೂ ಹೇಡನ್‌ ಜತೆ ಜಂಟಿ 3ನೇ ಸ್ಥಾನ. ಶಾನ್‌ ಮಾರ್ಷ್‌ (21 ಇನ್ನಿಂಗ್ಸ್‌) ಮತ್ತು ಲೆಂಡ್ಲ್ ಸಿಮನ್ಸ್‌ (23 ಇನ್ನಿಂಗ್ಸ್‌) ಮೊದಲೆರಡು ಸ್ಥಾನದಲ್ಲಿದ್ದಾರೆ.

ದಾಖಲೆ ಜತೆಯಾಟ
ಸ್ಕೋರ್‌ 148ಕ್ಕೆ ಏರಿದಾಗ ಗುಜರಾತ್‌ ಪರ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ಸರ್ವಾಧಿಕ ರನ್‌ ಜತೆಯಾಟ ದಾಖಲಾಯಿತು. ಕಳೆದ ಋತುವಿನಲ್ಲಿ, ಇದೇ ಜೋಡಿ 147 ರನ್‌ ಪೇರಿಸಿದ ದಾಖಲೆ ಹಿಂದುಳಿಯಿತು.
ಈ ಜೋಡಿ ಚೆನ್ನೈ ವಿರುದ್ಧ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ದಾಖಲೆ ಜತೆಯಾಟ ನಡೆಸಿದ ಹೆಗ್ಗಳಿಕೆಗೂ ಪಾತ್ರವಾಯಿತು. 2015ರಲ್ಲಿ ರಾಜಸ್ಥಾನ್‌ ಆರಂಭಿಕರಾದ ರಹಾನೆ-ವಾಟ್ಸನ್‌ 144 ರನ್‌ ಒಟ್ಟುಗೂಡಿಸಿದ ದಾಖಲೆ ಪತನಗೊಂಡಿತು.

ಟಾಪ್ ನ್ಯೂಸ್

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

033

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..

Basangouda Patil Yatnal

BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Kanpura Test: Indian players left the match and went to the hotel due to rain

Kanpur Test: ಪಂದ್ಯ ಬಿಟ್ಟು ಹೋಟೆಲ್‌ ಗೆ ತೆರಳಿದ ಭಾರತೀಯ ಆಟಗಾರರು

ENGvsAUS: ಇಂಗ್ಲೆಂಡ್‌ ಆಟಕ್ಕೆ ಸೋತ ಆಸೀಸ್;‌ ಸರಣಿ ಸಮಗೊಳಿಸಿದ ಬ್ರೂಕ್‌ ಪಡೆ

ENGvsAUS: ಇಂಗ್ಲೆಂಡ್‌ ಆಟಕ್ಕೆ ಸೋತ ಆಸೀಸ್;‌ ಸರಣಿ ಸಮಗೊಳಿಸಿದ ಬ್ರೂಕ್‌ ಪಡೆ

1-bevas

Test ವಿವಾದ : ಹಲ್ಲೆಯಾಗಿಲ್ಲ, ಬಾಂಗ್ಲಾ ಹುಲಿ ‘ಅಸ್ವಸ್ಥ’

1-kamindu

Test; ಬ್ರಾಡ್‌ಮನ್‌ ದಾಖಲೆ ಸರಿದೂಗಿಸಿದ ಮೆಂಡಿಸ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.