ಪ್ರಜ್ವಲ್ಗೆ ಇನ್ನೊಂದು ಅತ್ಯಾಚಾರ ಕೇಸ್ ಕುಣಿಕೆ ; ಕಠಿನ ವಿಧಿಗಳುಳ್ಳ 3ನೇ ಎಫ್ಐಆರ್ ದಾಖಲು
Team Udayavani, May 11, 2024, 6:55 AM IST
ಬೆಂಗಳೂರು: ಹಾಸನದ ಅಶ್ಲೀಲ ಪೆನ್ಡ್ರೈವ್ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ದಾಖಲಿಸಲ್ಪಟ್ಟಿರುವ ಕಠಿನ ವಿಧಿಗಳಿಂದ ಪ್ರಜ್ವಲ್ಗೆ ಸುತ್ತಿಕೊಂಡಿರುವ ಕುಣಿಕೆ ಇನ್ನಷ್ಟು ಬಿಗಿಯಾಗುವ ಲಕ್ಷಣಗಳಿವೆ.
ಮೇ 8ರಂದು ಸಂತ್ರಸ್ತೆಯೊಬ್ಬರು ಪ್ರಜ್ವಲ್ ವಿರುದ್ಧ ನೀಡಿರುವ ದೂರಿಗೆ ಸಂಬಂಧಿಸಿದಂತೆ 3ನೇ ಎಫ್ಐಆರ್ ದಾಖಲಾಗಿದೆ.
ಇಬ್ಬರು ಸರಕಾರಿ ಅಧಿಕಾರಿಗಳಿಂದ ದೂರು?
ಪ್ರಕರಣದಲ್ಲಿ ಸಿಲುಕಿರುವ ಕೆಲವು ಮಹಿಳಾ ಸರಕಾರಿ ಅಧಿಕಾರಿಗಳು ಎಸ್ಐಟಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಮಹಿಳಾ ಅಧಿಕಾರಿಗಳಿಂದ ಎಸ್ಐಟಿ ಹೇಳಿಕೆ ದಾಖಲಿಸಿಕೊಂಡಿದೆ ಎನ್ನಲಾಗಿದೆ.
ವರ್ಗಾವಣೆಗಾಗಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿಲ್ಲ. ಸಂತ್ರಸ್ತ ಮಹಿಳೆಯರ ಹೇಳಿಕೆಯನ್ನು ಹಳೆಯ ಎಫ್ಐಆರ್ಗೆ ಸೇರ್ಪಡ ಮಾಡಬೇಕೇ ಅಥವಾ ಪ್ರತ್ಯೇಕ ಎಫ್ಐಆರ್ ದಾಖಲಿಸಬೇಕೇ ಎಂಬ ಬಗ್ಗೆ ತಿಳಿದುಕೊಳ್ಳಲು ಎಸ್ಐಟಿ ಕಾನೂನು ತಜ್ಞರ ಮೊರೆ ಹೋಗಿದೆ.
ಯಾವೆಲ್ಲ ಸೆಕ್ಷನ್ಗಳು? ಏನು ಶಿಕ್ಷೆ?
376(2)(ಎನ್): ಮಹಿಳೆಯ ಮೇಲೆ ಅತ್ಯಾಚಾರ. ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆ.
376(2)(ಕೆ): ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ. ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆ.
-354(ಎ): ಲೈಂಗಿಕ ದೌರ್ಜನ್ಯ. 3 ವರ್ಷ ಶಿಕ್ಷೆ
- 354(ಬಿ): ಸಂತ್ರಸ್ತೆಯ ಬಟ್ಟೆ ಹಿಡಿದು ಎಳೆದಾಡಿರುವುದು. 3ರಿಂದ 7 ವರ್ಷಗಳವರೆಗೆ ಶಿಕ್ಷೆ.
-354(ಸಿ): ಮಹಿಳೆಯ ಲೈಂಗಿಕ ಕ್ರಿಯೆಯನ್ನು ಚಿತ್ರೀಕರಿಸುವುದು, ವೀಕ್ಷಿಸುವುದು. 3 ರಿಂದ 7 ವರ್ಷಗಳವರೆಗೆ ಶಿಕ್ಷೆ.
506- ಬೆದರಿಕೆ. ಗರಿಷ್ಠ 7 ವರ್ಷ ಶಿಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.