Surlabbi ವಿದ್ಯಾರ್ಥಿನಿ ಕೊಲೆ ಪ್ರಕರಣ; ವಿದ್ಯಾರ್ಥಿನಿಯ ಹತ್ಯೆಗೈದ ಯುವಕ ಆತ್ಮಹತ್ಯೆ?

Team Udayavani, May 11, 2024, 6:45 AM IST

Surlabbi ವಿದ್ಯಾರ್ಥಿನಿ ಕೊಲೆ ಪ್ರಕರಣ; ವಿದ್ಯಾರ್ಥಿನಿಯ ಹತ್ಯೆಗೈದ ಯುವಕ ಆತ್ಮಹತ್ಯೆ?

ಮಡಿಕೇರಿ: ಸೂರ್ಲಬ್ಬಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮೀನಾ (16) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿಯಲ್ಲಿದ್ದ ಏಕೈಕ ವಿದ್ಯಾರ್ಥಿನಿ ಯು. ಎಸ್‌. ಮೀನಾ ಈ ಬಾರಿಯ ಪರೀಕ್ಷೆಯಲ್ಲಿ 314 ಅಂಕ ಗಳಿಸಿ ತೇರ್ಗಡೆ ಹೊಂದಿದ್ದಳು. ಇದರ ಸಂತೋಷದ ನಡುವೆಯೇ ಮನೆಯವರು ಈಕೆಯ ವಿವಾಹಕ್ಕೆಂದು ಪಕ್ಕದ ಹಮ್ಮಿಯಾಲ ಗ್ರಾಮದ ಪ್ರಕಾಶ್‌ (32) ಜತೆ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ 18 ವರ್ಷದ ಅನಂತರ ವಿವಾಹ ಮಾಡುವಂತೆ ಕಾನೂನಿನ ಅರಿವು ಮೂಡಿಸಿದ್ದರು. ಅನಂತರ ಎರಡೂ ಮನೆಯವರು ಮೀನಾಳಿಗೆ 18 ವರ್ಷ ತುಂಬಿದ ಮೇಲೆ ವಿವಾಹ ಮಾಡಲು ನಿಶ್ಚಯಿಸಿದರು. ಇದರಿಂದ ಕುಪಿತಗೊಂಡ ಪ್ರಕಾಶ್‌ ಗುರುವಾರ ಸಂಜೆ ವೇಳೆ ಮೀನಾಳ ಮನೆಗೆ ಬಂದು ಆಕೆಯ ತಂದೆ, ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ.

ಅನಂತರ ಮೀನಾಳನ್ನು ಸ್ವಲ್ಪ ದೂರ ಎಳೆದೊಯ್ದು ತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾನೆ ಎಂದು ಎಸ್‌ಪಿ ಕೆ.ರಾಮರಾಜನ್‌ ಮಾಹಿತಿ ನೀಡಿದ್ದಾರೆ.

ಆರೋಪಿ ಪ್ರಕಾಶ್‌ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಮೃತ ಮೀನಾ ತಂದೆ, ತಾಯಿ, ಮೂವರು ಸಹೋದರಿಯರು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾಳೆ. ಮೀನಾ ಕೊನೆಯ ಪುತ್ರಿಯಾಗಿದ್ದಾಳೆ.

ಪ್ರಕಾಶ್‌ ಹಲ್ಲೆಯಿಂದ ಗಾಯಗೊಂಡಿರುವ ತಾಯಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕುಟುಂಬದ ಸದಸ್ಯರಿಗೆ ರಕ್ಷಣೆ

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ ಕೆ.ರಾಮರಾಜನ್‌, ತೀವ್ರವಾಗಿ ಗಾಯಗೊಂಡಿರುವ ಮೀನಾಳ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದರು.

ಮೀನಾಳನ್ನು ಭೀಕರವಾಗಿ ಹತ್ಯೆಗೈದಿರುವುದರಿಂದ ಆಕೆಯ ತಂದೆ, ತಾಯಿ ಹಾಗೂ ಕುಟುಂಬದ ಸದಸ್ಯರಿಗೂ ಪೊಲೀಸ್‌ ಭದ್ರತೆ ನೀಡಲಾಗುತ್ತಿದೆ. ತಾಯಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಮತ್ತು ಸೂರ್ಲಬ್ಬಿಯ ಮನೆಯ ಸಮೀಪ ಹೆಚ್ಚುವರಿ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗಿದೆ. ಆರೋಪಿ ಪ್ರಕಾಶ್‌ ಕೊಲೆ ಮಾಡುವ ಸಂದರ್ಭ ವಾಹನದೊಂದಿಗೆ ಮತ್ತೂಬ್ಬ ವ್ಯಕ್ತಿಯೂ ಇದ್ದ ಎಂದು ತಿಳಿದು ಬಂದಿದ್ದು, ಈತನ ಪತ್ತೆಗೂ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಆತ್ಮಹತ್ಯೆ ಖಚಿತವಿಲ್ಲ
ಆರೋಪಿ ಪ್ರಕಾಶ್‌ ತನ್ನ ಮನೆಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವ್ಯಾಪಕವಾಗಿ ಸುದ್ದಿ ಹಬ್ಬಿದ ಕುರಿತು ಸ್ಪಷ್ಟೀಕರಣ ನೀಡಿರುವ ಎಸ್‌ಪಿ ಕೆ. ರಾಮರಾಜನ್‌ ಅವರು, ಆರೋಪಿಯ ಮೃತದೇಹ ಪತ್ತೆಯಾಗದೆ ಇರುವುದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಖಾತ್ರಿ ಪಡಿಸಲು ಸಾಧ್ಯವಿಲ್ಲ ಮತ್ತು ಖಚಿತವಲ್ಲ ಎಂದು ತಿಳಿಸಿದರು.

ಟಾಪ್ ನ್ಯೂಸ್

ಅನುದಾನದ ಹಂಚಿಕೆ ವಿಚಾರ: ಪ.ಪಂ.ಸಭೆಯಲ್ಲಿ ಆಡಳಿತಾಧಿಕಾರಿ, ಸದಸ್ಯರ ನಡುವೆ ಜಟಾಪಟಿ

ಅನುದಾನದ ಹಂಚಿಕೆ ವಿಚಾರ: ಪ.ಪಂ.ಸಭೆಯಲ್ಲಿ ಆಡಳಿತಾಧಿಕಾರಿ, ಸದಸ್ಯರ ನಡುವೆ ಜಟಾಪಟಿ

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

krishne-bhyre-gowda

ಸರಕಾರಿ ಕಾರ್ಯಕ್ರಮಕ್ಕೆ ಬಂದು ಸ್ವಾಮೀಜಿ ರಾಜಕೀಯ ಮಾತಾಡಿದರೆ ಹೇಗೆ?: ಕೃಷ್ಣಭೈರೇಗೌಡ ಅಸಮಾಧಾನ

Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!

Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Kasaragod ಬೈಕ್‌ ಅಪಘಾತ : ಗಾಯಾಳು ಯುವಕ ಸಾವು

Kasaragod ಬೈಕ್‌ ಅಪಘಾತ : ಗಾಯಾಳು ಯುವಕ ಸಾವು

Madikeri ವಿರಾಜಪೇಟೆ: ಡೆಂಗ್ಯೂ ಪ್ರಕರಣ ಹೆಚ್ಚಳ

7-kodagu

Madikeri: ಜು.1 ರಿಂದ ಭಾರಿ ವಾಹನಗಳ ಸಂಚಾರ ನಿಷೇಧ

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

ಅನುದಾನದ ಹಂಚಿಕೆ ವಿಚಾರ: ಪ.ಪಂ.ಸಭೆಯಲ್ಲಿ ಆಡಳಿತಾಧಿಕಾರಿ, ಸದಸ್ಯರ ನಡುವೆ ಜಟಾಪಟಿ

ಅನುದಾನದ ಹಂಚಿಕೆ ವಿಚಾರ: ಪ.ಪಂ.ಸಭೆಯಲ್ಲಿ ಆಡಳಿತಾಧಿಕಾರಿ, ಸದಸ್ಯರ ನಡುವೆ ಜಟಾಪಟಿ

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

krishne-bhyre-gowda

ಸರಕಾರಿ ಕಾರ್ಯಕ್ರಮಕ್ಕೆ ಬಂದು ಸ್ವಾಮೀಜಿ ರಾಜಕೀಯ ಮಾತಾಡಿದರೆ ಹೇಗೆ?: ಕೃಷ್ಣಭೈರೇಗೌಡ ಅಸಮಾಧಾನ

Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!

Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.