SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!
Team Udayavani, May 11, 2024, 12:55 AM IST
ಪುತ್ತೂರು: ರಾಜ್ಯದ ನಾನಾ ಭಾಗಗಳಲ್ಲಿ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ನೋಡಿ ವಿದ್ಯಾರ್ಥಿ ಗಳು ಸಂಭ್ರಮಿಸುತ್ತಿದ್ದರೆ ಇಲ್ಲಿ ಮಾತ್ರ ತೇರ್ಗಡೆಯಾಗಿ ದ್ದರೂ ಸಂಭ್ರಮಿಸಲು ಬಾಲಕನೇ ಇರಲಿಲ್ಲ !
ಎಸೆಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆ ಯಲ್ಲಿದ್ದ ಸುಳ್ಯ ತಾಲೂಕಿನ ಬೆಳ್ಳಾರೆ ಕೆಪಿಎಸ್‌ನ ಎಸೆಸೆಲ್ಸಿ ವಿದ್ಯಾರ್ಥಿ, ಬೆಳ್ಳಾರೆ ಗ್ರಾಮದ ಉಮ್ಮಿಕ್ಕಳ ನಿವಾಸಿ ಅಬ್ದುಲ್ ರಾಝೀಕ್ ಎ. 11ರಂದು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ. ಬೆಳ್ಳಾರೆಯಿಂದ ಕುಂಡಡ್ಕದ ಅಜ್ಜಿ ಮನೆಗೆ ಸ್ಕೂಟಿಯಲ್ಲಿ ಸಹಸವಾರನಾಗಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.
ಘಟನೆ ನಡೆದು ಒಂದು ತಿಂಗಳು ಸಮೀಪಿಸುತ್ತಿದ್ದು ಇದೀಗ ಫಲಿತಾಂಶ ಬಂದಿದೆ. ರಾಝೀಕ್ 370 ಅಂಕ ಪಡೆದು ಉತ್ತೀರ್ಣನಾಗಿ ದ್ದಾನೆ. ಮನೆ ಮಂದಿ ಮಾತ್ರ ಫಲಿತಾಂಶ ಕಂಡು ಸಂಭ್ರಮಿಸಲು ಮಗನೇ ಇಲ್ಲ ಎಂದು ದುಃಖ ತೋಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.