Health; ರೋಗಮುಕ್ತ ಸಮಾಜಕ್ಕಾಗಿ ಆರೋಗ್ಯಯುತ ಆಹಾರ ಕ್ರಮ


Team Udayavani, May 11, 2024, 6:30 AM IST

1—–ewqeq

ದೇಶದ ನಾಗರಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೂರಕವಾದ ಹಲವು ಮಹತ್ವದ ಸಲಹೆಗಳನ್ನು ಒಳಗೊಂಡ ಆಹಾರ ಪದ್ಧತಿಯ ಕುರಿತಾಗಿನ ಮಾರ್ಗಸೂಚಿಯೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನ ಸಂಸ್ಥೆ (ಐಸಿಎಂಆರ್‌) ಬಿಡುಗಡೆ ಮಾಡಿದೆ. ಈ ಆಹಾರ ಮಾರ್ಗಸೂಚಿಯನ್ನು ಪಾಲಿಸಿದ್ದೇ ಆದಲ್ಲಿ ಸದ್ಯ ದೇಶದ ಜನರು ಎದುರಿಸುತ್ತಿರುವ ಗಂಭೀರ ಕಾಯಿಲೆಗಳ ಸಹಿತ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.

ದೇಶದ ಜನರ ಆರೋಗ್ಯ ರಕ್ಷಣೆ, ಬದಲಾದ ಜೀವನಶೈಲಿ, ಹವಾಮಾನ ಬದಲಾವಣೆಯಿಂದಾಗಿ ಜನರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮ, ಯುವಜನತೆಯಲ್ಲಿ ದೇಹದಾರ್ಡ್ಯದ ಬಗೆಗೆ ಹೆಚ್ಚುತ್ತಿರುವ ಕಾಳಜಿ, ಜಂಕ್‌ ಫ‌ುಡ್‌ ಮೇಲಣ ಅತಿಯಾದ ವ್ಯಾಮೋಹ ಮತ್ತಿತರ ಎಲ್ಲ ವಿಷಯಗಳನ್ನು ಗಮನದಲ್ಲಿರಿಸಿ ಐಸಿಎಂಆರ್‌ ಈ ಆಹಾರ ಕ್ರಮದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಕಳೆದೊಂದು ದಶಕದಿಂದ ದೇಶದಲ್ಲಿ ಹಲವಾರು ಹಳೆಯ ಕಾಯಿಲೆಗಳು ಮರುಕಳಿಸಿರುವುದು, ಹೊಸ ಸಾಂಕ್ರಾಮಿಕ ಕಾಯಿಲೆಗಳು ಜನರನ್ನು ಬಾಧಿಸತೊಡಗಿರುವುದು ಮತ್ತು ಹದಿಹರೆಯದಲ್ಲೇ ಮಧುಮೇಹ, ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆಹಾರ ಮಾರ್ಗಸೂಚಿ ಹೆಚ್ಚಿನ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ಆಹಾರ ಕ್ರಮದ ಮಾರ್ಗಸೂಚಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಆಹಾರಗಳು ಮತ್ತು ಅವುಗಳ ಸೇವನೆಯಿಂದ ಮಾನವ ದೇಹದ ಅಂಗಾಂಗಗಳಿಗೆ ಎದುರಾಗಬಹುದಾದ ಅಪಾಯಗಳ ಬಗೆಗೂ ಜನರಿಗೆ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಆಹಾರ ಸೇವನೆಯ ಪ್ರಮಾಣ, ಯಾವೆಲ್ಲ ಆಹಾರಗಳನ್ನು ವರ್ಜಿಸಬೇಕು ಎಂಬ ಪಟ್ಟಿಯನ್ನೂ ಈ ಮಾರ್ಗಸೂಚಿ ಒಳಗೊಂಡಿದೆ. ಉಪ್ಪು ಮತ್ತು ಸಕ್ಕರೆಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವನೆ, ಸಂಸ್ಕರಿತ ಆಹಾರ ಸೇವನೆಗೆ ಕಡಿವಾಣ, ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಇರುವ ಆಹಾರ ವಸ್ತುಗಳ ಸೇವನೆಯಿಂದ ದೂರವುಳಿಯಬೇಕು, ಸಮತೋಲಿತ ಆಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತ ಎಂದು ಮಾರ್ಗಸೂಚಿಯಲ್ಲಿ ಜನರಿಗೆ ಕಿವಿಮಾತು ಹೇಳಲಾಗಿದೆ.

ದೇಶದ ಜನರನ್ನು ಕಾಡುತ್ತಿರುವ ಶೇ. 56.4ರಷ್ಟು ಕಾಯಿಲೆಗಳಿಗೆ ಅನಾರೋಗ್ಯಕರ ಆಹಾರ ಸೇವನೆಯೇ ಕಾರಣ ಎಂದು ಬೆಟ್ಟು ಮಾಡಿರುವ ಐಸಿಎಂಆರ್‌, ಜಂಕ್‌ಫ‌ುಡ್‌, ಸಂಸ್ಕರಿತ ಆಹಾರಗಳು, ಕರಿದ ತಿಂಡಿತಿನಿಸುಗಳು, ಬೇಕರಿ ಉತ್ಪನ್ನಗಳ ಸೇವನೆಗೆ ನಿಯಂತ್ರಣ ಹೇರುವಂತೆ ಸಲಹೆ ನೀಡಿದೆ. ದೇಹದಾರ್ಡ್ಯಕ್ಕಾಗಿ ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಸ್ವೀಕರಿಸುವುದು ಸರಿಯಲ್ಲ. ಇಂತಹ ಅಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆಯಿಂದ ಕಿಡ್ನಿಗೆ ಹಾನಿ, ಮೂಳೆ ಖನಿಜ ನಷ್ಟ ಸಹಿತ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿದೆ. ದೇಶದಲ್ಲಿ ಕಳೆದ ಕೆಲವು ದಶಕಗಳಿಂದೀಚೆಗೆ ರಕ್ತದೊತ್ತಡ, ಮಧುಮೇಹ ಸಾಮಾನ್ಯವಾಗಿದ್ದು ಎಲ್ಲ ಹರೆಯದವರನ್ನೂ ಬಾಧಿಸುತ್ತಿದೆ. ಈ ಸಮಸ್ಯೆಗೆ ನಮ್ಮ ಆಹಾರಕ್ರಮವೇ ಮೂಲಕಾರಣ ಎಂದು ವೈದ್ಯಕೀಯ ಲೋಕ ಪದೇಪದೆ ಎಚ್ಚರಿಸುತ್ತಲೇ ಬಂದಿದ್ದರೂ ಜನರು ಇತ್ತ ಹೆಚ್ಚಿನ ಗಮನಹರಿಸುತ್ತಿಲ್ಲ. ಇದೇ ವೇಳೆ ಆಹಾರ ಉತ್ಪಾದನೆ, ಸಂಸ್ಕರಣೆಯ ಸಂದರ್ಭದಲ್ಲಿ ವಿಪರೀತ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದ್ದು ಇವು ಕೂಡ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ವರ್ಷಗಳುರುಳಿದಂತೆ ದೇಶದ ಜನರನ್ನು ಹೊಸ ಹೊಸ ಕಾಯಿಲೆಗಳು ಬಾಧಿಸಲಾರಂಭಿಸಿವೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ ಎಚ್ಚೆತ್ತುಕೊಳ್ಳುವ ಬದಲಾಗಿ ಪ್ರತಿಯೋರ್ವರು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಆರೋಗ್ಯವಂತರಾಗಿ ತಮ್ಮ ಭವಿಷ್ಯದ ಜೀವನವನ್ನು ಸಾಗಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಐಸಿಎಂಆರ್‌ ಬಿಡುಗಡೆ ಮಾಡಿರುವ ಆಹಾರ ಮಾರ್ಗಸೂಚಿಯನ್ನು ಪಾಲಿಸಿದ್ದೇ ಆದಲ್ಲಿ ರೋಗಮುಕ್ತ ಸಮಾಜದ ಕನಸು ಸಾಕಾರಗೊಳ್ಳಲು ಸಾಧ್ಯ.

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.