Congress ಜತೆ ಹೋಗಬೇಡಿ, ಅಜಿತ್, ಶಿಂಧೆ ಜತೆ ಸೇರಿ: ಪ್ರಧಾನಿ ಮೋದಿ
ಎನ್‌ಸಿಪಿ (ಶರದ್ ಬಣ) ಹಾಗೂ ಶಿವಸೇನೆ (ಉದ್ದವ್ ಬಣ) ನಾಯಕರು ಮತ್ತು ಕಾರ್ಯಕರ್ತರಿಗೆ ಸಲಹೆ
Team Udayavani, May 11, 2024, 6:40 AM IST
ಹೊಸದಿಲ್ಲಿ: “ನಕಲಿ ಎನ್‌ಸಿಪಿ ಮತ್ತು ನಕಲಿ ಶಿವಸೇನೆಯ ಜತೆಗಿದ್ದು ಲೋಕಸಭೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಜತೆಗೆ ವಿಲೀನಗೊಂಡು ಸಾಯುವ ಬದಲು, ಅಜಿತ್ ಪವಾರ್ ಜತೆಗೋ ಏಕನಾಥ ಶಿಂಧೆ ಜತೆಗೋ ಕೈ ಜೋಡಿಸಿ’ ಹೀಗೆಂದು ಎನ್‌ಸಿಪಿ (ಶರದ್ ಬಣ) ಹಾಗೂ ಶಿವಸೇನೆ (ಉದ್ದವ್ ಬಣ) ನಾಯಕರು ಮತ್ತು ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ಮಹಾರಾಷ್ಟ್ರದ ನಂದೂರ್‌ಬರ್‌ನಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಮಾತನಾಡಿರುವ ಮೋದಿ, ಶರದ್ ಪವಾರ್ ಹೆಸರನ್ನು ಉಲ್ಲೇಖೀಸದೆಯೇ “40-50 ವರ್ಷಗಳಿಂದ ರಾಜಕಾರಣದಲ್ಲಿ ಸಕ್ರಿಯ ರಾಗಿರುವ ದೊಡ್ಡ ನಾಯಕರೊಬ್ಬರು ಬಾರಾಮತಿ ಯಲ್ಲಿ ಚುನಾವಣೆ ನಡೆದ ಬಳಿಕ ಏನಾಗಬಹುದು ಎಂದು ಚಿಂತೆಗೀಡಾಗಿದ್ದಾರೆ. ಜೂ.4ರ ಬಳಿಕ ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳು ತಮ್ಮ ಉಳಿವಿಗಾಗಿ ಕಾಂಗ್ರೆಸ್ ಜತೆಗೆ ವಿಲೀನವಾಗಲಿವೆ ಎಂದೂ ಹೇಳಿಕೆ ನೀಡುತ್ತಾರೆ.! ಇದರ ಅರ್ಥ ಈ ನಕಲಿ ಎನ್‌ಸಿಪಿ ಮತ್ತು ನಕಲಿ ಶಿವಸೇನೆ ಕಾಂಗ್ರೆಸ್‌ಗೆ ವಿಲೀನವಾಗಲು ಈಗಾಗಲೇ ಯೋಜಿಸಿವೆ ಎಂಬುದಾಗಿದೆ. ಇಂಥ ಪಕ್ಷಗಳ ಜತೆಗಿದ್ದು ಕಾಂಗ್ರೆಸ್ ಜತೆಗೆ ವಿಲೀನವಾಗುವ ಬದಲು ಶಿಂಧೆ ಜತೆಗೆ ಬನ್ನಿ’ ಎಂದು ಆಹ್ವಾನಿಸಿದ್ದಾರೆ, ಹಿಂದೂ ವಿರೋಧಿ: ಕಾಂಗ್ರೆಸ್ ಹಿಂದೂಗಳ ನಂಬಿಕೆ ಅಂತ್ಯಗೊಳಿಸಲು ಪಿತೂರಿ ರೂಪಿಸಿದೆ. ರಾಷ್ಟ್ರದ ಬಗ್ಗೆ ಯಾವುದೇ ಚಿಂತೆಯೂ ಇಲ್ಲ. ಶೆಹಜಾದಾ (ರಾಹುಲ್)ನ ಸಲಹೆಗಾರ ದಕ್ಷಿಣ ಭಾರತದ ಜನರು ಆಫ್ರಿಕನ್ನ ರಂತೆ ಕಾಣುತ್ತಾರೆ ಎನ್ನುತ್ತಾರೆ. ಈಗ ಚರ್ಮದ ಬಣ್ಣದ ಮೇಲೆ ಯಾರು ಭಾರತೀಯರೆಂದು ಕಾಂಗ್ರೆಸ್ ನಿರ್ಧರಿಸುತ್ತಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಶರದ್ ಹೇಳಿದ್ದೇನು ?
ಮುಂದಿನ ಕೆಲವು ವರ್ಷಗಳಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ನಿಕಟ ಸಂಬಂಧ ಹೊಂದಲಿವೆ. ಅಥವಾ ತಮ್ಮ ಪಕ್ಷಕ್ಕೆ ಉತ್ತಮ ಆಯ್ಕೆ ಎಂದು ಪರಿಗಣಿಸಿದರೆ ಕಾಂಗ್ರೆಸ್ ಜತೆಗೆ ವಿಲೀನವಾಗಲೂಬಹುದು ಎಂದು ಶರದ್ ಪವಾರ್ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಮೋದಿ ವಾಗ್ಧಾಳಿ ನಡೆಸಿದ್ದಾರೆ.
4ನೇ ಹಂತ: ಇಂದು ಬಹಿರಂಗ ಪ್ರಚಾರ ಅಂತ್ಯ
10 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 96 ಲೋಕಸಭಾ ಕ್ಷೇತ್ರಗಳಿಗೆ ಮೇ 13ರಂದು 4ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ
Tragedy: ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಪೌರ ಕಾರ್ಮಿಕರ ದುರಂತ ಅಂತ್ಯ
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.